RCB vs DC: ಆರ್‌ಸಿಬಿ 'ಪಂಚ್‌'ಗೆ ಡೆಲ್ಲಿ ಡುಬ್ಕಿ: ಪ್ಲೇ ಆಫ್‌ ಬಾಗಿಲಿನಲ್ಲಿ ನಿಲ್ಲಲು ಇವೇ ಪ್ರಮುಖ ಕಾರಣಗಳು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ 2024ರಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಸೊಗಸಾದ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಆರ್‌ಸಿಬಿ ಡೆಲ್ಲಿ ತಂಡವನ್ನು ಕಟ್ಟಿ ಹಾಕಿ ಅಂಕ ಪಟ್ಟಿಯಲ್ಲಿ ಭರ್ಜರಿ ಬಡ್ತಿ ಪಡೆದುಕೊಂಡಿದೆ. 47 ರನ್‌ಗಳಿಂದ ಪಂದ್ಯವನ್ನು ಗೆದ್ದ ಫಾಫ್‌ ಪಡೆ ಪ್ಲೇ ಆಫ್‌ ರೇಸ್‌ನಲ್ಲಿ ಜೀವಂತವಾಗಿದೆ.

ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 187 ರನ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್‌ಗಲ್ಲಿ 140 ರನ್‌ ಸೇರಿಸಿ ಸೋಲು ಕಂಡಿತು. ಈ ಗೆಲುವಿನ ಮೂಲಕ ಆರ್‌ಸಿಬಿ ತಂಡದ ನೆಟ್‌ ರನ್‌ ರೇಟ್‌ ಸಹ ಇಂಪ್ರೂ ಆಗಿದೆ. ಹಾಗಿದ್ದರೆ ಭಾನುವಾ ನಡೆದ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗೆ ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

RCB vs DC RCB Clinch Fifth Consecutive Victory Keeping Playoff Dreams Alive

ಒತ್ತಡವನ್ನು ಮೆಟ್ಟಿನಿಂತ ಬ್ಯಾಟರ್ಸ್‌

ಸಾಮಾನ್ಯವಾಗಿ ಆರ್‌ಸಿಬಿ ಅಂದರೆ ಅದು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಹೆಚ್ಚಿನ ಡಿಪೆಂಡೆನ್ಸಿ ಕಾಣಿಸುತ್ತದೆ. ಮಹತ್ವದ ಪಂದ್ಯದಲ್ಲಿ ಆರ್‌ಸಿಬಿಯ ಸ್ಟಾರ್‌ ಆಟಗಾರ ವಿರಾಟ್ 13 ಎಸೆತಗಳಲ್ಲಿ 27 ರನ್ ಬಾರಿಸಿ ಔಟ್ ಆದರು. ಇವರು ನಾಲ್ಕನೇ ಓವರ್‌ನಲ್ಲಿ ಔಟ್‌ ಆದರು. ಸ್ಟಾರ್‌ ಬ್ಯಾಟರ್‌ ಔಟ್ ಆದರೂ ಆ ಒತ್ತಡವನ್ನು ತಮ್ಮ ಮೇಲೆ ತೆಗೆದುಕೊಳ್ಳದೇ ಆಡಿದ ಆರ್‌ಸಿಬಿ ಬ್ಯಾಟರ್‌ ಅಬ್ಬರಿಸಿದರು. ಮಿಡ್ಲ್‌ ಆರ್ಡ್‌ ಬ್ಯಾಟರ್‌ಗಳು ಜವಾಬ್ದಾರಿ ಅರಿತು ಬ್ಯಾಟ್ ಮಾಡಿದರು. ಅಲ್ಲದೆ ಲೂಸ್ ಬೌಲ್‌ಗಳಿಗೆ ಬಿಗ್‌ ಹಿಟ್ ಬಾರಿಸಿ ರನ್ ರೇಟ್ ಹಿಗ್ಗಿಸುತ್ತಾ ಸಾಗಿದರು. ಇದರ ಪರಿಣಾಮವೇ ಆರ್‌ಸಿಬಿ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತು.

ಸತತವಾಗಿ ಆರ್ಭಟಿಸುತ್ತಿರುವ ರಜತ್ ಪಟಿದಾರ್‌

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಿಡ್ಲ್ ಅರ್ಡರ್‌ ಆಧಾರ ಸ್ಥಂಬದಂತೆ ಕಾಣಿಸಿಕೊಂಡಿರುವ ರಜತ್ ಪಟಿದಾರ್‌, ನಿಜಕ್ಕೂ ಒಳ್ಳೆಯ ಟೈಮ್‌ನಲ್ಲಿ ಪಾರ್ಟಿಗೆ ಜಾಯಿನ್‌ ಆಗಿದ್ದರೆ. ಸತತವಾಗಿ ತಂಡಕ್ಕೆ ನೆರವಾಗುತ್ತಿರುವ ಈ ಪ್ಲೇಯರ್‌ ತಂಡದ, ಬ್ಯಾಟಿಂಗ್ ಚಿಂತೆಯನ್ನು ದೂರ ಮಾಡಿದ್ದಾರೆ. ಡೆಲ್ಲಿ ವಿರುದ್ದದ ಪಂದ್ಯದಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರಜತ್ ಪಟಿದಾರ್‌, ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಇವರು 32 ಎಸೆತಗಳಲ್ಲಿ 52 ರನ್‌ ಸಿಡಿಸಿ ತಂಡಕ್ಕೆ ನೆರವಾದರು.

RCB vs DC RCB Clinch Fifth Consecutive Victory Keeping Playoff Dreams Alive

ಜವಾಬ್ದಾರಿ ಅರಿತು ಆಡಿದ ವಿದೇಶಿ ಬೌಲರ್ಸ್‌

ಪಂದ್ಯದ ಮಹತ್ವವನ್ನು ಅರಿತು ವಿದೇಶಿ ಬೌಲರ್‌ಗಳು ಸಹ ಬೌಲಿಂಗ್ ನಡೆಸಿದರು. ಟೂರ್ನಿಯುದಕ್ಕೂ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡಿದ್ದ ಆರ್‌ಸಿಬಿ ಬೌಲರ್ಸ್‌ ಲಯ ಬದ್ಧ ದಾಳಿ ಸಂಘಟಿಸಿದರು. ಲಾಕಿ ಫಾರ್ಗ್ಯೂಸನ್‌ ಹಾಗೂ ಕ್ಯಾಮರೂನ್‌ ಗ್ರೀನ್‌ ನಿಜಕ್ಕೂ ಶಿಸ್ತು ಬದ್ಧ ದಾಳಿ ನಿರ್ವಹಿಸಿದರು. ಇವರಿಬ್ಬರೂ ಕೂಡಿ ಎಂಟು ಓವರ್ ಬೌಲ್‌ ಮಾಡಿ 42 ರನ್‌ ನೀಡಿ ತಂಡಕ್ಕೆ ನೆರವಾದರು. ಲಾಕಿ 2, ಕ್ಯಾಮರೂನ್‌ ಗ್ರೀನ್‌ 1 ವಿಕೆಟ್‌ ಕಬಳಿಸಿದರು.

ಯಶ್‌ ರಾಕಿಂಗ್

ಆರ್‌ಸಿಬಿ ತಂಡ ಪ್ರಮುಖ ವೇಗದ ಬೌಲರ್‌ ಯಶ್‌ ದಯಾಳ್‌ ಪಂದ್ಯದ ಮಹತ್ವವನ್ನು ಅರಿತು ಬೌಲಿಂಗ್ ನಡೆಸಿದರು. 3.1 ಓವರ್‌ಗಳಲ್ಲಿ 20 ರನ್‌ ನೀಡಿದ ದಯಾಳ್ ಮೂರು ಪ್ರಮುಖ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು. ಅಲ್ಲದೆ ಡೆಲ್ಲಿ ತಂಡದ ಆರಂಭಿಕ ಆಟಗಾರ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಅವರ ರನ್‌ ಔಟ್‌ ಮಾಡಿ ಗಮನ ಸೆಳೆದರು. ಇವರ ಪ್ರದರ್ಶನ ತಂಡಕ್ಕೆ ಬೂಸ್ಟ್‌ ನೀಡಿದೆ.

RCB vs DC RCB Clinch Fifth Consecutive Victory Keeping Playoff Dreams Alive

ಮಹತ್ವದ ಟೈಮ್‌ಗೆ ಪಾರ್ಟಿಗೆ ಬಂದ ಪ್ಲೇಯರ್ಸ್‌

ಸರಿಯಾದ ಸಮಯದಲ್ಲಿ ಆರ್‌ಸಿಬಿ ತಂಡದ ಪ್ಲೇಯರ್ಸ್‌ ಎಲ್ಲ ಪಾರ್ಟಿಗೆ ಬಂದಿದ್ದಾರೆ. ವಿಲ್‌ ಜಾಕ್ಸ್‌, ಕ್ಯಾಮರೂನ್‌ ಗ್ರೀನ್‌, ರಜತ್‌ ಪಟಿದಾರ್‌, ಯಶ್‌ ದಾಯಳ್, ಸ್ವಪ್ನಿಲ್ ಸಿಂಗ್ ಸರಿಯಾದ ಸಮಯದಲ್ಲಿ ಲಯಕ್ಕೆ ಮರಳಿದ್ದಾರೆ. ಇನ್ನು ಫೀಲ್ಡಿಂಗ್‌ನಲ್ಲಿ ಆರ್‌ಸಿಬಿ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಕ್ಯಾಚ್‌ ಹಿಡಿಯುವುದರಿಂದ ಹಿಡಿದು, ಡೈರೆಕ್ಟ್‌ ಥ್ರೋ ಮಾಡುವುದರ ಒರೆಗೂ ಆರ್‌ಸಿಬಿ ಪ್ಲೇಯರ್ಸ್‌ ಮಿಂಚಿದ್ದಾರೆ. ಇದರ ಪರಿಣಾಮವೇ ಆರ್‌ಸಿಬಿ ಪ್ಲೇ ಆಫ್‌ ರೇಸ್‌ನಲ್ಲಿ ಜೀವಂತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+