RCB Team Sale: ಆರ್‌ಸಿಬಿ ಟೀಂ ಮಾರಾಟ.. ಮುಂಚೂಣಿಯಲ್ಲಿ ಇವರ ಹೆಸರು
RCB Team Sale: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು ಬೀಗಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಈ ಹಿನ್ನೆಲೆ ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಬಳಿಕ ಕಾಲ್ತುಳಿತ ಸಂಭವಿಸಿದ್ದು, ಇದು ತಂಡಕ್ಕೆ ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟಿತು. ಬಳಿಕ ತುಂಬಾ ಬೆಳವಣಿಗೆಗಳು ಆದ್ವು. ಇದೇ ವೇಳೆ ರಾಯಲ್ ಚಾಲೆಂಜರ್ಡ್ ಬೆಂಗಳೂರು ತಂಡ ಮಾರಾಟ ಮಾಡಲಾಗುತ್ತದೆ ಎನ್ನುವ ಕೂಗು ಕೇಳಿಬಂದಿತ್ತು.
ಹೌದು.. ಆರ್‌ಸಿಬಿ ಟ್ರೋಫಿ ಗೆದ್ದ ಹಿನ್ನೆಲೆ ಬೆಂಗಳೂರಿನಲ್ಲಿ ವಿಜಯೋತ್ಸವವನ್ನು ಇಟ್ಟುಕೊಳ್ಳಲಾಗಿತ್ತು. ಈ ವೇಳೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತ ಸಂಭವಿಸಿತು. ಈ ದುರ್ಘಟನೆ ನಡೆದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಕೂಗುಗಳು ಎದ್ದಿದ್ದವು. ಆದರೆ, ಇದೇ ವೇಳೆ ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಪ್ರಾಂಚೈಸಿ ಸ್ಪಷ್ಟನೆ ನೀಡಿತ್ತು. ಆದರೆ, ಇದೀಗ ಮತ್ತೆ ಆರ್‌ಸಿಬಿ ಮಾರಾಟದ ಸದ್ದು ಜೋರಾಗಿ ಕೇಳಿಬಂದಿದೆ.

ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂತಾ ಇದ್ರೆ ಅದು ಆರ್‌ಸಿಬಿ ಮಾತ್ರ. ಟೂರ್ನಿ ಆರಂಭದಿಂದಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿರದ ಆರ್‌ಸಿಬಿ ಕೊನೆಗೂ 18ನೇ ಸೀಸನ್‌ನಲ್ಲಿ ಮೊಟ್ಟ ಮೊದಲ ಟ್ರೋಫಿಗೆ ಮುತ್ತಿಟ್ಟಿತು. ಚಾಂಪಿಯನ್ ಆದ ಬಳಿಕ ತಂಡ ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿತ್ತು. ಇನ್ನು ಇತ್ತೀಚೆಗಷ್ಟೇ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಹಂಚಿಕೊಂಡಿದ್ದ ಪೋಸ್ಟ್ ಮಾಡಿದ್ದು, ಇದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು.
ಲಲಿತ್ ಮೋದಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನ ಸ್ಟೋರಿಯಲ್ಲಿ "ಆರ್‌ಸಿಬಿ ಮಾರಾಟಕ್ಕಿದೆ" (RCB FOR SALE) ಎಂದು ಬರೆದಿರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾರಾಟದ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಹೀಗೆ ಲಲಿತ್ ಮೋದಿ ಮಾಡಿರುವ ಆರ್ಸಿಬಿ ಮಾರಾಟ ಕುರಿತ ಟ್ವೀಟ್ ಹಲವು ಊಹಾಪೋಹಗಳಿಗೆ ದಾರಿ ಆದಂತಾಗಿದೆ.
ಹಾಗೆಯೇ ಆರ್‌ಸಿಬಿಯನ್ನು ಖರೀದಿ ಮಾಡಲು ಬಿಲಿಯನೇರ್ ಅದಾರ್ ಪೂನವಾಲಾ ತುದಿಗಾಲಲ್ಲಿ ನಿಂತಿದ್ದಾರೆ ಎಂದು ವರದಿಯಾಯಾಗಿದೆ. ಇವರು ಕೋವಿಡ್ ಸಮಯದಲ್ಲಿ ಕೋವಿಶೀಲ್ಡ್ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಗಿರುವ ಪೂನವಾಲಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಆ ಪೋಸ್ಟ್ ನೋಡಿದ ಬಹುತೇಕ ಮಂದಿ ಆರ್‌ಸಿಬಿ ಖರೀದಿ ಮಾಡಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿದುಕೊಂಡಿದ್ದಾರೆ.
1.5 ಲಕ್ಷ ಕೋಟಿ ರೂಪಾಯಿ ನಿವ್ವಳ ಮೌಲ್ಯ ಒಳಗೊಂಡಿರುವ ಪೂನವಾಲಾ, ಅವರು ಇದೀಗ ಐಪಿಎಲ್‌ನ ಫ್ರಾಂಚೈಸಿ ಆರ್‌ಸಿಬಿಯಲ್ಲಿ ಪಾಲು ಖರೀದಿ ಮಾಡುವ ಸಾಧ್ಯತೆಯಿದೆ. ಅವರು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ "ಸರಿಯಾದ ಮೌಲ್ಯಮಾಪನದ ಪ್ರಕಾರ ಆರ್‌ಸಿಬಿ ಒಂದು ಉತ್ತಮ ತಂಡ," ಎಂದು ಬರೆದುಕೊಂಡಿದ್ದಾರೆ. ಹೀಗೆ ಯುನೈಟೆಡ್ ಸ್ಪಿರಿಟ್ಸ್ ಒಡೆತನದ ಫ್ರಾಂಚೈಸಿಯಲ್ಲಿ ಪಾಲು ಹೊಂದಲು ಪೂನವಾಲಾ ಕಾತರದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ದೇಶದ ಅತ್ಯಂತ ಸಿರಿವಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇವರ ಒಟ್ಟು ನಿವ್ವಳ ಮೌಲ್ಯ 1.5 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಅವರ ತಂದೆ ಸೈರಸ್ ಪೂನವಾಲಾ ಕೂಡ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅವರ ಕಂಪನಿ, ಎಸ್‌ಐಟಿ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡದಿರಬಹುದು. ಆದರೆ, ಅದರ ಮೌಲ್ಯ ಸುಮಾರು 2.5 ಲಕ್ಷ ಕೋಟಿಯಿಂದ 3 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.
ಆದರೆ, ಡಿಯಾಜಿಯೊ ಪಿಎಲ್‌ಸಿ ಆರ್‌ಸಿಬಿಯಲ್ಲಿನ ತನ್ನ ಎಲ್ಲಾ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆಯೇ ಎಂದು ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಸದ್ಯ ಆರ್ಸಿಬಿ ಯುನೈಟೆಡ್ ಸ್ಪಿರಿಟ್ಸ್ ಡಿಯಾಜಿಯೊ ಪಿಎಲ್‌ಸಿ ಒಡೆತನದಲ್ಲಿ ಇದೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಲಂಡನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬ್ರಿಟಿಷ್ ಆಲ್ಕೋಹಾಲ್ ಪಾನೀಯ ಕಂಪನಿಯಾದ ಡಿಯಾಜಿಯೊದ ಅಂಗಸಂಸ್ಥೆ ಆಗಿದೆ.
ಮೂಲಗಳ ಪ್ರಜಾರ, ಆದರ್ ಪೂನವಾಲ್ಲಾ ಆರ್‌ಸಿಬಿ ಫ್ರಾಂಚೈಸಿ ಅನ್ನು ಖರೀದಿ ಮಾಡಲು ಆಸಕ್ತಿ ಹೊಂದಿರುವ ಇತರರಿಗಿಂತ ಮುಂಚೂಣಿಯಲ್ಲಿದ್ದಾರೆ. ಸುಮಾರು 52 ಬಿಲಿಯನ್ ಅಥವಾ 17,762 ಕೋಟಿ ಮೌಲ್ಯಕ್ಕೆ ಆರ್ಸಿಬಿ ಫ್ರಾಂಚೈಸಿ ಮಾರಾಟ ಆಗಲಿದೆ ಎನ್ನಲಾಗುತ್ತಿದೆ. ಆದರೆ ಪ್ರಾಂಚೈಸಿ ಕಡೆಯಿಂದ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.. ಇದೀಗ ಆರ್‌ಸಿಬಿ ಮಾರ್ಕೆಟಿಂಗ್ ವ್ಯಾಲ್ಯೂ ಎಲ್ಲಾ ಐಪಿಎಲ್ ತಂಡಗಳಿಗೆ ಹೋಲೆಕೆ ಮಾಡಿದ್ರೆ, ಟಾಪ್‌ನಲ್ಲಿದೆ. ಆದ್ದರಿಂದ ಆರ್‌ಸಿಬಿಯನ್ನು ಕೊಂಡುಕೊಳ್ಳಲು ಬಹುತೇಕ ಉದ್ಯಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಪೈಕಿ ಆದರ್ ಪೂನವಾಲ್ಲಾ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications