RCB: ಆರ್‌ಸಿಬಿ ಬೌಲಿಂಗ್‌ಗೆ ಬಲ ತುಂಬಲಿರುವ ಭುವನೇಶ್ವರ್ ಕುಮಾರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಯಾವಾಗಲೂ ಬೌಲಿಂಗ್ ಸಮಸ್ಯೆ ಕಾಡುತ್ತಲೇ ಇತ್ತು, ಕೊನೆಗೂ ಫ್ರಾಂಚೈಸಿ ಬೌಲಿಂಗ್ ಬಲ ಹೆಚ್ಚಿಸಿಕೊಳ್ಳಲು ಮುಂದಾಗಿದ್ದು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಹಿರಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಖರೀದಿ ಮಾಡಿದೆ. ಸದ್ಯ ಆರ್ ಸಿಬಿ ಬೌಲಿಂಗ್ ಬಲಿಷ್ಠವಾಗಿ ಕಾಣುತ್ತಿದ್ದು, ಈ ಬಾರಿ ಉತ್ತಮ ತಂಡ ಕಟ್ಟುವಲ್ಲಿ ಬಹುತೇಕ ಯಶಸ್ವಿಯಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾನುವಾರ ಹರಾಜಿನಲ್ಲಿ ಆರಂಭದಲ್ಲಿ ಯಾವುದೇ ಆಟಗಾರರನ್ನು ಖರೀದಿ ಮಾಡದೇ ಇರುವುದಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಆದರೆ ತಾವು ಸ್ಪಷ್ಟವಾದ ಪ್ಲಾನಿಂಗ್ ಮಾಡಿಕೊಂಡು ಬಂದಿದ್ದೇವೆ ತಾಳ್ಮೆಯಿಂದ ಇರಿ ಎಂದು ಆರ್ ಸಿಬಿ ಫ್ರಾಂಚೈಸಿ ಮನವಿ ಮಾಡಿದ್ದರು. ಅದಕ್ಕೆ ತಕ್ಕಂತೆ ಮೊದಲ ದಿನ ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಸುಯಾಶ್ ಶರ್ಮಾ, ರಸೀದ್ ದಾರ್, ಜೋಶ್ ಹೇಜಲ್‌ವುಡ್ ಅವರನ್ನು ಖರೀದಿ ಮಾಡಿತ್ತು.

ಮುಖ್ಯವಾಗಿ ಬೌಲಿಂಗ್, ಆಲ್‌ರೌಂಡರ್ ಗಳಿಗೆ ಆರ್ ಸಿಬಿ ಹೆಚ್ಚಿನ ಆಸಕ್ತಿ ತೋರಿಸಿತ್ತು. ಲಿಯಾಮ್ ಲಿವಿಂಗ್‌ಸ್ಟೋನ್ ಅತ್ಯುತ್ತಮ ಆಲ್‌ರೌಂಡರ್ ಆಗಿದ್ದು, ಫಿಲ್ ಸಾಲ್ಟ್ ಮತ್ತು ಜಿತೇಶ್ ಶರ್ಮಾ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ. ರಸಿದ್ ದಾರ್ ಮತ್ತು ಜೋಶ್ ಹೇಜಲ್‌ವುಡ್ ವೇಗದ ಬೌಲಿಂಗ್ ಪಡೆಗೆ ಬಲ ತುಂಬಲಿದ್ದಾರೆ. ಸುಯಶ್ ಶರ್ಮಾ ಸ್ಪಿನ್ ಬೌಲರ್ ಆಗಿದ್ದಾರೆ.
ಬಲ ತಂದ ಭುವನೇಶ್ವರ್ ಕುಮಾರ್
ಎರಡನೇ ದಿನ ಆರ್ ಸಿಬಿ ಅತ್ಯುತ್ತಮ ಖರೀದಿ ಮಾಡುವ ಮೂಲಕ ಆರ್ ಸಿಬಿ ಬಲವನ್ನು ಹೆಚ್ಚಿಸಿದೆ. ಮೊದಲಿಗೆ ಸ್ಪಿನ್ ಆಲ್‌ರೌಂಡರ್ ಕೃನಾಲ್ ಪಾಂಡ್ಯರನ್ನು 5.75 ಕೋಟಿ ರೂಪಾಯಿಗೆ ಖರೀದಿ ಮಾಡಿತು. ಬಳಿಕ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು 10.75 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದು, ಬೌಲಿಂಗ್‌ಗೆ ಮತ್ತಷ್ಟು ಬಲ ತುಂಬಿತು.
10 ವರ್ಷಗಳು ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್‌ಗೆ ಬಲ ತುಂಬಿದ್ದ ಭುವನೇಶ್ವರ್ ಕುಮಾರ್, ಅಪಾರ ಅನುಭವ ಹೊಂದಿರುವ, ಟಿ20 ಸ್ಪೆಷಲಿಸ್ಟ್ ಬೌಲರ್ ಆಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಪರಿಸ್ಥಿತಿಗೆ ಭುವನೇಶ್ವರ್ ಕುಮಾರ್ ಉತ್ತಮವಾಗಿ ಹೊಂದುವ ಬೌಲರ್ ಆಗಿದ್ದು, ಆರ್ ಸಿಬಿ ಅವರನ್ನು ಖರೀದಿ ಮಾಡಿದೆ.
ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಭುವನೇಶ್ವರ್ ಕುಮಾರ್ ಖರೀದಿ ಮಾಡಲು ಸ್ಪರ್ಧೆಗೆ ಬಿದ್ದವು. ಆದರೆ ಕೊನೆಯಲ್ಲಿ ಬಿಡ್ಡಿಂಗ್ ರೇಸ್‌ಗೆ ಬಂದ ಆರ್ ಸಿಬಿ ಭುವಿಯನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು.
ಭುವನೇಶ್ವರ್ ಕುಮಾರ್ ಈವರೆಗೂ 287 ಟಿ20 ಪಂದ್ಯಗಳನ್ನಾಡಿದ್ದು 300 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ 176 ಪಂದ್ಯಗಳನ್ನಾಡಿರುವ ಅವರು 181 ವಿಕೆಟ್ ಪಡೆದು ಮಿಂಚಿದ್ದಾರೆ. 19 ರನ್ ನೀಡಿ 5 ವಿಕೆಟ್ ಪಡೆದಿರುವುದು ಅವರ ಈವರೆಗಿನ ಉತ್ತಮ ಸಾಧನೆಯಾಗಿದೆ.












Click it and Unblock the Notifications