RCB: ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲು.. ಆರ್‌ಸಿಬಿ ಗೆಲ್ಲಿಸುವುದರ ಜೊತೆಗೆ 9,000 ರನ್ ಪೂರೈಸಿದ ವಿರಾಟ್‌ ಕೊಹ್ಲಿ

RCB Vs DC IPL 2026: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್ 2026ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿಗೆ ಪ್ರಮುಖ ಕಾರಣ ಅಂದರೆ ಆರ್‌ಸಿಬಿ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿ.

ಟಾಸ್‌ ಗೆದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ 16.3 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 75 ರನ್‌ಗಳನ್ನು ಕಲೆಹಾಕಿತು. ಈ ಮೂಲಕ ಡೆಲ್ಲಿ ಕೋಟೆಯಲ್ಲಿ ಆರ್‌ಸಿಬಿ ಬೌಲರ್‌ಗಳು ಮಿಂಚಿದರು.

RCB Thrash DC by 9 Wickets in Indian Premier League 2026 Virat Kohli Creates 9000-Run History

ಮಿಂಚಿದ ಭುವಿ, ಹ್ಯಾಜಲ್‌ವುಡ್‌

ವೇಗಿ ಜೋಶ್ ಹ್ಯಾಜಲ್‌ವುಡ್ 4 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರು. ಇವರ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಡೆಲ್ಲಿ ಕೇವಲ 16.4 ಓವರ್‌ಗಳಲ್ಲಿ 75 ರನ್‌ಗಳಿಗೆ ಆಲೌಟ್ ಆಯಿತು. ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಪವರ್‌ಪ್ಲೇ ಅವಧಿಯಲ್ಲಿ ಕೇವಲ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಪವರ್‌ಪ್ಲೇ ಸ್ಕೋರ್ ಎಂಬ ಕೆಟ್ಟ ದಾಖಲೆಗೆ ಕಾರಣವಾಯಿತು. ಆದರೂ 75 ರನ್ ಗಳಿಸುವ ಮೂಲಕ ಐಪಿಎಲ್‌ನ ಕನಿಷ್ಠ ಮೊತ್ತದ (49 ರನ್) ಅವಮಾನದಿಂದ ಪಾರಾಯಿತು.

ವಿರಾಟ್‌ ಕೊಹ್ಲಿ ಹೊಸ ದಾಖಲೆ

76 ರನ್‌ಗಳ ಸಣ್ಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಕೇವಲ 6.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯಭೇರಿ ಬಾರಿಸಿತು. ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಐಪಿಎಲ್ ಇತಿಹಾಸದಲ್ಲೇ 9,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದರು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈ ದೊಡ್ಡ ಗೆಲುವಿನ ಮೂಲಕ ತನ್ನ ನೆಟ್ ರನ್ ರೇಟ್ ಅನ್ನು ಗಣನೀಯವಾಗಿ ಸುಧಾರಿಸಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಅವರು ಸೋಮವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಈ ಮ್ಯಾಜಿಕ್ ಸಂಖ್ಯೆಯನ್ನು ತಲುಪಿದ ಜಗತ್ತಿನ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.

ಪಂದ್ಯ ಆರಂಭಕ್ಕೂ ಮೊದಲು ಈ ದಾಖಲೆಗೆ ಕೇವಲ 11 ರನ್‌ಗಳ ಅಗತ್ಯವಿದ್ದ ವೇಳೆ ಪಂದ್ಯದ ಗೆಲುವಿನ ಸಿಕ್ಸರ್ ಬಾರಿಸುವ ಮೂಲಕ 9,012 ರನ್ ತಲುಪಿದರು. ಕೊಹ್ಲಿ ತಮ್ಮ ಕ್ರಿಕೆಟ್ ಜೀವನ ಆರಂಭಿಸಿದ ದೆಹಲಿಯಲ್ಲೇ ಈ ಸಾಧನೆ ಮಾಡಿರುವುದು ವಿಶೇಷ.

2008ರಿಂದಲೂ ಆರ್‌ಸಿಬಿ ತಂಡದ ಪರ ಆಡಿಕೊಂಡು ಬಂದಿರುವ ಕೊಹ್ಲಿ, 275 ಪಂದ್ಯಗಳಲ್ಲಿ 8 ಶತಕ ಮತ್ತು 66 ಅರ್ಧಶತಕಗಳ ನೆರವಿನಿಂದ ಈ ಸಾಧನೆ ಮಾಡಿದ್ದಾರೆ. ಐಪಿಎಲ್ 2026ರಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈವರೆಗೆ 8 ಇನ್ನಿಂಗ್ಸ್‌ಗಳಿಂದ 351 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದವರು

* ವಿರಾಟ್ ಕೊಹ್ಲಿ - 9,012 (275 ಪಂದ್ಯ)
* ರೋಹಿತ್ ಶರ್ಮಾ - 7,183 (276 ಪಂದ್ಯ)
* ಶಿಖರ್ ಧವನ್ - 6,769 (222 ಪಂದ್ಯ)
* ಡೇವಿಡ್ ವಾರ್ನರ್ - 6,565 (184 ಪಂದ್ಯ)
* ಕೆ.ಎಲ್. ರಾಹುಲ್ - 5,579 (152 ಪಂದ್ಯ)
* ಸುರೇಶ್ ರೈನಾ - 5,528 (205 ಪಂದ್ಯ)
* ಎಂ.ಎಸ್. ಧೋನಿ - 5,215 (262 ಪಂದ್ಯ)
* ಎಬಿ ಡಿವಿಲಿಯರ್ಸ್ - 5,162 (184 ಪಂದ್ಯ)
* ಕ್ರಿಸ್ ಗೇಲ್ - 4,965 (142 ಪಂದ್ಯ)
* ರಾಬಿನ್ ಉತ್ತಪ್ಪ - 4,952 (205 ಪಂದ್ಯ)

ವಿರಾಟ್ ಕೊಹ್ಲಿ ಅವರು 8,000 ದಿಂದ 9,000 ರನ್‌ಗಳ ಮೈಲಿಗಲ್ಲನ್ನು ತಲುಪಿದ ವೇಗವು ಅವರ ಆಧುನಿಕ ಟಿ20 ಬ್ಯಾಟಿಂಗ್ ಶೈಲಿಗೆ ಸಾಕ್ಷಿಯಾಗಿದೆ. ಪ್ರಸ್ತುತ ಪಟ್ಟಿಯಲ್ಲಿ ಕೊಹ್ಲಿ ಮತ್ತು ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ನಡುವೆ ಸುಮಾರು 1,800ಕ್ಕೂ ಹೆಚ್ಚು ರನ್‌ಗಳ ಬೃಹತ್ ಅಂತರವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+