WPL 2026 RCB Trophy: ಆರ್‌ಸಿಬಿ ಗೆದ್ದ ಡಬ್ಲ್ಯೂಪಿಎಲ್ ಟ್ರೋಫಿ ಬಿಸಿಸಿಐಗೆ ವಾಪಾಸ್
WPL 2026 RCB Trophy: ಡಬ್ಲ್ಯೂಪಿಎಲ್ 2026 ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಚಾಂಪಿಯಾನ್ ಆಯಿತು. ಮಾಹಿತಿ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದ ಟ್ರೋಫಿಯನ್ನು ಮತ್ತೆ ಬಿಸಿಸಿಐ ವಾಪಾಸ್ ಪಡೆಯಲಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಫೈನಲ್‌ನಲ್ಲಿ ಮಣಿಸಿ ಡಬ್ಲ್ಯೂಪಿಎಲ್ ಎರಡನೇ ಟ್ರೋಫಿಗೆ ಮುತ್ತಿಟ್ಟಿತು. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್‌ಗಳನ್ನು ಕಲೆಹಾಕಿತು. ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 204 ರನ್‌ಗಳನ್ನು ಬೃಹತ್ ಮೊತ್ತದ ಗುರಿಯನ್ನು ತಲುಪುವಲ್ಲಿ ಆರ್‌ಸಿಬಿ ಯಶಸ್ವಿಯಾಗುವ ಮೂಲಕ ಟ್ರೋಫಿ ಎತ್ತಿ ಹಿಡಿಯುತು.

ಮಾಹಿತಿ ಪ್ರಕಾರ, ಐಪಿಎಲ್ ಹಾಗೂ ಡಬ್ಲ್ಯೂಪಿಎಲ್ ಟೂರ್ನಿಗಳಲ್ಲಿ ಗೆದ್ದ ಒರಿಜಿನಲ್ ಟ್ರೋಫಿಯನ್ನು ಬಿಸಿಸಿಐಗೆ ವಾಪಾಸ್ ಹಿಂದಿರುಗಿಸಲಾಗುತ್ತದೆ. ಪಂದ್ಯ ಗೆದ್ದ ತಂಡ ತಾತ್ಕಲಿಕಾವಾಗಿ ಒರಿಜಿನಲ್ ಟ್ರೋಫಿಯನ್ನು ಇಟ್ಟುಕೊಳ್ಳಬಹುದು. ಸಂಭ್ರಮಾಚರಣೆ ಮುಗಿದ ಬಳಿಕ ಮತ್ತೆ ಅದನ್ನು ಹಿಂದಿರುಗಿಸಲಾಗುತ್ತದೆ.
ಫ್ರಾಂಚೈಸಿಗೆ ಅದರ ಬದಲಿಗೆ ಅದೇ ರೀತಿಯ ಬೇರೊಂದು ಟ್ರೋಫಿಯನ್ನು ನೀಡಲಾಗುತ್ತದೆ ಎನ್ನುವ ಮಾಹಿತಿಯಿದೆ. ಈಗಾಗಲೇ ಕಳೆದ ಬಾರಿ ಆರ್‌ಸಿಬಿ ಐಪಿಎಲ್‌ನಲ್ಲಿ ಗೆದ್ದಾಗಲೂ ಸಹ ಎಲ್ಲಾ ಸಮಾರಂಭಗಳು ಮುಗಿದ ಬಳಿಕ ಟ್ರೋಫಿಯನ್ನು ವಾಪಸ್ ಪಡೆದು ಅದರ ಬದಲಿಗೆ ಅದೇ ರೀತಿಯ ಬೇರೊಂದು ಟ್ರೋಫಿಯನ್ನು ನೀಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿತ್ತು.
ಹಾಗೆಯೇ ಮಾಹಿತಿ ಪ್ರಕಾರ, ಡಬ್ಲ್ಯೂಪಿಎಲ್ ಫೈನಲ್ ಪಂದ್ಯದ ನಂತರ, ವಿಜೇತ ತಂಡ ಮೂಲ ಟ್ರೋಫಿಯನ್ನು ಪಡೆಯುತ್ತದೆ. ಆಟಗಾರರು ಮತ್ತು ತಂಡ ಸದಸ್ಯರು ಈ ಸಂಭ್ರಮದ ಕ್ಷಣದಲ್ಲಿ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಕೊನೆಯ ಎರಡು ತಿಂಗಳ ಶ್ರಮದ ಫಲವಾಗಿ ಆಟದಲ್ಲಿ ಸಾಧನೆಯನ್ನು ಆಚರಿಸುತ್ತಾರೆ. ನಂತರ, ಮಾಹಿತಿ ಪ್ರಕಾರ, ಮೂಲ ಟ್ರೋಫಿಯನ್ನು ತಂಡವು ಆಡಳಿತ ಮಂಡಳಿಗೆ ಹಿಂತಿರುಗಿಸಬೇಕು.
ಇಂತಹ ಕ್ರಮದಿಂದ ಕ್ರೀಡೆಗೆ ಪರಂಪರೆ ಹಾಗೂ ನೆನಪುಗಳನ್ನು ಉಳಿಸುವುದು ಸಾಧ್ಯವಾಗುತ್ತದೆ. ನಂತರ, ಆಡಳಿತ ಮಂಡಳಿ ಮೂಲ ಟ್ರೋಫಿಯ ಪ್ರತಿಕೃತಿಯನ್ನು ಫ್ರಾಂಚೈಸಿ ತಂಡಕ್ಕೆ ನೀಡುತ್ತದೆ. ಈ ಪ್ರತಿಕೃತಿ ತಂಡದ ಕಚೇರಿ ಅಥವಾ ವಸ್ತುಸಂಗ್ರಹಾಲಯದಲ್ಲಿ ಸಾಧನೆ ಮತ್ತು ಹೆಮ್ಮೆ ಸಂಕೇತವಾಗಿ ಪ್ರದರ್ಶಿಸಲಾಗುತ್ತದೆ ಎನ್ನುವ ಮಾಹಿತಿ ಇದೆ.












Click it and Unblock the Notifications