RCB vs CSK: ಸಿಎಸ್‌ಕೆ ವಿರುದ್ಧ ಕಣಕ್ಕಿಳಿಯುತ್ತಾರ ಆರ್‌ಸಿಬಿ ಮಾರಕ ವೇಗಿ? ಇಲ್ಲಿದೆ ಮಹತ್ವದ ಅಪ್‌ಡೇಟ್‌

ಐಪಿಎಲ್ 2025ರ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಎರಡನೇ ಪಂದ್ಯ ಆಡಲು ಸೋಮವಾರ ಚೆನ್ನೈಗೆ ತಲುಪಿದೆ. ಮಾರ್ಚ್ 28ರಂದು ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಐಪಿಎಲ್‌ನ ಬಹುನಿರೀಕ್ಷಿತ ಪಂದ್ಯಗಳಲ್ಲಿ ಒಂದಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಕೂಡ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿದ್ದು ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ತವರಿನಲ್ಲೇ ಈ ಪಂದ್ಯ ನಡೆಯಲಿದ್ದು ಅಭಿಮಾನಿಗಳ ಹೆಚ್ಚಿನ ಪ್ರೋತ್ಸಾಹ ಕೂಡ ಸಿಗಲಿದ್ದು ಚೆಪಾಕ್‌ನಲ್ಲಿ ಆರ್ ಸಿಬಿ ವಿರುದ್ಧದ ಗೆಲುವಿನ ಸರಣಿಯನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.

rcb update about bhuvaneshwar kumar play against csk ipl 2025

2008ರಲ್ಲಿ ಆರ್ ಸಿಬಿ ಸಿಎಸ್‌ಕೆ ವಿರುದ್ಧ ಚೆನ್ನೈನಲ್ಲಿ ಗೆಲುವು ಸಾಧಿಸಿದ್ದು ಬಿಟ್ಟರೆ ಈವರೆಗೂ ಒಮ್ಮೆಯೂ ಸಿಎಸ್‌ಕೆ ವಿರುದ್ಧ ಅವರ ತವರಿನ ಅಂಗಳದಲ್ಲಿ ಆರ್ ಸಿಬಿ ಈವರೆಗೆ ಗೆದ್ದಿಲ್ಲ. ಆರ್ ಸಿಬಿ ಈ ಸೋಲಿನ ಸರಣಿಯನ್ನು ಮುರಿದು ಗೆಲುವು ಸಾಧಿಸಲು ಸಜ್ಜಾಗಿದೆ.

ಮಾರಕ ವೇಗಿ ಕಣಕ್ಕಿಳಿಯುವುದು ಖಚಿತ!

ಮೊದಲ ಪಂದ್ಯದಲ್ಲಿ ಆರ್ ಸಿಬಿ ತಂಡದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಕಣಕ್ಕಿಳಿಯಲಿಲ್ಲ, ಜ್ವರ ಇದ್ದ ಕಾರಣ ಅವರು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಅವರು ಹುಷಾರಾಗಿದ್ದು ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಈ ಮುನ್ಸೂಚನೆ ಕೊಟ್ಟಿದೆ. ಶೀಘ್ರದಲ್ಲೇ ಭುವಿ ಮೊದಲಿಗಿಂತ ಉತ್ತಮವಾಗಿ ವಾಪಸಾತಿ ಮಾಡಲಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫೋಟೊ ಹಂಚಿಕೊಂಡಿದೆ.

ಕಳೆದ ವರ್ಷದ ಸೋಲಿನ ಸೇಡು!

ಚೆನ್ನೈ ಸೂಪರ್ ಕಿಂಗ್ಸ್ ಹಲವು ಬಾರಿ ಆರ್ ಸಿಬಿ ವಿರುದ್ಧ ಗೆದ್ದಿರಬಹುದು. ಆದರೆ 2024ರ ಆವೃತ್ತಿಯಲ್ಲಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್ ಸಿಬಿ ಸಿಎಸ್‌ಕೆ ವಿರುದ್ಧದ ರೋಚಕ ಪಂದ್ಯದಲ್ಲಿ 27 ರನ್‌ಗಳಿಂದ ಗೆಲುವು ಸಾಧಿಸಿತ್ತು. ಈ ಮೂಲಕ ಸಿಎಸ್‌ಕೆಯನ್ನು ಟೂರ್ನಿಯಿಂದ ಹೊರಹಾಕಿ ತಾನು ಪ್ಲೇಆಫ್ ತಲುಪಿತ್ತು.

Take a Poll

ಈ ಬಾರಿ ಅದೇ ಪ್ರದರ್ಶನವನ್ನು ಮುಂದುವರೆಸುವ ವಿಶ್ವಾಸದಲ್ಲಿ ಆರ್ ಸಿಬಿ ಇದ್ದರೆ, ಕಳೆದ ವರ್ಷದ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಿಎಸ್‌ಕೆ ಕಾಯುತ್ತಿದೆ. ಕಳೆದ ಆವೃತ್ತಿಗೆ ಹೋಲಿಕೆ ಮಾಡಿದರೆ ಈ ಬಾರಿ ಆರ್ ಸಿಬಿ ಬೌಲಿಂಗ್ ಬಲಿಷ್ಠವಾಗಿದೆ. ಬ್ಯಾಟಿಂಗ್‌ ಕೂಡ ಉತ್ತಮವಾಗಿದ್ದು ಸಿಎಸ್‌ಕೆ ತಂಡಕ್ಕೆ ಮತ್ತೊಮ್ಮೆ ಸೋಲುಣಿಸಲು ಸಜ್ಜಾಗಿದೆ.

ಜೋಶ್ ಹೇಜಲ್‌ವುಡ್, ಯಶ್ ದಯಾಳ್‌ ಜೊತೆ ಭುವನೇಶ್ವರ್ ಕುಮಾರ್ ಕಣಕ್ಕಿಳಿಯಲಿದ್ದು ರಸಿಕ್ ದಾರ್ ಅವರನ್ನು ತಂಡದಿಂದ ಹೊರಗಿಡುವ ಸಾಧ್ಯತೆ ಇದೆ. ಸ್ಪಿನ್ ವಿಭಾಗದಲ್ಲಿ ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ ಜೊತೆ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಇದ್ದು ಚೆನ್ನೈನಲ್ಲಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+