ಆರ್‌ಸಿಬಿ ಇವತ್ತು ಸೋತು ಹೋದರೆ ಈ ಸಲ ಕಪ್... RCB VS PBKS

ಆರ್‌ಸಿಬಿ ತಂಡವನ್ನು ಜೀವಕ್ಕಿಂತ ಹೆಚ್ಚಾಗಿ ಹಚ್ಚಿಕೊಂಡಿದ್ದಾರೆ ಕೋಟಿ ಕೋಟಿ ಅಭಿಮಾನಿ ಬಳಗ. ಫುಟ್‌ಬಾಲ್ ತಂಡಗಳನ್ನೂ ಮೀರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಇದ್ದಾರೆ. ಇಡೀ ಇಂಡಿಯಾ ತುಂಬಾ ನಮ್ಮದೇ ಆರ್‌ಸಿಬಿ ಅಂದ್ರೆ ಹುಚ್ಚೆದ್ದು ಕುಣಿಯುತ್ತಾರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು. ವಿದೇಶಿ ನೆಲದಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದ್ರೆ ಅತಿಯಾದ ಪ್ರೀತಿ ಇದೆ. ಇಂತಹ ಸಮಯದಲ್ಲೇ, ಆರ್‌ಸಿಬಿ 2025ರ ಐಪಿಎಲ್ ಕಪ್‌ನ ಗೆಲ್ಲುತ್ತೆ ಅಂತಾ ಕಾಯುತ್ತಾ ಕುಳಿತಿದ್ದ ಅಭಿಮಾನಿಗಳಿಗೆ ಭೀಕರ ಆಘಾತವೇ ಎದುರಾಗಿದೆ...

ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಅಂತಾ ಡಿಸೈಡ್ ಆಗಿದ್ದಾರೆ ಅಭಿಮಾನಿಗಳು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ 2025ರ ಕಪ್ ಗೆಲ್ಲೋದು ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್. ಐಪಿಎಲ್ 18ನೇ ಸೀಸನ್ ಆರ್‌ಸಿಬಿ ತಂಡಕ್ಕೆ ಲಕ್ ಕೊಡುವುದು ಗ್ಯಾರಂಟಿ, ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಪಕ್ಕಾ ಕಪ್ ಗೆಲ್ಲುತ್ತೆ ಅಂತಾ ಹೇಳುತ್ತಾ ಇದ್ದಾರೆ ಎಲ್ಲರೂ. ಮತ್ತೊಂದ್ಕಡೆ ಆರ್‌ಸಿಬಿ ವಿರೋಧಿಗಳು ಮಾತ್ರ, ಕಪ್ ಗೆಲ್ಲೋದಿಲ್ಲ ಅಂತಾ ಭವಿಷ್ಯ ನುಡಿಯುತ್ತಿದ್ದಾರೆ. ಹೀಗಿದ್ದಾಗಲೇ, ಆರ್‌ಸಿಬಿ ಅಭಿಮಾನಿಗಳಿಗೆ ಆಘಾತ ಎದುರಾಗಿದೆ!

RCB Team Should Win Today s Match Against Punjab Kings In IPL 2025

ಆರ್‌ಸಿಬಿ ಅಭಿಮಾನಿಗಳಿಗೆ ಆಘಾತ ಎದುರಾಗಿದೆ...

ನಮ್ಮ ಆರ್‌ಸಿಬಿ ತಂಡದ ಅಬ್ಬರ ಆರಂಭದಲ್ಲಿ ಜೋರಾಗಿಯೇ ಇತ್ತು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025ರ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲೇ ಗೆದ್ದು ಬೀಗಿತ್ತು. ಹೀಗೆ ಆರ್‌ಸಿಬಿ ತಂಡ ಮೊದಲ ಪಂದ್ಯ ಗೆದ್ದ ನಂತರ, ಚೆನ್ನೈ ವಿರುದ್ಧ ಕೂಡ ಅದ್ಭುತವಾಗಿ ಗೆದ್ದು 17 ವರ್ಷಗಳ ದಾಖಲೆಯನ್ನೇ ಮುರಿದು ಹಾಕಿತ್ತು. ಹೀಗಿದ್ದಾಗಲೇ, ಆರ್‌ಸಿಬಿ ಇವತ್ತು ಸೋತು ಹೋದರೆ ಈ ಸಲ ಕಪ್...

ಆರ್‌ಸಿಬಿ ತಂಡಕ್ಕೆ ಇಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಮ್ಯಾಚ್ ಮಾಡು & ಇಲ್ಲವೇ ಮಡಿ ಎಂಬ ಪರಿಸ್ಥಿತಿ ತಂದಿದೆ. ಅದರಲ್ಲೂ ಆರ್‌ಸಿಬಿ ತಂಡವು ಐಪಿಎಲ್-2025ರ ಅಂಕಪಟ್ಟಿ ಅಂದ್ರೆ ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನಕ್ಕೆ ಕುಸಿದು ಬಿದ್ದಿದೆ. ಆಡಿರುವ 7 ಪಂದ್ಯದಲ್ಲಿ ಈಗಾಗಲೇ 3 ಮ್ಯಾಚ್ ಸೋತಿದೆ. ಗುಜರಾತ್ ತಂಡ 7 ಪಂದ್ಯ ಆಡಿ ಕೇವಲ 2 ಮ್ಯಾಚ್ ಸೋತು ಐಪಿಎಲ್-2025ರ ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿ ಇದೆ. ಹೀಗಿದ್ದಾಗ ಡೆಲ್ಲಿ ಕ್ಯಾಪಿಟಲ್ಸ್ ಕೂಡ 7 ಪಂದ್ಯ ಆಡಿ ಕೇವಲ 2 ಮ್ಯಾಚ್ ಸೋತಿದೆ, ಅದೇ ರೀತಿ ಪಂಜಾಬ್ ಕಿಂಗ್ಸ್ ಕೂಡ 7 ಪಂದ್ಯ ಆಡಿ ಕೇವಲ 2 ಮ್ಯಾಚ್ ಸೋತಿದೆ. ಹೀಗಿದ್ದಾಗಲೇ ಆರ್‌ಸಿಬಿ ತಂಡ ಇಂದು ಪಂಜಾಬ್ ಕಿಂಗ್ಸ್ ಎದುರು ಮತ್ತೆ ಸೋತು ಹೋದರೆ ಪರಿಸ್ಥಿತಿ ತೀವ್ರ ಆಘಾತ ನೀಡಲಿದೆ.

ಗೆದ್ದೇ ಗೆಲ್ಲಬೇಕಿದೆ ಆರ್‌ಸಿಬಿ.. ಆರ್‌ಸಿಬಿ..

ಹೌದು, ಆರ್‌ಸಿಬಿ ಅಂದ್ರೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ಎದುರು ಇವತ್ತು ಮ್ಯಾಚ್ ಗೆಲ್ಲದೇ ಹೋದರೆ ಐಪಿಎಲ್-2025 ಅಂಕಪಟ್ಟಿಯಲ್ಲಿ ಮತ್ತೆ 6ನೇ ಸ್ಥಾನಕ್ಕೆ ಕುಸಿಯಲಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೆ ಗೆದ್ದು ಉಪಾಂತ್ಯ ಪ್ರವೇಶ ಮಾಡುವುದು ಕೂಡ ಕಷ್ಟವಾಗಲಿದೆ. ಆ ಮೂಲಕ, ಈ ಸಲ ಕೂಡ ಕಪ್ ನಮ್ಮದಲ್ಲ ಎಂಬ ಸ್ಥಿತಿ ನಿರ್ಮಾಣ ಆಗಲಿದೆ ಎಂಬ ಭಯ ಆರ್‌ಸಿಬಿಯ ಕೋಟಿ ಕೋಟಿ ಅಭಿಮಾನಿಗಳ ಎದೆಯಲ್ಲಿ ಆವರಿಸಿದೆ. ಹೀಗಾಗಿ ಎಲ್ಲರ ಗಮನ ಇದೀಗ ಆರ್‌ಸಿಬಿ & ಪಂಜಾಬ್ ಕಿಂಗ್ಸ್ ಪಂದ್ಯದ ಮೇಲೆ ನೆಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+