RCB: ಕನ್ನಡ ಬರೋದಿಲ್ವಾ...! ಪ್ರೇಮಲೋಕ ಹಾಡು ಹಾಡಿದ ಎಲ್ಲಿಸ್ ಪೆರ್‍ರಿಗೆ ಮನಸೋತ ಅಭಿಮಾನಿಗಳು

ಮಹಿಳಾ ಪ್ರೀಮಿಯರ್ ಲೀಗ್ 2025ರ ಪಂದ್ಯಾವಳಿ ಇದೀಗ ಬೆಂಗಳೂರಿಗೆ ಶಿಫ್ಟ್ ಆಗಿದೆ. ವಡೋದರಾದಲ್ಲಿ ಆಡಿರುವ ಎರಡು ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ಮನೆಯಂಗಳದಲ್ಲಿ ಆಡಲು ಸಜ್ಜಾಗಿದೆ. ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಆರ್ ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಎಲ್ಲಿಸ್ ಪೆರ್‍ರಿ ಆರ್ ಸಿಬಿ ತಂಡದ ಸ್ಟಾರ್ ಆಟಗಾರ್ತಿ, 2024ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್ ಸಿಬಿ ಚಾಂಪಿಯನ್ ಆಗಲು ಎಲ್ಲಿಸ್ ಪೆರ್‍ರಿ ಕೊಡುಗೆ ತುಂಬಾ ದೊಡ್ಡದು. ಉತ್ತಮ ಪ್ರದರ್ಶನ ನೀಡುವುದು ಮಾತ್ರವಲ್ಲ, ಕಿರಿಯ ಆಟಗಾರರಿಗೆ ತಮ್ಮ ಅನುಭವವನ್ನು ಧಾರೆ ಎರೆದರು, ತಂಡ ಸೋಲುವ ಹಂತದಲ್ಲಿದ್ದಾಗ ಮಾತನಾಡಿ ಗೆಲುವಿನ ಭರವಸೆಯನ್ನು ತುಂಬಿದ ಪೆರ್‍ರಿ ಮ್ಯಾಜಿಕ್ ಮಾಡಿದ್ದರು.

Rcb ellyse perry sing kannada song from ravichandran movie

ಪಂದ್ಯಾವಳಿಯಿಂದಲೇ ಹೊರಬೀಳುತ್ತದೆ ಎನ್ನವ ಹಂತದಲ್ಲಿ ಆರ್ ಸಿಬಿ ಫೀನಿಕ್ಸ್‌ನಂತೆ ಎದ್ದು ಬಂದು ಚಾಂಪಿಯನ್ ಆಗಿತ್ತು. ಚಾಂಪಿಯನ್ ಆದ ಬಳಿಕ ನಾಯಕಿ ಸ್ಮೃತಿ ಮಂಧಾನ ಈ ಸಲ ಕಪ್ ನಮ್ದು ಎಂದಿದ್ದನ್ನು ಅಭಿಮಾನಿಗಳು ಮರೆಯಲು ಹೇಗೆ ಸಾಧ್ಯ. ಈ ಬಾರಿ ಕೂಡ ಚಾಂಪಿಯನ್ ರೀತಿಯೇ ಆಡುತ್ತಿದ್ದು ಗೆಲುವಿನ ಓಟ ಮುಂದುವರೆಸುವ ವಿಶ್ವಾಸದಲ್ಲಿದೆ.

ಕನ್ನಡ ಬರೋದಿಲ್ವಾ ಎಂದ ಎಲ್ಲಿಸ್ ಪೆರ್‍ರಿ!

ಎಲ್ಲಿಸ್ ಪೆರ್‍ರಿ ಈ ಬಾರಿ ಕನ್ನಡ ಹಾಡೊಂದನ್ನು ಹಾಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೂಡ ಹಾಡು ಸಂತೋಷಕ್ಕೆ ಹಾಡಿಗೆ ಕುಣಿಯುವ ಮೂಲಕ ಆರ್ ಸಿಬಿ ಅಭಿಮಾನಿಗಳ ಮನಗೆದ್ದಿದ್ದ ಆರ್ ಸಿಬಿ ಆಟಗಾರ್ತಿಯರು, ಈ ಬಾರಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಮಿ. ನಾಗ್ಸ್ (ದ್ಯಾನಿಶ್ ಸೇಠ್) ನಡೆಸಿಕೊಡುವ ಆರ್ ಸಿಬಿ ಇನ್‌ಸೈಡರ್ ಕಾರ್ಯಕ್ರಮದಲ್ಲಿ ಎಲ್ಲಿಸ್ ಪೆರ್‍ರಿ, ಪ್ರೇಮಲೋಕ ಸಿನಿಮಾದ ಹಾಡು ಹೇಳಿದ್ದಾರೆ. ನಾಗ್ಸ್ ಕನ್ನಡ ಹಾಡು ಹೇಳಿಕೊಟ್ಟಿದ್ದು ಪೆರ್‍ರಿ ಅದನ್ನು ಮುದ್ದಾಗಿ ಹಾಡಿರುವುದು ಆರ್ ಸಿಬಿ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ನಂಬರ್ 1 ಫ್ಯಾನ್ಸ್ ಎಂದ ಪೆರ್‍ರಿ

ಬೆಂಗಳೂರು, ಆರ್ ಸಿಬಿ ಅಭಿಮಾನಿಗಳ ಬಗ್ಗೆ ಕೂಡ ಎಲ್ಲಿಸ್ ಪೆರ್‍ರಿ ಮಾತನಾಡಿದ್ದು, ಇಲ್ಲಿ ಎಲ್ಲವೂ ವಿಶೇಷ. ನಮ್ಮ ಫ್ಯಾನ್ಸ್ ನಂಬರ್ 1, ಬೆಂಗಳೂರು ಸುಂದರ ನಗರ. ತವರಿನ ಅಂಗಳದಲ್ಲಿ ಆಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಪೆರ್‍ರಿ ಹೇಳಿದ್ದಾರೆ.

ಇಂದು (ಶುಕ್ರವಾರ) ಸಂಜೆ 7.30 ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಆರ್ ಸಿಬಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಜಿಯೋ ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+