RCB vs CSK: ಆರ್‌ಸಿಬಿ ಪ್ಲೇಆಫ್‌ ತಲುಪುತ್ತಾ? ಶ್ರೇಯಾಂಕಾ ಪಾಟೀಲ್‌ ಹೇಳಿದ್ದೇನು?

ಐಪಿಎಲ್ 2024ರ ಆವೃತ್ತಿಯಲ್ಲಿ ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದು ಪ್ಲೇ ಆಫ್ ಕನಸನ್ನೇ ಮರೆತಿದ್ದ ಆರ್‌ಸಿಬಿ ಬಳಿಕ ಸತತ ಐದು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದು, ಪ್ಲೇಆಫ್ ಕನಸು ಜೀವಂತವಾಗಿರಿಸಿಕೊಂಡಿದೆ.

ಕೆಕೆಆರ್ ಮಾತ್ರ ಸದ್ಯ ಪ್ಲೇಆಫ್‌ ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದು, 7 ತಂಡಗಳು ಉಳಿದ ಮೂರು ಸ್ಥಾನಗಳಿಗೆ ಪೈಪೋಟಿ ನಡೆಸುತ್ತಿವೆ. ಅದೃಷ್ಟ ಕೈಹಿಡಿದು, ಸಿಎಸ್‌ಕೆ ವಿರುದ್ಧ ಗೆದ್ದರೆ ಆರ್ ಸಿಬಿ ಪ್ಲೇಆಫ್ ತಲುಪುದು ಖಚಿತವಾಗಿದೆ.

RCB vs CSK Shreyanka Patil Expresses Hope for RCB s Qualification in IPL 2024 Playoffs

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಬಳಿಕ ಆರ್‌ಸಿಬಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಮೇ 18ರಂದು ನಡೆಯಲಿರುವ ಆರ್ ಸಿಬಿ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಎದುರಿಸಲಿದ್ದು, ಎರಡೂ ತಂಡಗಳಿಗೆ ಪ್ಲೇಆಫ್‌ ತಲುಪಲು ಇದು ಕೊನೆಯ ಅವಕಾಶವಾಗಿದೆ.

ಆರ್‌ಸಿಬಿ ಪ್ಲೇ ಆಫ್ ಲೆಕ್ಕಾಚಾರ

ಎಲ್‌ಎಸ್‌ಜಿ, ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಉಳಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಸೋತು, ಸನ್‌ರೈಸರ್ಸ್ ಹೈದರಾಬಾದ್ ಉಳಿದ ಎರಡು ಪಂದ್ಯಗಳಲ್ಲಿ ಒಂದು ಗೆದ್ದರೆ, ಸಿಎಸ್‌ಕೆ ಅಥವಾ ಆರ್ ಸಿಬಿ ಪ್ಲೇ ಆಫ್ ತಲುಪಲು ಅವಕಾಶ ಹೆಚ್ಚಿರುತ್ತದೆ.

ಆದರೆ ಸಿಎಸ್‌ಕೆ ವಿರುದ್ಧ ಆರ್ ಸಿಬಿ ದೊಡ್ಡ ಅಂತರದಲ್ಲಿ ಗೆದ್ದು, ರನ್‌ರೇಟ್ ಉತ್ತಮ ಪಡಿಸಿಕೊಂಡರೆ ಮಾತ್ರ ಮುಂದಿನ ಹಂತಕ್ಕೆ ಪ್ರವೇಶ ಸಿಗಲಿದೆ. 18 ಕ್ಕೂ ಹೆಚ್ಚು ರನ್ ಅಂತರದಲ್ಲಿ ಅಥವಾ ಸಿಎಸ್‌ಕೆ ನೀಡುವ ಟಾರ್ಗೆಟ್ ಅನ್ನು 18.1 ಓವರ್ ನಲ್ಲಿ ಚೇಸ್ ಮಾಡಿದರೆ ಸಿಎಸ್‌ಕೆಗಿಂತ ಆರ್ ಸಿಬಿ ರನ್‌ರೇಟ್ ಉತ್ತಮವಾಗಲಿದೆ.

ಶ್ರೇಯಾಂಕಾ ಪಾಟೀಲ್‌ ಹೇಳಿದ್ದೇನು?

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ಗೆದ್ದ ಬಳಿಕ ಟ್ವೀಟ್ ಮಾಡಿರುವ ಆರ್ ಸಿಬಿ ಮಹಿಳಾ ತಂಡದ ಸ್ಟಾರ್ ಪ್ಲೇಯರ್ ಶ್ರೇಯಾಂಕಾ ಪಾಟೀಲ್ ಮುಂಬೈ ಇಂಡಿಯನ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಲಿದೆ, ನಾವು ಪ್ಲೇ ಆಫ್ ತಲುಪಲು ಎಷ್ಟು ರನ್ ಅಂತರದಲ್ಲಿ ಗೆಲ್ಲಬೇಕು ಎಂದು ಯಾರಾದರೂ ಹೇಳಿ. ಓಹ್, ಭರವಸೆ ಇದೆ. ಎಂದು ಹೇಳಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕೂಡ ಸತತ ಸೋಲುಗಳ ಬಳಿಕ ಫಿನಿಕ್ಸ್‌ನಂತೆ ಎದ್ದು ಬಂದಿದ್ದ ಆರ್ ಸಿಬಿ ಬಳಿಕ ಎಲ್ಲಾ ಪಂದ್ಯಗಳನ್ನು ಗೆದ್ದು, ಕಪ್ ಎತ್ತಿಹಿಡಿದಿತ್ತು. ಐಪಿಎಲ್‌ನಲ್ಲಿ ಕೂಡ ಅದೇ ರೀತಿಯ ಘಟನೆ ಮರುಕಳಿಸುತ್ತಾ ಎನ್ನುವ ಕುತೂಹಲ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+