RCB: ಆರ್‌ಸಿಬಿ ಉಳಿಸಿಕೊಳ್ಳಲಿರುವ ಆಟಗಾರರು ಇವರೇ

ಐಪಿಎಲ್ ಮೆಗಹರಾಜಿಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಆಟಗಾರರನ್ನು ಉಳಿಸಿಕೊಳ್ಳಲು ಮತ್ತು ಬಿಡುಗಡೆ ಮಾಡಲು ಫ್ರಾಂಚೈಸಿಗಳು ತಲೆ ಕೆಡಿಸಿಕೊಂಡಿವೆ. ಯಾರನ್ನು ಉಳಿಸಿಕೊಳ್ಳಬೇಕು ಯಾರನ್ನು ಬಿಡುಗಡೆ ಮಾಡಬೇಕು ಎನ್ನುವುದು ಹಲವು ತಂಡಗಳಿಗೆ ತಲೆ ನೋವಾಗಿದೆ. ಚೊಚ್ಚಲ ಪ್ರಶಸ್ತಿಯ ಹುಡುಕಾಟದಲ್ಲಿರುವ ಆರ್ ಸಿಬಿ ಯಾರನ್ನು ಉಳಿಸಿಕೊಳ್ಳುತ್ತದೆ, ಬಿಡುಗಡೆ ಮಾಡುತ್ತದೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಐಪಿಎಲ್ ಹೊಸ ನಿಯಮಗಳ ಪ್ರಕಾರ ಪ್ರತಿ ತಂಡ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಇದ್ದು, ಆರ್ ಟಿಎಂ ಮೂಲಕ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ರಿಟೆನ್ಷನ್‌ಗಾಗಿ ನಾಲ್ವರು ಆಟಗಾರರಿಗೆ 65 ಕೋಟಿ ರೂಪಾಯಿ ನೀಡಬೇಕಾಗುತ್ತದೆ.

RCB retention List ahead of IPL mega Auction 2025

ಮೊದಲು ರಿಟೈನ್ ಆಗುವ ಆಟಗಾರನಿಗೆ 23 ಕೋಟಿ ರೂಪಾಯಿ ಸಿಗಲಿದ್ದು, ಎರಡನೇ ಆಟಗಾರನಿಗೆ 18 ಕೋಟಿ ರೂಪಾಯಿ, ಮೂರನೇ ಆಟಗಾರನಿಗೆ 14 ಕೋಟಿ ರೂಪಾಯಿ ಮತ್ತು ನಾಲ್ಕನೇ ಆಟಗಾರನಿಗೆ 11 ಕೋಟಿ ರೂಪಾಯಿ ಕೊಡಬೇಕಾಗುತ್ತದೆ. ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳುವಾಗ ಈ ಅಂಶವನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳುತ್ತವೆ.

ಆರ್‌ಸಿಬಿ ಉಳಿಸಿಕೊಳ್ಳಲಿರುವ ಆಟಗಾರರು

ಆರ್‌ಸಿಬಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲಿಗರಾಗಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಆಡಲು ಆರಂಭಿಸಿದ ಮೊದಲ ದಿನದಿಂದ ಇದುವರೆಗೂ ಆರ್ ಸಿಬಿ ತಂಡದಲ್ಲಿದ್ದಾರೆ. ಕೊಹ್ಲಿಯನ್ನು ಹೊರತುಪಡಿಸಿ ಆರ್ ಸಿಬಿ ತಂಡವನ್ನು ಊಹಿಸಿಕೊಳ್ಳಲು ಆಗದು, ಫ್ರಾಂಚೈಸಿಗೆ ಕೊಹ್ಲಿ ಮೊದಲ ಆಯ್ಕೆಯಾಗಿರಲಿದ್ದಾರೆ.

ಎರಡನೇ ಆಟಗಾರನಾಗಿ ವೇಗಿ ಮೊಹಮ್ಮದ್ ಸಿರಾಜ್‌ರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಯಶ್ ದಯಾಳ್, ರಜತ್ ಪಟಿದಾರ್, ವಿಲ್ ಜ್ಯಾಕ್ಸ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಆಕಾಶ್‌ ದೀಪ್ ಭಾರತ ತಂಡಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದು ಅವರನ್ನು ಉಳಿಸಿಕೊಳ್ಳುವ ಬಗ್ಗೆ ಕೂಡ ಯೋಚಿಸಬಹುದು. ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಆಲ್‌ರೌಂಡರ್ ಗ್ಲೆನ್‌ ಮ್ಯಾಕ್ಸ್‌ವೆಲ್‌ರನ್ನು ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ. ಫಾಫ್ ಡುಪ್ಲೆಸಿಸ್‌ರನ್ನು ಉಳಿಸಿಕೊಳ್ಳದೆ ಬಿಡುಗಡೆ ಮಾಡಿ ಹರಾಜಿನಲ್ಲಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೂಡ ಫ್ರಾಂಚೈಸಿ ಚಿಂತಿಸಬಹುದು.

ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಐಪಿಎಲ್ ಮೆಗಾಹರಾಜು ನಡೆಯುವ ಸಾಧ್ಯತೆ ಇದೆ. ಈ ಬಾರಿ ಹರಾಜು ಪ್ರಕ್ರಿಯೆಯನ್ನು ದುಬೈನಲ್ಲಿ ನಡೆಸಲು ಯೋಜಿಸಲಾಗಿದೆ. ಅಕ್ಟೋಬರ್ 31ರ ಒಳಗಾಗಿ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ನೀಡಬೇಕಿದೆ.

ಆರ್ ಸಿಬಿ ಈ ಬಾರಿ ಮೆಗಾಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟುವ ಯೋಜನೆಯಲ್ಲಿದೆ. ಬ್ಯಾಟಿಂಗ್ ಎಂದಿಗೂ ಬಲಿಷ್ಠವಾಗಿದ್ದು, ಉತ್ತಮ ಬೌಲಿಂಗ್ ಪಡೆ ಆರ್ ಸಿಬಿಗೆ ಬೇಕಾಗಿದೆ. ಮಾಜಿ ಆಟಗಾರ ದಿನೇಶ್ ಕಾರ್ತಿಕ್ ತಂಡದ ಮಾರ್ಗದರ್ಶಕರಾಗಿದ್ದು ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಯುವ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಈ ಬಾರಿ ಯಾವ ಆಟಗಾರರು ಕೋಟಿ ಕೋಟಿ ಪಡೆಯುತ್ತಾರೆ ಎಂದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+