RCB: ಈ ಬಾರಿ ಕನ್ನಡಿಗರಿಗೆ ಹೆಚ್ಚು ಅವಕಾಶ ಕೊಡಲಿದೆ ಆರ್‌ಸಿಬಿ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಗೆ ಮುನ್ನ ಮೆಗಾ ಹರಾಜು ನಡೆಯಲಿದ್ದು ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ಆಟಗಾರರ ಖರೀದಿ ಬಗ್ಗೆ ಲೆಕ್ಕಾಚಾರ ಆರಂಭಿಸಿವೆ. ನವೆಂಬರ್ 25, 26 ರಂದು ಮೆಗಾ ಹರಾಜು ನಡೆಯುವ ಸಾಧ್ಯತೆ ಇದೆ. ಅಕ್ಟೋಬರ್ 31ರ ಒಳಗೆ ತಂಡ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿ ನೀಡುವಂತೆ ಫ್ರಾಂಚೈಸಿಗಳಿಗೆ ಕೇಳಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್‌ನ ಜನಪ್ರಿಯ ತಂಡಗಳಲ್ಲಿ ಒಂದು, ಒಮ್ಮೆ ಕೂಡ ಕಪ್ ಗೆಲ್ಲದೇ ಇದ್ದರೂ ತಂಡಕ್ಕಿರುವ ಅಭಿಮಾನಿಗಳ ಸಂಖ್ಯೆಯೇನು ಕಡಿಮೆಯಿಲ್ಲ, ಈ ಬಾರಿ ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಫ್ರಾಂಚೈಸಿ ಸಿದ್ದವಾಗಿದೆ. ಈ ಬೆನ್ನಲ್ಲೆ ಕರ್ನಾಟಕ ಸರ್ಕಾರ ಆರ್‌ಸಿಬಿ ಮೇಲೆ ಕರ್ನಾಟಕ ಆಟಗಾರರಿಗೆ ಮನ್ನಣೆ ಕೊಡುವಂತೆ ಒತ್ತಡ ಹಾಕಿದೆ ಎಂದು ವರದಿಯಾಗಿದೆ.

RCB Faces Pressure from Karnataka Government for Local Talent in IPL 2025 Auction

ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ಈ ಬಾರಿ ಹರಾಜಿನಲ್ಲಿ ಕರ್ನಾಟಕ ಆಟಗಾರರನ್ನು ಸೇರಿಸಿಕೊಳ್ಳುವಂತೆ ಫ್ರಾಂಚೈಸಿ ಮೇಲೆ ಒತ್ತಡವಿದ್ದು, ಮೆಗಾ ಹರಾಜಿನಲ್ಲಿ ಕರ್ನಾಟಕ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಕರ್ನಾಟಕ ಆಟಗಾರರ ಕಡೆಗಣನೆ

ವಿಜಯ್ ಮಲ್ಯ ಒಡೆತನದಲ್ಲಿದ್ದಾಗ ಆರ್ ಸಿಬಿ ತಂಡದಲ್ಲಿ ಕರ್ನಾಟಕದ ಆಟಗಾರರೇ ಹೆಚ್ಚಾಗಿ ಇರುತ್ತಿದ್ದರು. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಅಕಿಲ್ ಬಾಲಕೃಷ್ಣ, ವಿನಯ್ ಕುಮಾರ್, ಮನೀಶ್ ಪಾಂಡೆ, ಕರುಣ್ ನಾಯರ್, ರಾಬಿನ್ ಉತ್ತಪ್ಪ ಅವರಂತಹ ಆಟಗಾರರು ಆರ್ ಸಿಬಿ ತಂಡದಲ್ಲಿದ್ದರೂ, ಅವರನ್ನು ಹೆಚ್ಚು ವರ್ಷಗಳು ತಂಡದಲ್ಲಿ ಇಟ್ಟುಕೊಂಡಿಲ್ಲ. ವಿಜಯ್ ಮಲ್ಯ ತಂಡದ ಒಡೆತನ ಬಿಟ್ಟ ಬಳಿಕ ಕರ್ನಾಟಕ ಆಟಗಾರರನ್ನು ಆರ್ ಸಿಬಿ ಕಡೆಗಣಿಸುತ್ತಲೇ ಬಂದಿದೆ. ಹಬ್ಬದ ವೇಳೆ ಶುಭಾಶಯ ತಿಳಿಸಲು ಹೆಸರಿಗೆ ಒಂದಿಬ್ಬರು ಆಟಗಾರರನ್ನು ಸೇರಿಸಿಕೊಳ್ಳುತ್ತದೆ.

ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಕೃಷ್ಣಪ್ಪ ಗೌತಮ್, ಕರುಣ್ ನಾಯರ್, ಮಯಾಂಕ್ ಅಗರ್ವಾಲ್‌ರಂತಹ ಪ್ರತಿಭಾವಂತ ಆಟಗಾರರ ಬಗ್ಗೆ ಕೂಡ ಆರ್ ಸಿಬಿ ಆಸಕ್ತಿ ತೋರಿಸಿಲ್ಲ. ವೈಶಾಖ್ ವಿಜಯ್ ಕುಮಾರ್, ಮನೋಜ್ ಭಾಂಡಗೆ ಮಾತ್ರ ಸದ್ಯ ತಂಡದಲ್ಲಿರುವ ಕನ್ನಡಿಗರಾಗಿದ್ದು, ಮೆಗಾ ಹರಾಜಿಗೆ ಮುನ್ನ ಇವರನ್ನು ಕೂಡ ತಂಡದಿಂದ ಕೈಬಿಡಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ 7 ಪಂದ್ಯಗಳನ್ನು ಆಡುತ್ತಿದೆ, ತವರಿನಲ್ಲಿ ತಂಡದ ಪ್ರದರ್ಶನ ಉತ್ತಮವಾಗಿಲ್ಲ, ಸ್ಥಳೀಯ ಆಟಗಾರರು ತಂಡದಲ್ಲಿದ್ದರೆ, ಇಲ್ಲಿನ ಪರಿಸ್ಥಿತಿ ಬಗ್ಗೆ ಗೊತ್ತಿರುತ್ತದೆ, ಗೆಲ್ಲುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಆದರೂ ಪ್ರತಿ ಬಾರಿ ಫ್ರಾಂಚೈಸಿ ಕನ್ನಡಿಗರನ್ನು ಕಡೆಗಣಿಸುತ್ತಲೇ ಬಂದಿದೆ. ಈ ಬಾರಿ ದಿನೇಶ್ ಕಾರ್ತಿಕ್ ತಂಡದ ಮೆಂಟರ್ ಆಗಿದ್ದು, ಸ್ಥಳೀಯ ಆಟಗಾರರಿಗೆ ಅವಕಾಶ ಸಿಗುವ ಭರವಸೆಯಿದೆ.

ಇತ್ತೀಚೆಗೆ ಮಹಾರಾಜಾ ಟ್ರೋಫಿ ಮುಕ್ತಾಯವಾಗಿದ್ದು ಹಲವು ಆಟಗಾರರು ಭರವಸೆ ಮೂಡಿಸಿದ್ದಾರೆ. ರಣಜಿ ಟ್ರೋಫಿ ನಡೆಯುತ್ತಿದ್ದು ಇದರಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಹರಾಜಿನಲ್ಲಿ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+