RCB: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ರಿಷಬ್ ಶೆಟ್ಟಿ; ಏನ್ ಹೇಳಿದ್ರು ಗೊತ್ತಾ?

ಹಲವು ವರ್ಷಗಳ ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸಲು ಕೊನೆಗೂ ಆರ್‌ಸಿಬಿ ಫ್ರಾಂಚೈಸಿ ಮುಂದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಬದಲಾವಣೆ ಮಾಡಲು ನಿರ್ಧರಿಸಿದೆ. ಬ್ಯಾಂಗಲೋರ್ (Bangalore) ಅನ್ನು ಬೆಂಗಳೂರು (Bengaluru) ಎಂದು ಬದಲಾಯಿಸುವಂತೆ ಹಲವು ವರ್ಷಗಳಿಂದ ಅಭಿಮಾನಿಗಳು ಒತ್ತಾಯಿಸಿದ್ದರು, ಈ ವರ್ಷ ಅದಕ್ಕೆ ಕಾಲ ಕೂಡಿ ಬಂದಿದೆ.

ಬುಧವಾರ ಆರ್‌ಸಿಬಿ ಎಕ್ಸ್‌ನಲ್ಲಿ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಹೆಸರು ಬದಲಾವಣೆ ಮಾಡುವ ಬಗ್ಗೆ ಸೂಚನೆ ನೀಡಿದೆ. ಕಾಂತಾರ ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಟೀಸರ್ ನಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನವಾಗಿ ಹೆಸರು ಬದಲಾವಣೆ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

RCB Set to Reveal New Name on March 19th Ahead of IPL 2023 Rishab Shetty Drops Teaser Hint

ಈ ಟೀಸರ್ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಕೊನೆಗೂ ಹೆಸರು ಸರಿ ಮಾಡುವ ಮೂಲಕ ಅಭಿಮಾನಿಗಳಿಗೆ ಆರ್‌ಸಿಬಿ ಮತ್ತಷ್ಟು ಹತ್ತಿರವಾಗಿದೆ. ಹೆಸರು ಬದಲಾದ ಮೇಲಾದರೂ ಆರ್‌ಸಿಬಿ ಅದೃಷ್ಟ ಬದಲಾಗುತ್ತದೆ, ಈ ಬಾರಿ ಕಪ್‌ ನಮ್ದೇ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 19ರಂದು ಹೆಸರು ಬದಲಾವಣೆ!

ಐಪಿಎಲ್ 2024ರ ಆವೃತ್ತಿಗೆ ಮುನ್ನ ಆರ್‌ಸಿಬಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್‌ಬಾಕ್ಸ್ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಹೆಸರು ಬದಲಾವಣೆ ಮಾಡಿದ ಲೋಗೋವನ್ನು ಬಿಡುಗಡೆ ಮಾಡಲಿದೆ. ಇದರ ಮತ್ತಷ್ಟು ಪ್ರಮುಖ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.

ನಾಯಕ ಫಾಫ್ ಡುಪ್ಲೆಸಿಸ್ ಮಂಗಳವಾರ ಆರ್‌ಸಿಬಿ ಪಾಳಯವನ್ನು ಸೇರಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಕೂಡ ಅನ್‌ಬಾಕ್ಸ್ ಕಾರ್ಯಕ್ರಮಕ್ಕೆ ಮುನ್ನ ತಂಡವನ್ನು ಸೇರುವ ಸಾಧ್ಯತೆ ಇದೆ. ಮಾರ್ಚ್ 22ರಂದು ಐಪಿಎಲ್‌ ಆರಂಭವಾಗಲಿದ್ದು, ಚೆನ್ನೈ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಆರ್‌ಸಿಬಿ ಜೊತೆಯಾದ ಹೊಂಬಾಳೆ ಫಿಲಂಸ್‌

ಹೊಂಬಾಳೆ ಫಿಲಂಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಕೈಜೋಡಿಸಿದ್ದು ಸಿನಿಮಾ ಮತ್ತು ಕ್ರಿಕೆಟ್‌ ಅನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಕೆಜಿಎಫ್ ಸಿನಿಮಾವನ್ನು ಆರ್ ಸಿಬಿ ಆಟಗಾರರು ನೋಡಿ ಆನಂದಿಸಿದ್ದರು. ಹೊಂಬಾಳೆ ಫಿಲಂಸ್ ಸದ್ಯ ಕಾಂತಾರ ಅಧ್ಯಾಯ ೧ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ರಿಷಬ್ ಶೆಟ್ಟಿ ನಿರ್ದೇಶನದ ಜೊತೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+