BBL: ಗಾಯಗೊಂಡ ಆಟಗಾರರು; ನಿವೃತ್ತಿ ಹಿಂಪಡೆದು ಬ್ಯಾಟಿಂಗ್ ಮಾಡಿದ ಕೋಚ್‌

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್‌ನಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ತಂಡದ ಹಲವು ಗಾಯಗೊಂಡ ಬಳಿಕ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡಲೂ ಆಟಗಾರರ ಕೊರತೆಯಾದ ಬಳಿಕ ಕೋಚ್ ನಿವೃತ್ತಿ ಹಿಂಪಡೆದು ಕಣಕ್ಕಿಳಿದಿದ್ದಾರೆ. ಆರ್ ಸಿಬಿ ಮಾಜಿ ಆಲ್‌ರೌಂಡರ್ ಡೇನಿಯಲ್ ಕ್ರಿಶ್ಚಿಯನ್ ಅವರೇ ಮೈದಾನಕ್ಕಿಳಿದು ಅಚ್ಚರಿ ಮೂಡಿಸಿದರು.

ಎರಡು ಆವೃತ್ತಿಯ ಹಿಂದೆ ಡೇನಿಯಲ್ ಕ್ರಿಶ್ಚಿಯನ್ ಸಿಡ್ನಿ ಸಿಕ್ಸರ್ಸ್ ತಂಡಕ್ಕಾಗಿ ಆಡಿದ್ದರು. ಬಿಬಿಎಲ್‌ 12ನೇ ಆವೃತ್ತಿಯಲ್ಲಿ ಬ್ರಿಸ್ಬೇನ್‌ ಹೀಟ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತ ಬಳಿಕ ನಿವೃತ್ತಿ ಘೋಷಿಸಿದ ಅವರು ಸಿಡ್ನಿ ಥಂಡರ್ ತಂಡದಲ್ಲಿ ಸಹಾಯಕ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.

Rcb dan christian returns retirement to bbl cricket sydney thunder

ಸೋಮವಾರ ನಡೆದ ಬ್ರಿಸ್ಬೇನ್ ಹೀಟ್ ವಿರುದ್ಧ ಕಣಕ್ಕಿಳಿದ ಅವರು, 15 ಎಸೆತಗಳಲ್ಲಿ 2 ಸಿಕ್ಸರ್ ಸಹಿತ ಅಜೇಯ 23 ರನ್ ಗಳಿಸಿದರು. ಆದರೂ ಈ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ಸ್ ಗೆಲುವು ಸಾಧಿಸಿತು.

ಉಳಿದ ಪಂದ್ಯಗಳನ್ನು ಆಡಲಿರುವ ಕ್ರಿಶ್ಚಿಯನ್

ಕಳೆದ ವಾರ ಪರ್ತ್ ಸ್ಕಾರ್ಚರ್ಸ್ ವಿರುದ್ಧದ ಪಂದ್ಯದಲ್ಲಿ ಮೈದಾನದಲ್ಲಿ ಭಯಾನಕವಾಗಿ ಡಿಕ್ಕಿ ಹೊಡೆದುಕೊಂಡಿದ್ದ ಸಿಡ್ನಿ ಥಂಡರ್ ತಂಡದ ಡೇನಿಯಲ್ ಸ್ಯಾಮ್ಸ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಗಾಯಗೊಂಡು ಆಸ್ಪತ್ರೆ ಸೇರಿದ್ದರು.

ಸ್ಯಾಮ್ಸ್‌ ತಲೆಗೆ ಪೆಟ್ಟು ಬಿದ್ದರೆ, ಕ್ಯಾಮರೂನ್ ಬ್ಯಾಂಕ್ರಾಫ್ಟ್ ಭುಜದ ಗಾಯ, ಮೂಗು ಮುರಿತದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಇದಕ್ಕೂ ಮೊದಲು ಜೇಸನ್ ಸಂಘ, ನಿಕ್ ಮ್ಯಾಡಿನ್ಸನ್ ಮತ್ತು ತನ್ವೀರ್ ಸಂಘ ಗಾಯದ ಸಮಸ್ಯೆಯಿಂದ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

ಬಿಬಿಎಲ್ ಅಥವಾ ಇನ್ಯಾಯುವುದೇ ಟಿ20 ಲೀಗ್‌ಗಳಲ್ಲಿ ವಾಪಸಾಗುವುದು ನನಗೆ ಅಸಾಧ್ಯವೇನೂ ಅಲ್ಲ. ಪಂದ್ಯಾವಳಿಯ ಅರ್ಧದಲ್ಲಿ ನಾನು ಅನಿವಾರ್ಯವಾಗಿ ತಂಡಕ್ಕೆ ವಾಪಸ್ ಬಂದಿದ್ದೇನೆ. ಫಿಟ್ ಆಗಿದ್ದೇನೆ, ಅವಕಾಶ ಸಿಕ್ಕರೆ ಮತ್ತೆ ಮೈದಾನಕ್ಕೆ ಮರಳಲು ಸಿದ್ಧವಾಗಿದ್ದೇನೆ ಎಂದು ಹೇಳಿದರು.

ಕ್ಯಾಮ್ ಬ್ಯಾಂಕ್ರಾಫ್ಟ್ ಮತ್ತು ಡ್ಯಾನ್ ಸ್ಯಾಮ್ಸ್ ಗಾಯಗೊಂಡಿದ್ದು ದುರದೃಷ್ಟಕರ. ಅವರು ಚೇತರಿಸಿಕೊಳ್ಳುತ್ತಿದ್ದು, ಇಬ್ಬರಿಗೂ ಶುಭ ಹಾರೈಸುತ್ತೇನೆ, ಇಬ್ಬರೂ ಶೀಘ್ರದಲ್ಲೇ ಮತ್ತೆ ಕಣಕ್ಕಿಳಿಯುತ್ತಾರೆ ಎಂದು ಭಾವಿಸುತ್ತೇನೆ ಎಂದರು.

ಸಿಡ್ನಿ ಥಂಡರ್ ತಂಡಕ್ಕೆ ಈ ಬಾರಿ ಪಂದ್ಯಾವಳಿಯಲ್ಲಿ ಹೊಸ ಸಮಸ್ಯೆ ಶುರುವಾಗಿದೆ. ಈಗಾಗಲೇ ಹಲವು ಆಟಗಾರರು ಗಾಯಗೊಂಡಿದ್ದರೆ. ಅಂತರಾಷ್ಟ್ರೀಯ ಆಟಗಾರರಾದ ಶೆರ್ಫೇನ್ ರುದರ್ಫೋರ್ಡ್ ಮತ್ತು ಲಾಕಿ ಫರ್ಗುಸನ್ ಕೂಡ ಐಎಲ್‌ಟಿ20 ಪಂದ್ಯಾವಳಿಗಾಗಿ ತಂಡವನ್ನು ತೊರೆಯುವ ಸಾಧ್ಯತೆ ಇದೆ.

ಥಂಡರ್ ಈಗ ಪರ್ಯಾಯ ಆಟಗಾರರನ್ನು ಸೇರ್ಪಡೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಡೇನಿಯಲ್ ಕ್ರಿಶ್ಚಿಯನ್ ನಮ್ಮ ತಂಡದಲ್ಲಿರುವುದು ನಮ್ಮ ಅದೃಷ್ಟ ಎಂದು ತಂಡದ ಜನರಲ್ ಮ್ಯಾನೇಜರ್ ಟ್ರೆಂಟ್ ಕೋಪ್ಲ್ಯಾಂಡ್ ಹೇಳಿದ್ದಾರೆ.

ಡೇನಿಯಲ್ ಕ್ರಿಶ್ಚಿಯನ್ ಐಪಿಎಲ್‌ನಲ್ಲೂ ಕೂಡ ಆಡಿದ್ದಾರೆ. ಆರ್ ಸಿಬಿ ತಂಡಕ್ಕಾಗಿ ಆಡಿದ್ದು, ವಿವಿಧ ಲೀಗ್‌ಗಳಲ್ಲಿ 18 ತಂಡಗಳಿಗಾಗಿ 409 ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾ ಪರವಾಗಿ 43 ಪಂದ್ಯಗಳನ್ನು ಗೆದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+