RCB Ellyse Perry: ಎಲ್ಲಿಸ್ ಪೆರ್‍ರಿಗೆ ಜಯಘೋಷ; ಆರ್‌ಸಿಬಿ ಅಭಿಮಾನಿಗಳ ಅಬ್ಬರಕ್ಕೆ ಕಿವಿ ಮುಚ್ಚಿಕೊಂಡ ಮುಂಬೈ ನಾಯಕಿ
ಮಹಿಳಾ ಪ್ರೀಮಿಯರ್ ಲೀಗ್ 2025ರ ಆವೃತ್ತಿ ಈಗ ಬೆಂಗಳೂರಿಗೆ ಶಿಫ್ಟ್ ಆಗಿದೆ. ಶುಕ್ರವಾರ ಹಾಲಿ ಚಾಂಪಿಯನ್ ಆರ್ ಸಿಬಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುತ್ತಿದೆ. ಆರ್ ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಆಟ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದರು. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ಎಲ್ಲಿಸ್ ಪೆರ್‍ರಿ ಆಸರೆಯಾದರು.
ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್ ಸಿಬಿ ಸ್ಫೋಟಕ ಆರಂಭವನ್ನೇ ಪಡೆಯಿತು. ನಾಯಕಿ ಸ್ಮೃತಿ ಮಂಧಾನ ಬೌಂಡರಿ ಸಿಕ್ಸರ್ ಮೂಲಕವೇ ಇನ್ನಿಂಗ್ಸ್ ಆರಂಭಿಸಿದರು. 13 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ಸಹಿತ 26 ರನ್ ಗಳಿಸಿ ಔಟಾದರು. ವ್ಯಾಟ್ ಹಾಡ್ಜ್ 9 ರನ್ ಗಳಿಸಿ ಔಟಾದರೆ, ರಾಘ್ವಿ ಬಿಸ್ಟ್ 1 ರನ್ ಗಳಿಸಿ ಔಟಾದರು. ಕನಿಕಾ ಕೂಡ 3 ರನ್ ಗಳಿಸಿ ಪೆವಿಲಿಯನ್ ಸೇರಿದರು.

ಆಸರೆಯಾದ ಎಲ್ಲಿಸ್ ಪೆರ್‍ರಿ
57 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡ ಆರ್ ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಎಲ್ಲಿಸ್ ಪೆರ್‍ರಿ ತಂಡಕ್ಕೆ ಆಸರೆಯಾದರು, 43 ಎಸೆತಗಳಲ್ಲಿ 11 ಬೌಂಡರಿ 2 ಭರ್ಜರಿ ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರು.
ಎಲ್ಲಿಸ್ ಪೆರ್‍ರಿ ಚಾಂಪಿಯನ್ ಕ್ರಿಕೆಟರ್, ಆರ್ ಸಿಬಿ ಅಭಿಮಾನಿಗಳು ಅವರನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಾರೆ. ಎಲ್ಲಿಸ್ ಪೆರ್‍ರಿ ಬ್ಯಾಟಿಂಗ್ ಮಾಡುವಾಗ ಅಭಿಮಾನಿಗಳ ಅಬ್ಬರ ಮುಗಿಲು ಮುಟ್ಟಿತ್ತು, ಯಾವ ಮಟ್ಟಿಗೆ ಅಭಿಮಾನಿಗಳು ಕಿರುಚಿದರು ಎಂದರೆ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೆಲವು ಕ್ಷಣ ಕಿವಿಗಳನ್ನು ಮುಚ್ಚಿಕೊಂಡು ನಿಂತಿದ್ದರು.
ಕೊನೆಯ ಓವರ್ ವರೆಗೂ ಬ್ಯಾಟಿಂಗ್ ಮಾಡಿದ ಅವರು , ಆರ್ ಸಿಬಿ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು.












Click it and Unblock the Notifications