RCB: ಪ್ಲೇಆಫ್‌ ಪಂದ್ಯಗಳಿಗೆ ಆರ್‌ಸಿಬಿ ತಂಡಕ್ಕೆ ಮಾರಕ ಬೌಲರ್ ಎಂಟ್ರಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ 2025ರ ಆವೃತ್ತಿಯಲ್ಲಿ ಅಧಿಕೃತವಾಗಿ ಪ್ಲೇಆಫ್‌ಗೆ ಪ್ರವೇಶ ಪಡೆದಿದೆ. ಮೇ 18ರಂದು ಗುಜರಾತ್ ಟೈಟಾನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿ ಪ್ಲೇಆಫ್ ಪ್ರವೇಶಿಸಿದೆ, ಇದರ ಜೊತೆ ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಕೂಡ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ.

ಭಾರತ ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಐಪಿಎಲ್ ಒಂದು ವಾರ ಸ್ಥಗಿತಗೊಂಡು ಬಳಿಕ ಆರಂಭವಾಗಿದೆ. ಇದರಿಂದಾಗಿ ಪ್ರಮುಖ ವಿದೇಶಿ ಆಟಗಾರರು ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಆರ್ ಸಿಬಿ ತಂಡದ ವೇಗಿ ಲುಂಗಿ ಎಂಗಿಡಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಬೇಕಿದ್ದು ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈಗ ಅವರ ಬದಲಾಗಿ ಹೊಸ ವೇಗಿಯನ್ನು ಆರ್ ಸಿಬಿ ಆಯ್ಕೆ ಮಾಡಿದೆ.

rcb picks blessing zimbabwe muzarabani replace lungi ngidi ipl 2025

ಜಿಂಬಾಬ್ವೆ ತಂಡದ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಬ್ಲೆಸ್ಸಿಂಗ್ ಮುಜರಬಾನಿ ಕೂಡ ವೇಗದ ಬೌಲರ್ ಆಗಿದ್ದು ಪ್ಲೇಆಫ್‌ನಲ್ಲಿ ಜೋಶ್ ಹೇಜಲ್‌ವುಡ್ ಕೂಡ ಅಲಭ್ಯರಾದರೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಅವಕಾಶ ಪಡೆಯುವುದು ಖಚಿತವಾಗಿದೆ.

ಯಾರು ಈ ಮುಜರಬಾನಿ?

ಆರ್‌ಸಿಬಿ ಎನ್‌ಗಿಡಿ ಬದಲಿಯಾಗಿ ಬ್ಲೆಸಿಂಗ್ ಮುಜರಬಾನಿಯನ್ನು ಆಯ್ಕೆ ಮಾಡಿದೆ. ಎಂಗಿಡಿ ಈ ಆವೃತ್ತಿಯಲ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಮಾತ್ರ ಕಣಕ್ಕಿಳಿದಿದ್ದರು, ಆದರೂ ಆಡಿದ ಒಂದು ಪಂದ್ಯದಲ್ಲೇ ಮೂರು ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು. ಹೇಜಲ್‌ವುಡ್ ಅನುಪಸ್ಥಿತಿಯಲ್ಲಿ ಅವರು ಪ್ರಮುಖ ವಿದೇಶಿ ಬೌಲರ್ ಆಗಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಲುಂಗಿಸಾನಿ ಎನ್‌ಗಿಡಿ ಬದಲಿಗೆ ಬ್ಲೆಸಿಂಗ್ ಮುಜರಬಾನಿಯನ್ನು ಆಯ್ಕೆ ಮಾಡಿದೆ, ಅವರು ರಾಷ್ಟ್ರೀಯ ಕರ್ತವ್ಯಗಳಿಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದಾರೆ. ಮೇ 26, 2025 ರಿಂದ ಮುಜರಬಾನಿ ಆರ್ ಸಿಬಿ ತಂಡದಲ್ಲಿ ಆಯ್ಕೆಗೆ ಲಭ್ಯವಿರುತ್ತಾರೆ.

ಬ್ಲೆಸ್ಸಿಂಗ್ ಮುಜರಬಾನಿ ಇದುವರೆಗೆ 70 ಟಿ20 ಪಂದ್ಯಗಳನ್ನು ಆಡಿದ್ದು, 78 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು 12 ಟೆಸ್ಟ್ ಮತ್ತು 55 ಏಕದಿನ ಪಂದ್ಯಗಳಲ್ಲಿ ಜಿಂಬಾಬ್ವೆಯನ್ನು ಪ್ರತಿನಿಧಿಸಿದ್ದಾರೆ. ಪ್ಲೇಆಫ್ ಪಂದ್ಯಗಳಲ್ಲಿ ಆಡಲು ಮುಜರಬಾನಿ 75 ಲಕ್ಷ ರೂಪಾಯಿಯನ್ನು ಪಡೆಯಲಿದ್ದಾರೆ.

ಮುಜರಬಾನಿ 6 ಅಡಿ 8 ಇಂಚು ಎತ್ತರವಿದ್ದು ಎಂಗಿಡಿ, ಹೇಜಲ್‌ವುಡ್ ಅವರಂತೆ ಎತ್ತರದ ವೇಗದ ಬೌಲರ್ ಆಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 67 ಇನ್ನಿಂಗ್ಸ್‌ಗಳಲ್ಲಿ 21.76 ಸರಾಸರಿಯಲ್ಲಿ 78 ವಿಕೆಟ್ ಪಡೆದಿದ್ದಾರೆ. ಕೇವಲ 7.03 ಎಕಾನಮಿ ಹೊಂದಿರುವುದು ವಿಶೇಷವಾಗಿದೆ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಕೆಆರ್ ವಿರುದ್ಧ ಐಪಿಎಲ್ ಪುನರಾರಂಭವಾದ ನಂತರ ಆರ್‌ಸಿಬಿಯ ಮೊದಲ ಪಂದ್ಯ ಮೇ 17 ರಂದು ಮಳೆಯಿಂದ ರದ್ದಾಗಿತ್ತು. ಮುಂದಿನ ಪಂದ್ಯವನ್ನು ಮೇ 23 ರಂದು ಎಸ್‌ಆರ್‌ಹೆಚ್ ವಿರುದ್ಧ ಆಡಲಿದ್ದು, ನಂತರ ಮೇ 27 ರಂದು ಎಲ್‌ಎಸ್‌ಜಿ ವಿರುದ್ಧ ಆಡಲಿದೆ. ಆರ್‌ಸಿಬಿಯ ಕೊನೆಯ ಲೀಗ್ ಹಂತದ ಪಂದ್ಯಕ್ಕೆ ಸ್ವಲ್ಪ ಮೊದಲು ಮಾತ್ರ ಆಯ್ಕೆಗೆ ಮುಜರಬಾನಿ ಲಭ್ಯವಿರುತ್ತಾರೆ. ಭುಜದ ನೋವಿನಿಂದಾಗಿ ಹಿಂದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಜೋಶ್ ಹ್ಯಾಜಲ್‌ವುಡ್ ಆಗಮನಕ್ಕಾಗಿ ಆರ್‌ಸಿಬಿ ಕಾಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+