RCB Fans: ಪಾಕಿಸ್ತಾನದಲ್ಲೂ ಆರ್‌ಸಿಬಿ ಕ್ರೇಜ್‌; ಪಿಎಸ್ಎಲ್‌ನಲ್ಲಿ ಆರ್‌ಸಿಬಿ ಜೆರ್ಸಿಯಲ್ಲಿ ಅಭಿಮಾನಿಯ ಸಂಭ್ರಮ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ, ಜನಪ್ರಿಯ ಟಿ20 ಪಂದ್ಯಾವಳಿ. ವಿಶ್ವದಾದ್ಯಂತ ಐಪಿಎಲ್ ಪಂದ್ಯಗಳನ್ನು ಕೋಟ್ಯಂತರ ಮಂದಿ ನೋಡುತ್ತಾರೆ. ಪಾಕಿಸ್ತಾನದಲ್ಲೂ ಐಪಿಎಲ್ ಜನಪ್ರಿಯವಾಗಿದೆ.

ಆರ್ ಸಿಬಿ ಐಪಿಎಲ್‌ ಟೂರ್ನಿಯ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದು. ಒಮ್ಮೆಯೂ ಕಪ್ ಗೆದ್ದಿಲ್ಲವಾದರೂ ಫ್ಯಾನ್ಸ್‌ಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ವಿಶ್ವದಾದ್ಯಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿಮಾನಿಗಳಿದ್ದಾರೆ. ಪಕ್ಕದ ಪಾಕಿಸ್ತಾನದಲ್ಲೂ ಆರ್ ಸಿಬಿ ಕ್ರೇಜ್ ಜೋರಾಗಿದ್ದು ಇತ್ತೀಚೆಗೆ ತಾನೆ ಅಭಿಮಾನಿಯೊಬ್ಬ ಆರ್ ಸಿಬಿ ಜೆರ್ಸಿ ಧರಿಸಿ ಮೈದಾನದಲ್ಲಿ ಕಾಣಿಸಿಕೊಂಡಿದ್ದು ಫೋಟೊ ವೈರಲ್ ಆಗಿದೆ.

RCB Jersey-Clad Fan Spotted at Lahore Qalandars vs Peshawar Zalmi PSL 2024 Match

ಪಾಕಿಸ್ತಾನದಲ್ಲಿ ಸದ್ಯ ಕ್ರಿಕೆಟ್ ಹಬ್ಬ. ಪಾಕಿಸ್ತಾನ್ ಸೂಪರ್ ಲೀಗ್ (PSL) 2024 ಪಂದ್ಯಾವಳಿ ನಡೆಯುತ್ತಿದ್ದು ಅಭಿಮಾನಿಗಳು ಚುಟುಕು ಕ್ರಿಕೆಟ್ ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಪಾಕಿಸ್ತಾನ್ ಸೂಪರ್ ಲೀಗ್ 2024 ರ ಸೀಸನ್ ಒಂಬತ್ತು ದಿನಗಳಲ್ಲಿ 11 ಪಂದ್ಯಗಳನ್ನು ಪೂರ್ಣಗೊಳಿಸಿದೆ.

ಪೇಶಾವರ್ ಝಲ್ಮಿ ಮತ್ತು ಲಾಹೋರ್ ಖಲಂದರ್ಸ್ ನಡುವಿನ ಇತ್ತೀಚಿನ ಮುಖಾಮುಖಿಯಲ್ಲಿ, ಪೇಶಾವರ ತಂಡದ ಧ್ವಜವನ್ನು ಬೀಸುತ್ತಿರುವ ಪ್ರೇಕ್ಷಕರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಆರ್‌ಸಿಬಿಯ ಜೆರ್ಸಿಯನ್ನು ಧರಿಸಿ ಗಮನಸೆಳೆದರು. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಫೆಬ್ರವರಿಯಲ್ಲಿ ಮೊದಲು ಲೀಗ್ ಘೋಷಿಸಿದಂತೆ ಐಪಿಎಲ್ ಮಾರ್ಚ್ 22 ರಂದು ಪ್ರಾರಂಭವಾಗುತ್ತದೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅಭಿಮಾನಿಗಳ ಖುಷಿ

ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಿದ್ದು ಆರ್ ಸಿಬಿ ಮೊದಲ ಪಂದ್ಯದಲ್ಲೇ ಯುಪಿ ವಾರಿಯರ್ಸ್ ವಿರುದ್ಧ 2 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಆರ್ ಸಿಬಿ ಅಭಿಮಾನಿಗಳು ಮಹಿಳಾ ಕ್ರಿಕೆಟ್‌ಗೂ ಮೈದಾನದಲ್ಲಿ ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳ ಉತ್ಸಾಹವನ್ನು ಕಂಡ ಆರ್ ಸಿಬಿ ಮಹಿಳಾ ಆಟಗಾರರೇ ಒಂದು ಕ್ಷಣ ಅಚ್ಚರಿಗೊಂಡರು.

ಮಾರ್ಚ್ 22ರಿಂದ ಐಪಿಎಲ್ ಪಂದ್ಯಾವಳಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ಅಭಿಮಾನಿಗಳು ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಐಪಿಎಲ್‌ನಲ್ಲಿ ಕೂಡ ಆರ್ ಸಿಬಿ ಕಪ್ ಗೆಲ್ಲಲಿ ಎಂದು ಅಭಿಮಾನಗಳು ಹಾರೈಸಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನ ಆರ್ ಸಿಬಿ ಎರಡನೇ ಪಂದ್ಯ ಫೆಬ್ರವರಿ 27ರ ಮಂಗಳವಾರ ನಡೆಯಲಿದೆ. ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಡೆ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+