Get Updates
Get notified of breaking news, exclusive insights, and must-see stories!

RCB Sale: ಆರ್‌ಸಿಬಿ ಮಾರಾಟ.. ಕನ್ನಡಾಭಿಮಾನಿಗಳ ಪ್ರಾರ್ಥನೆ ನಿಜವಾಗುತ್ತಾ?

RCB Sale: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್‌ ಕಿಂಗ್ಸ್‌ ಮಣಿಸುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದರ ಬೆನ್ನಲ್ಲೇ ಆರ್‌ಸಿಬಿ ಮಾರಾಟ ಮಾಡಲಾಗುತ್ತದೆ ಎಂದು ಡಿಯಾಜಿಯೋ ಘೋಷಣೆ ಮಾಡಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಹಾಗಾದ್ರೆ ಅದೇನು ಹಾಗೂ ಪ್ರಾಂಚೈಸಿ ಬೆಲೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 2025ರಲ್ಲಿ ಐಪಿಎಲ್‌ ಟ್ರೋಫಿ ಗೆಲ್ಲುವ ಮೂಲಕ ಕಪ್‌ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆದಿತ್ತು. ಇದರ ಬೆನ್ನಲ್ಲೇ ಇತ್ತೀಚೆಗಷ್ಟೇ ಪ್ರಸ್ತುತ ಆರ್‌ಸಿಬಿ ಮಾಲೀಕತ್ವದ ಡಿಯಾಜಿಯೋ ತನ್ನ ಪ್ರಾಂಚೈಸಿಯನ್ನು ಮಾರಾಟ ಮಾಡಲು ನಿರ್ಧರಿಸಿತ್ತು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಇದೀಗ ಇದನ್ನು ಕೊಂಡುಕೊಳ್ಳಲು ಮುಂದಾಗಿರುವುದೇ ಕನ್ನಡದ ಪ್ರತಿಷ್ಠಿತ ಸಿನಿಮಾನ ನಿರ್ಮಾಣ ಸಂಸ್ಥೆ ಎಂಬ ವದಂತಿ ಹರಿದಾಡುತ್ತಿದೆ.

RCB Sale Hombale Films Rumored to Buy RCB After Diageo Decides to Sell Franchise

ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಆಗಿರುವ ಹೊಂಬಾಳೆ ಫಿಲ್ಮ್ಸ್ ಆರ್‌ಸಿಬಿ ಪ್ರಾಂಚೈಸಿಯನ್ನು ಕೊಂಡುಕೊಳ್ಳಲು ಮುಂದಾಗಿದೆ ಎನ್ನುವ ವದಂತಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತಹ ಪೋಸ್ಟರ್ ಕೂಡ ವೈರಲ್‌ ಆಗಿದೆ. ಆದರೆ, ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. "ಒಂದು ವೇಳೆ ನಮ್ಮ ಕನ್ನಡ ನಮ್ಮ ಹೊಂಬಾಳೆ ಫಿಲ್ಮ್ಸ್ ಕೊಂಡುಕೊಂಡರೆ ತುಂಬಾ ಸಂತೋಷ," ಎಂದು ಕನ್ನಡಿಗರು ಹೇಳುವ ಮಾತಾಗಿದೆ. ಹಾಗಾದ್ರೆ ತಂಡದ ಮೌಲ್ಯ ಎಷ್ಟಿರಬಹುದು ಎನ್ನುವ ಪ್ರಶ್ನೆಗೂ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಪೋಸ್ಟರ್‌ನಲ್ಲಿ ಏನಿದೆ?: ಐಪಿಎಲ್‌ 2025 ಮಿನಿ ಹರಾಜಿಗೂ ಮುನ್ನ "ಹೊಂಬಾಳೆ ಫಿಲ್ಸ್ಮ್‌ ಆರ್‌ಸಿಬಿ ಮಾಲೀಕತ್ವವನ್ನು ವಹಿಸಿಕೊಳ್ಳಲಿದೆ" ಎಂದು RCBIANS OFFICIAL ಎಂಬ ಟ್ವಿಟರ್ ಪೇಜ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದು ದೊಟ್ಟ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ, ಈ ಬಗ್ಗೆ ಹೊಬಾಳೆ ಫಿಲ್ಮ್ಸ್‌ ಎಲ್ಲಿಯೂ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಕಳೆದ ಕೆಲ ದಿನಗಳಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಈಗಿನ ಮಾಲಿಕತ್ವದ ಡಿಯಾಜಿಯೋ ಮಾರಾಟ ಮಾಡಲಿದೆ ಎಂದು ಘೋಷಿಸಿತ್ತು. ಮೊದಲಿಗೆ ಈ ಸುದ್ದಿ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಇದೀಗ ಹೊಂಬಾಳೆ ಫಿಲ್ಮ್ಸ್ ಅವರೇ ಖರೀದಿ ಮಾಡುತ್ತಾರೆ ಎನ್ನುವ ಪೋಸ್ಟರ್ ವೈರಲ್‌ ಆಗಿದೆ.

ಅಭಿಮಾನಿಗಳ ಪ್ರಾರ್ಥನೆ ಏನು?: ಸದ್ಯ ಆರ್‌ಸಿಬಿ ಮಾರ್ಕೆಟಿಂಗ್‌ ವ್ಯಾಲ್ಯೂನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಟ್ರೋಫಿ ಗೆದ್ದ ಬಳಿಕವೇ ಈ ಪಟ್ಟಕ್ಕೆ ಬಂದಿದ್ದು. ಈ ಪ್ರಾಂಚೈಸಿಯನ್ನು ಡಿಯಾಜಿಯೋ 17,700 ಕೋಟಿ ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿತ್ತು. ಇದೀಗ ಆರ್‌ಸಿಬಿ ಜೊತೆ ಡಿಜಿಟಲ್ ಕಂಟೆಂಟ್‌ ಪಾರ್ಟ್ನರ್‌ ಆಗಿರುವ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ರಾಯಲ್ಸ್‌ ಪ್ರಾಂಚೈಸಿಯನ್ನು ಖರೀದಿಸುತ್ತದೆ ಎಂಬ ವದಂತಿಗಳು ಎದ್ದಿದ್ದು, ಇದು ನಿಜವಾಗಲಿ ಎಂಬುದೇ ಕನ್ನಾಡಾಭಿಮಾನಿಗಳ ಪ್ರಾರ್ಥನೆಯಾಗಿದೆ.

ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂತಾ ಇದ್ರೆ ಅದು ಆರ್‌ಸಿಬಿ ಮಾತ್ರ. ಟ್ರೋಫಿ ಗೆದ್ದ ಬಳಿಕವಂತೂ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವುದಲ್ಲದೆ, ಮಾರ್ಕೆಂಟಿಂಗ್‌ ವ್ಯಾಲ್ಯೂನಲ್ಲೂ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ಹಿಂದಿಕ್ಕಿ ನಂಬರ್ 1 ಸ್ಥಾನ ಅಲಂಕರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+