IPL Auction 2025: ಅಪಾಯಕಾರಿ ಬ್ಯಾಟರ್ ಫಿಲಿಪ್ ಸಾಲ್ಟ್‌ಗೆ 11.50 ಕೋಟಿ ನೀಡಿದ ಆರ್‌ಸಿಬಿ- ಈತನ ಬಗ್ಗೆ ನಿಮಗೆಷ್ಟು ಗೊತ್ತು?
ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಹಲವು ಅಚ್ಚರಿಗಳಿಗೆ ಕಾರಣವಾಗುತ್ತಿದೆ. ಅದರಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ನಿರ್ಧಾರಗಳ ಕಡೆಗೆ ಎಲ್ಲರ ಗಮನ ನೆಟ್ಟಿದೆ. ಪ್ರಮುಖವಾಗಿ ಗಮನಿಸುವುದಾದರೆ ಅಪಾಯಕಾರಿ ಎನ್ನಬಹುದಾದ ಬ್ಯಾಟರ್‌ಗಳನ್ನೇ ಆರ್‌ಸಿಬಿ ಆಯ್ಕೆ ಮಾಡುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈಗ ಆರ್‌ಸಿಬಿಯು ಇಂಗ್ಲೆಂಡ್ ಬ್ಯಾಟರ್ ಫಿಲಿಪ್ ಸಾಲ್ಟ್‌ರನ್ನು ಬರೋಬ್ಬರಿ 11.50 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಈತನ ನಿಮಗೆಷ್ಟು ಗೊತ್ತು..? ಮುಂದೆ ಓದಿ.
ಇಂಗ್ಲೆಂಡ್ ಬ್ಯಾಟರ್ ಫಿಲಿಪ್ ಸಾಲ್ಟ್‌ರನ್ನು ಸ್ಫೋಟಕ ಆರಂಭಿಕ ಬ್ಯಾಟರ್ ಎಂದೇ ಪರಿಗಣಿಸಲಾಗಿದೆ. ಅವರು ಕೆಲವೊಮ್ಮೆ ವಿಕೆಟ್ ಕೀಪರ್ ಆಗಿಯೂ ಆಡುವುದುಂಟು. ಇಂಗ್ಲೆಂಡ್‌ನ ವೇಲ್ಸ್‌ನಲ್ಲಿ ಜನಿಸಿದ ಫಿಲಿಪ್ ಸಾಲ್ಟ್ ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯೊಂದಿಗೆ ಬಾರ್ಬಡೋಸ್‌ಗೆ ತೆರಳಿಸದರು. ಅವರ ವಿದ್ಯಾಬ್ಯಾಸವು ಸರ್ರೆಯ ರೀಡ್ ಸ್ಕೂಲ್‌ನಲ್ಲಿ ಆಗಿದೆ. 15 ವಯಸ್ಸಿನಲ್ಲಿ ಕ್ರಿಕೆಟ್ ಆಡಲು ವಿದ್ಯಾರ್ಥಿವೇತನವನ್ನು ಪಡೆದ ನಂತರ ಇಂಗ್ಲೆಂಡ್‌ಗೆ ವಾಪಸ್ಸು ಮರಳಿದರು. ಫುಟ್‌ಬಾಲ್ ಆಟದಲ್ಲಿಯೂ ಆಸಕ್ತಿ ಹೊಂದಿದ್ದ ಅವರು ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಲು ಶುರುಮಾಡಿದರು.

ಮಾಜಿ ಕ್ರಿಕೆಟಿಗ ಕೀತ್ ಮೆಡ್ಲಿಕಾಟ್ ಅವರ ಶಿಫಾರಸಿನ ಮೇರೆಗೆ ಸಾಲ್ಟ್ ಅವರು ಸಸೆಕ್ಸ್ ಅಕಾಡೆಮಿಗೆ ಸೇರಿಕೊಂಡರು. ಸಾಲ್ಟ್ ಅವರು ತಮ್ಮ ಚೊಚ್ಚಲ ಕೌಂಟಿ ಪಂದ್ಯದಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಒಳಗೊಂಡಂತೆ 22 ರನ್ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದಾದ ಒಂದು ವರ್ಷದ ಬಳಿಕ ಪಾಕಿಸ್ತಾನ ತಂಡದ ವಿರುದ್ಧ ಸಾಲ್ಟ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
ಫಿಲಿಪ್ ಸಾಲ್ಟ್ ಅವರು ಮೊದಲ ಒನ್ ಡೇ ಶತಕವನ್ನು 2022 ರಲ್ಲಿ ದಾಖಲಿಸಿದರು. ಇದು ನೆದರ್ಲ್ಯಾಂಡ್ಸ್ ವಿರುದ್ಧದ ಐತಿಹಾಸಿಕ ಪಂದ್ಯದಲ್ಲಿ ದಾಕಲಾಯಿತು. ಸಾಲ್ಟ್ ಒಂದು ಇನ್ನಿಂಗ್ಸ್‌ನಲ್ಲಿ 122 ರನ್ ಗಳಿಸಿದರು. ಇಂಗ್ಲೆಂಡ್ 50 ಓವರ್‌ಗಳಲ್ಲಿ ಬರೊಬ್ಬರಿ 498 ರನ್ ಗಳಿಸಿತು. ಇದು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಮೊತ್ತವಾಗಿದೆ. 2022 ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಸಾಲ್ಟ್ ಕಾಣಿಸಿಕೊಂಡರು.
ಅವರು 21 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 653 ರನ್‌ಗಳನ್ನು ಗಳಿಸಿದ್ದಾರೆ. 89 ರನ್‌ಗಳು ಅವರ ಅತ್ಯಧಿಕ ಮೊತ್ತವಾಗಿದೆ. 74 ಬೌಂಡರಿಗಳು 34 ಸಿಕ್ಸರ್‌ಗಳನ್ನು ಬಾರಿಸಿ ಸ್ಫೋಟಕ ಬ್ಯಾಟರ್ ಎಂದೇ ಪರಿಗಣಿಸಲ್ಪಿಟ್ಟಿದ್ದಾರೆ.












Click it and Unblock the Notifications