Get Updates
Get notified of breaking news, exclusive insights, and must-see stories!

RCB Vs CSK Match: ಬೆಂಗಳೂರಿನಲ್ಲಿ ಆರ್‌ಸಿಬಿ-ಸಿಎಸ್‌ಕೆ ಪಂದ್ಯ; ಟಿಕೆಟ್ ದರ ಎಷ್ಟಿದೆ ಗೊತ್ತಾ?, ಇಲ್ಲಿದೆ ಪಟ್ಟಿ

RCB Vs CSK Match: ಐಪಿಎಲ್‌ 2025ರ 52ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್‌ ಪಂದ್ಯ ಎಂ.ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಕದನ ವೀಕ್ಷಣೆ ಮಾಡಲು ಅಭಿಮಾನಿಗಳ ದಂಡೇ ಬೆಂಗಳೂರಿನತ್ತ ಹರಿದುಬರುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಟಿಕೆಟ್‌ ದರವನ್ನು ದುಪ್ಪಟ್ಟು ಮಾಡಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಆರ್‌ಸಿಬಿ ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ ಮೂರರಲ್ಲಿ ಸೋತು, ಏಳರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 14 ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಅಲಂಕರಿಸಿದೆ. ಇನ್ನೂ ಚೆನ್ನೇ ಸೂಪರ್ ಕಿಂಗ್ಸ್‌ ತಂಡವು ಆಡಿದ 10 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆದ್ದು, ಎಂಟರಲ್ಲಿ ಸೋಲು ಕಾಣುವ ಮೂಲಕ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಆದ್ದರಿಂದ ಇಂದಿನ ಪಂದ್ಯ ಸಿಎಸ್‌ಕೆಗೆ ಪ್ರಮುಖವಾಗಿಲ್ಲ.

RCB Vs CSK IPL Match in Bengaluru Know ticket price details and How to booking

ಆದರೆ, ಆರ್‌ಸಿಬಿ ಪ್ಲೇ ಆಫ್‌ ತಲುಪಲು ತುಂಬಾ ಪ್ರಮುಖವಾಗಿದೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಗೆದ್ಧೇ ಗೆಲ್ಲಬೇಕೆಂಬ ಹಠತೊಟ್ಟು ನಿಂತಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಉತ್ತಮ ರನ್‌ ರೇಟ್‌ ಕಾಯ್ದುಕೊಂಡು ಗೆದ್ದರೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳನ್ನು ಪಡೆಯುವ ಮೂಲಕ ಟಾಪ್‌ಗೇರುವುದಲ್ಲದೆ, ಪ್ಲೇ ಆಫ್‌ ಬಹುತೇಕ ಖಚಿತ ಆದಂತಾಗಲಿದೆ.

ಇನ್ನೂ ಯಾವಾಗಲೂ ಈ ಎರಡು ತಂಡಗಳ ನಡುವಿನ ಪಂದ್ಯ ವೀಕ್ಷಣೆ ಮಾಡಲು ಕ್ರೀಡಾಂಗಣದಲ್ಲಿ ಅತೀ ಹೆಚ್ಚು ಅಭಿಮಾನಿಗಳು ನೆರೆಯುತ್ತಾರೆ. ಅದರಲ್ಲೂ ಆರ್‌ಸಿಬಿ ಅಭಿಮಾನಿಗಳೇ ಹೆಚ್ಚಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಟಿಕೆಟ್‌ ದರವನ್ನು ಏರಿಕೆ ಮಾಡುತ್ತಲಿದ್ದಾರೆ. ಹಾಗೆಯೇ ಇಂದಿನ ಪಂದ್ಯಕ್ಕೂ ಸಹ ಟಿಕೆಟ್‌ ದರ ದುಪ್ಟಟ್ಟು ಮಾಡಲಾಗಿದೆ.

ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಎಂದರೆ ಅದು ಆರ್‌ಸಿಬಿ ಮಾತ್ರ. ಅದರಲ್ಲೂ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಪಂದ್ಯ ಇದ್ದರೆ, ಹೆಚ್ಚು ಅಭಿಮಾನಿಗಳನ್ನು ವೀಕ್ಷಣೆ ಮಾಡಲು ಆಗಮಿಸುತ್ತಾರೆ. ಹಾಗೆಯೇ ಇಂದು ಸಹ ಬೆಂಗಳೂರಿನಲ್ಲಿ ಪಂದ್ಯ ಇರುವುದರಿಂದ ಅಭಿಮಾನಿಗಳ ದಂಡೇ ನೆರೆದಿದೆ. ಮತ್ತೊಂದೆಡೆ ಟಿಕೆಟ್‌ ದರ ಕೂಡ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಟಿಕೆಟ್ ದರ

* ಕೆಇಐ ವೈರ್ಸ್ & ಕೇಬಲ್ಸ್ A ಸ್ಟ್ಯಾಂಡ್ - 2,300 ರೂಪಾಯಿ
* ಪ್ಯೂಮಾ B ಸ್ಟ್ಯಾಂಡ್ - 3,300 ರೂಪಾಯಿ
* ಬೋಟ್ C ಸ್ಟ್ಯಾಂಡ್ - 3,300 ರೂಪಾಯಿ
* ಕನ್ಫರ್ಮ್ ಟಿಕೆಟ್‌ D ಕಾರ್ಪೊರೇಟ್ - 3,300 ರೂಪಾಯಿ
* ಕನ್ಫರ್ಮ್ ಟಿಕೆಟಿ GT ಅನೆಕ್ಸ್ - 4000 ರೂಪಾಯಿ
* ಕತಾರ್ ಏರ್‌ವೇಸ್ ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ P1 - 6,000 ರೂಪಾಯಿ
* ಕತಾರ್ ಏರ್‌ವೇಸ್ E ಎಕ್ಸಿಕ್ಯುಟಿವ್ ಲಾಂಜ್ - 10,000 ರೂಪಾಯಿ
* ಬಿರ್ಲಾ ಎಸ್ಟೇಟ್ಸ್ ಬಿ.ಎಸ್.ಚಂದ್ರಶೇಖರ್ ಸ್ಟ್ಯಾಂಡ್ P ಟೆರೇಸ್ - 15,000 ರೂಪಾಯಿ
* ಕೆಇಐ ವೈರ್ಸ್ & ಕೇಬಲ್ಸ್ ಸೈಯ್ಯದ್ ಕಿರ್ಮಾನಿ ಸ್ಟ್ಯಾಂಡ್ P ಕಾರ್ಪೊರೇಟ್ - 25,000 ರೂಪಾಯಿ
* ಕತಾರ್ ಏರ್‌ವೇಸ್ ರಾಹುಲ್ ದ್ರಾವಿಡ್ ಪ್ಲಾಟಿನಂ ಲಾಂಜ್ - 25,000 ರೂಪಾಯಿ
* ಕತಾರ್ ಏರ್‌ವೇಸ್ ಜಿ.ಆರ್.ವಿಶ್ವನಾಥ್ ಸ್ಟ್ಯಾಂಡ್ P2 - 42,000 ರೂಪಾಯಿ

ಟಿಕೆಟ್ ಬುಕಿಂಗ್ ಮಾಡಬಹುದೆಲ್ಲಿ?

* iplt20.com
* Official Websites - RCB/CSK
* District App
* Paytm Insider

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+