Shreyanka Patil: ನನಸಾಯ್ತು ಶ್ರೇಯಾಂಕಾ ಪಾಟೀಲ್ ಬಹುಕಾಲದ ಕನಸು
ಶ್ರೇಯಾಂಕಾ ಪಾಟೀಲ್, ಸದ್ಯ ಭಾರತದ ಮಹಿಳಾ ಕ್ರಿಕೆಟ್‌ನ ಭವಿಷ್ಯದ ಸೂಪರ್ ಸ್ಟಾರ್ ಆಗುವ ಭರವಸೆ ಮೂಡಿಸಿರುವ ಆಟಗಾರ್ತಿ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 13 ವಿಕೆಟ್ ಪಡೆದ ಕನ್ನಡತಿ, ಪರ್ಪಲ್ ಕ್ಯಾಪ್‌ನ ಒಡತಿಯಾಗಿದ್ದಾರೆ. 16 ವರ್ಷಗಳ ಬಳಿಕ ಆರ್ ಸಿಬಿ ಫ್ರಾಂಚೈಸಿ ಮೊದಲ ಬಾರಿಗೆ ಕಪ್ ಗೆಲ್ಲುವಲ್ಲಿ ಶ್ರೇಯಾಂಕ ಮಹತ್ವದ ಕೊಡುಗೆ ನೀಡಿದ್ದಾರೆ.
ಶ್ರೇಯಾಂಕಾ ಪಾಟೀಲ್, ವಿರಾಟ್ ಕೊಹ್ಲಿಯವರ ಅಪ್ಪಟ ಅಭಿಮಾನಿ. ತಾವು ಕ್ರಿಕೆಟ್ ಆಯ್ಕೆ ಮಾಡಿಕೊಳ್ಳಲು ಕೊಹ್ಲಿ ಕೂಡ ಸ್ಪೂರ್ತಿ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಕಳೆದ ವರ್ಷ ತನ್ನ ನೆಚ್ಚಿನ ಆಟಗಾರನನ್ನು ಹತ್ತಿರದಿಂದ ನೋಡುವ ಅವಕಾಶ ಪಡೆದುಕೊಂಡಿದ್ದರು. ಕಳೆದ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್ ಸಿಬಿ ಸತಂತ್ರಾಂಶ ಸೋಲು ಕಂಡಿದ್ದಾಗ, ತಂಡವನ್ನು ಭೇಟಿ ಮಾಡಿದ್ದ ವಿರಾಟ್ ಕೊಹ್ಲಿ ಸ್ಪೂರ್ತಿಯ ಮಾತುಗಳನ್ನಾಡಿದ್ದರು.

ಈ ಬಾರಿ ಆರ್ ಸಿಬಿ ಮಹಿಳಾ ತಂಡ ಕಪ್ ಗೆಲ್ಲುವ ಮೂಲಕ ಅದೇ ಪುರುಷರ ತಂಡಕ್ಕೆ ಸ್ಪೂರ್ತೀಯಾಗಿದೆ. ಮಾರ್ಚ್ 19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಪುರಷರ ತಂಡ ಕಪ್ ಗೆದ್ದ ಮಹಿಳಾ ತಂಡಕ್ಕೆ ಗಾರ್ಡ್ ಆಫ್ ಹಾನರ್ ಕೊಟ್ಟಿದೆ.
ಕೊಹ್ಲಿಗೆ ನನ್ನ ಹೆಸರು ಗೊತ್ತೂ!
ಅತ್ಯುತ್ತಮ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿರುವ ಶ್ರೇಯಾಂಕಾ ಪಾಟೀಲ್ ಯಾರೆಂದು ಕೊಹ್ಲಿಗೂ ಗೊತ್ತಾಗಿದೆ. ಕೊಹ್ಲಿಯನ್ನು ಭೇಟಿ ಮಾಡಿ ಫೋಟೊ ತೆಗೆಸಿಕೊಂಡಿರುವ ಶ್ರೇಯಾಂಕಾ ಈ ಬಗ್ಗೆ ಎಕ್ಸ್‌ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
Started watching cricket cos of him. Grew up dreaming to be like him. And last night, had the moment of my life. Virat said,
— Shreyanka Patil (@shreyanka_patil) March 20, 2024
“Hi Shreyanka, well bowled.”
He actually knows my name 😬😬😬#StillAFanGirl #rolemodel pic.twitter.com/z3DB0C8Pt0
ಎಕ್ಸ್‌ನಲ್ಲಿ ಕೊಹ್ಲಿ ಜೊತೆಗಿರುವ ಫೋಟೊ ಹಂಚಿಕೊಂಡಿದ್ದು, "ಇವರಿಂದಲೇ ನಾನು ಕ್ರಿಕೆಟ್ ನೋಡುವುದನ್ನು ಶುರುಮಾಡಿದೆ. ಅವರಂತೆಯೇ ಕನಸು ಕಾಣುತ್ತಾ ಬೆಳೆಯುತ್ತಿದ್ದೇನೆ, ಕಳೆದ ರಾತ್ರಿ ನನ್ನ ಜೀವನದ ಸಂತೋಷ ಕ್ಷಣವಾಗಿತ್ತು, ಹಾಯ್ ಶ್ರೇಯಾಂಕಾ, ಉತ್ತಮವಾಗಿ ಬೌಲಿಂಗ್ ಮಾಡಿದೆ ಎಂದು ವಿರಾಟ್ ಕೊಹ್ಲಿ ಹೇಳಿದರು. ಅವರಿಗೆ ನನ್ನ ಹೆಸರು ಗೊತ್ತು" ಎಂದು ಸಂತಸ ಹಂಚಿಕೊಂಡಿದ್ದಾರೆ.
ಶ್ರೇಯಾಂಕಾ ಅವರಿಗೆ ಫ್ಯಾನ್ ಗರ್ಲ್ ಕ್ಷಣವಾಗಿತ್ತು, ನೆಚ್ಚಿನ ಕ್ರಿಕೆಟಿಗನ ಭೇಟಿ ಮಾಡುವುದಷ್ಟೇ ಅಲ್ಲ, ಅವರಿಂದ ಹೊಗಳಿಸಿಕೊಂಡಿರುವುದು ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಕರ್ನಾಟಕ, ಭಾರತ ತಂಡಕ್ಕಾಗಿ ಆಡಿರುವ ಶ್ರೇಯಾಂಕಾ, ಕೆರಿಬಿಯಿನ್ ಪ್ರೀಮಿಯರ್ ಲೀಗ್ ಮಹಿಳಾ ಕ್ರಿಕೆಟ್‌ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಷ್ಟೇ ಅಲ್ಲ, ಅಲ್ಲೂ ಕೂಡ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.












Click it and Unblock the Notifications