14 ಪಾಯಿಂಟ್ಸ್ ಪಡೆದ ಆರ್‌ಸಿಬಿ ನಂಬರ್ 1 ತಂಡ, ಹೊಸ ಇತಿಹಾಸ ನಿರ್ಮಾಣ... RCB vs DC
18 ವರ್ಷಗಳಿಂದ ಐಪಿಎಲ್ ಅಖಾಡದಲ್ಲಿ ತನ್ನದೇ ಸಾಮ್ರಾಜ್ಯ ಸ್ಥಾಪನೆ ಮಾಡಿರುವ ನಮ್ಮ ಆರ್‌ಸಿಬಿ ತಂಡ, ಯಾವುದೇ ತಂಡ ಮಾಡದ ಸಾಧನೆಗಳನ್ನ ಮಾಡಿದೆ. ಕಪ್ ಗೆಲ್ಲದೆ ಇದ್ರು ಏನಂತೆ, ನಮ್ಮ ಆರ್‌ಸಿಬಿ ಮುಂದೆ ಯಾರದ್ದೂ ನಡೆಯೋದೆ ಇಲ್ಲ. ಅದರಲ್ಲೂ 2025ರ ಐಪಿಎಲ್ ಅಖಾಡದಲ್ಲಿ ನಮ್ಮ ಆರ್‌ಸಿಬಿ ತಂಡ ಭರ್ಜರಿ ಹವಾ ತೋರಿಸಿದ್ದು, 14 ಪಾಯಿಂಟ್ಸ್ ಪಡೆದ ಆರ್‌ಸಿಬಿ ನಂಬರ್ 1 ತಂಡವಾಗಿದೆ!
ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಪರ್ಮನೆಂಟ್ ಆಟಗಾರ, 18 ವರ್ಷಗಳಿಂದಲೂ ಆರ್‌ಸಿಬಿ ತಂಡಕ್ಕಾಗಿ ದುಡಿದಿದ್ದಾರೆ ನಮ್ಮ ಕಿಂಗ್ ವಿರಾಟ್ ಕೊಹ್ಲಿ. ಹೀಗಿದ್ದಾಗ 2025ರ ಕಪ್ ಗೆದ್ದು ಹವಾ ಎಬ್ಬಿಸಬೇಕು ಎಂಬ ಚಾಲೆಂಜ್ ಕೂಡ ಇದೆ. ವಿರಾಟ್ ಕೊಹ್ಲಿ ತಮ್ಮ ಎಲ್ಲಾ ಶಕ್ತಿ & ಬುದ್ಧಿ ಬಳಸಿ ಕಪ್ ಗೆಲ್ಲುವುದಕ್ಕೆ ಸಿದ್ಧರಾಗಿದ್ದಾರೆ. ರಜತ್ ಪಾಟಿದಾರ್ ಹೆಸರಿಗೆ ಮಾತ್ರ ಈಗ ರಾಯಲ್ ಚಾಲೆಂಜರ್ಸ್ ತಂಡದ ಕ್ಯಾಪ್ಟನ್ ಆಗಿದ್ದರೂ, ವಿರಾಟ್ ಕೊಹ್ಲಿ ನಿರ್ಧಾರ ಇಲ್ಲಿ ಫೈನಲ್. ಹೀಗಿದ್ದಾಗಲೇ, 14 ಪಾಯಿಂಟ್ಸ್ ಪಡೆದ ಆರ್‌ಸಿಬಿ ನಂಬರ್ 1 ತಂಡವಾಗಿ, ಹೊಸ ಇತಿಹಾಸ ನಿರ್ಮಾಣ...

ಆರ್‌ಸಿಬಿ ನಂಬರ್ 1 ತಂಡ!
ನಮ್ಮ ಬೆಂಗಳೂರು ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅರ್ಥಾತ್ ಆರ್‌ಸಿಬಿ ಕಂಡರೆ ಐಪಿಎಲ್ ಆಡುವ ಎಲ್ಲಾ ತಂಡಗಳಿಗೂ ಭಯ ಇದ್ದೇ ಇದೆ. ಆರ್‌ಸಿಬಿ ತಂಡ ಒಮ್ಮೆ ಅಖಾಡ ಪ್ರವೇಶ ಮಾಡಿದರೆ ಎದುರಾಳಿ ತಂಡಗಳು ಉಡೀಸ್ ಆಗೋದು ಗ್ಯಾರಂಟಿ ಗುರೂ. ಹೀಗಿದ್ದಾಗಲೇ, ಹೊಸ ಇತಿಹಾಸ ನಿರ್ಮಾಣ ಮಾಡಿರುವ ಆರ್‌ಸಿಬಿ ತಂಡ ಬದ್ಧ ವೈರಿಯಾದ ಚೆನ್ನೈ ವಿರುದ್ಧ ವಿಶಿಷ್ಟ ಸಾಧನೆ ಮಾಡಿದೆ...












Click it and Unblock the Notifications