RCB: ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಹೀಗಿರುತ್ತೆ!

ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ 182 ಆಟಗಾರರು ವಿವಿಧ ತಂಡಗಳ ಪಾಲಾಗಿದ್ದಾರೆ. 639 ಕೋಟಿ ರೂಪಾಯಿ ಹಣವನ್ನು 10 ಫ್ರಾಂಚೈಸಿಗಳು ಹರಾಜಿನಲ್ಲಿ ಖರ್ಚು ಮಾಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 83 ಕೋಟಿ ರೂಪಾಯಿ ಪರ್ಸ್ ಜೊತೆ ಐಪಿಎಲ್ ಮೆಗಾ ಹರಾಜು ಟೇಬಲ್‌ಗೆ ಬಂದಿತ್ತು, ಇದರಲ್ಲಿ 82.25 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಇನ್ನು 75 ಲಕ್ಷ ರೂಪಾಯಿ ಪರ್ಸ್ ಉಳಿಸಿಕೊಂಡಿದ್ದು, 19 ಆಟಗಾರರನ್ನು ಖರೀದಿ ಮಾಡಿದೆ.

ಆರ್‌ಸಿಬಿ ಕೆಲವು ಆಟಗಾರರನ್ನು ತೆಗೆದುಕೊಳ್ಳಲು ಪ್ರಯತ್ನ ಮಾಡದಿದ್ದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದರು. ಮೊದಲ ದಿನ ಆರ್‌ಸಿಬಿ ಜೋಶ್ ಹೇಜಲ್‌ವುಡ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಸುಯಶ್ ಶರ್ಮಾ, ಫಿಲ್ ಸಾಲ್ಟ್‌ರನ್ನು ಮಾತ್ರ ಖರೀದಿ ಮಾಡಿತ್ತು. ಕೆಎಲ್ ರಾಹುಲ್, ಸಿರಾಜ್, ಮ್ಯಾಕ್ಸ್‌ವೆಲ್‌ರನ್ನು ಖರೀದಿ ಮಾಡದ ಕಾರಣ ಅಭಿಮಾನಿಗಳು ಟ್ರೋಲ್ ಮಾಡಿದ್ದರು.

RCB Strong playing xi for ipl 2025 after mega auction

ಆದರೆ ಹರಾಜಿನ ಎರಡನೇ ದಿನ ಆರ್‌ಸಿಬಿ ತಂಡಕ್ಕೆ ಬೇಕಾದ ಆಟಗಾರರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು. ಮುಖ್ಯವಾಗಿ ಬೌಲಿಂಗ್ ವಿಭಾಗ ಬಲಪಡಿಸಿಕೊಳ್ಳಲು ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್‌ರನ್ನು ಖರೀದಿ ಮಾಡಿತು.

ತಂಡದಲ್ಲಿ ಇದೀಗ ಬ್ಯಾಟಿಂಗ್, ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ. ಹೆಚ್ಚಿನ ಆಲ್‌ರೌಂಡರ್ ಗಳು ಇರುವ ಕಾರಣ, ಬೌಲಿಂಗ್ ಆಯ್ಕೆ ಕೂಡ ಹೆಚ್ಚಾಗಿದ್ದು, ಚಿನ್ನಸ್ವಾಮಿಯಲ್ಲಿ ಅನುಕೂಲಕ್ಕೆ ಬರಲಿದೆ ಎಂದು ಫ್ರಾಂಚೈಸಿ ಲೆಕ್ಕಾಚಾರ ಹಾಕಿಕೊಂಡಿದೆ. ಟಿಮ್ ಡೇವಿಡ್, ಲಿವಿಂಗ್‌ಸ್ಟೋನ್ ಸ್ಫೋಟಕ ಬ್ಯಾಟಿಂಗ್ ಜೊತೆ ಬೌಲಿಂಗ್ ಕೂಡ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಕೃನಾಲ್ ಪಾಂಡ್ಯ ಎಡಗೈ ಬ್ಯಾಟರ್ ಮತ್ತು ಸ್ಪಿನ್ನರ್ ಆಗಿದ್ದು ಬ್ಯಾಟಿಂಗ್ ಬೌಲಿಂಗ್ ವಿಭಾಗದ ಬಲ ಹೆಚ್ಚಿಸುತ್ತಾರೆ.

2022ರ ಐಪಿಎಲ್‌ಗೆ ಐಪಿಎಲ್ ತಂಡ

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಟಿದಾರ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೊಬ್ ಬೆಥೆಲ್, ಟಿಮ್ ಡೇವಿಡ್, ದೇವದತ್ ಪಡಿಕ್ಕಲ್, ಮನೋಜ್ ಭಾಂಡಗೆ, ಸ್ವಪ್ನಿಲ್ ಸಿಂಗ್, ಸ್ವಸ್ತಿಕ್ ಚಿಕಾರ, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಯಶ್ ದಯಾಳ್, ಜೋಶ್ ಹೇಜಲ್‌ವುಡ್, ರಸಿಕ್ ದಾರ್ ಸಲಾಮ್, ಸುಯಶ್ ಶರ್ಮಾ, ನುವಾನ್ ತುಷಾರ, ಮೋಹಿತ್ ರಾಠೀ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್.

ಪ್ಲೇಯಿಂಗ್‌ ಇಲೆವೆನ್ ಹೀಗಿದ್ದರೆ ಉತ್ತಮ

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಯಶ್ ದಯಾಳ್, ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್.

ಇಂಪ್ಯಾಕ್ಟ್ ಪ್ಲೇಯರ್; ರಸಿಕ್ ದಾರ್/ಸ್ವಪ್ನಿಲ್ ಸಿಂಗ್‌.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+