RCB Vs MI: ಎಲ್ಲಿಸ್ ಪೆರ್ರಿ ಅಬ್ಬರಕ್ಕೆ ನಲುಗಿದ ಮುಂಬೈ ಇಂಡಿಯನ್ಸ್: ಎಲಿಮಿನೇಟರ್ ಹಂತಕ್ಕೆ ಆರ್‌ಸಿಬಿ

ಮಂಗಳವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024ರ ಆವೃತ್ತಿಯ 19ನೇ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂಬೈ ಇಂಡಿಯನ್ (ಎಂಐ) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಗೆಲ್ಲಲೇಬೇಕಾದ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದ ಮಂಧಾನ ಪಡೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಎಲಿಮಿನೇಟರ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಎಲ್ಲಿಸ್ ಪೆರ್ರಿ ಅವರ ಅಮೋಘ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಆರ್‌ಸಿಬಿ ಸುಲಭ ಗೆಲುವು ಸಾಧಿಸಿದೆ.

RCB Clinches Playoff Spot with Commanding 7-Wicket Victory Against MI

ಟಾಸ್ ಗೆದ್ದ ಆರ್ ಸಿಬಿ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಮಾಡಲು ನಿರ್ಧರಿಸಿದರು. ಅವರ ನಿರ್ಣಯ ಮೊದಲು ಅಚ್ಚರಿ ಎನಿಸಿದರೂ, ಆರ್ ಸಿಬಿ ಬೌಲರ್ ಗಳು ನೀಡಿದ ಪ್ರದರ್ಶನ ಅವರ ನಿರ್ಣಯವನ್ನು ಸರಿ ಇದೆ ಎನ್ನುವುದನ್ನು ಸಾಬೀತು ಮಾಡಿತು.

ಉತ್ತಮ ಆರಂಭ ಪಡೆದು ಕುಸಿದ ಮುಂಬೈ

ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಹೇಯ್ಲಿ ಮ್ಯಾಥ್ಯೂಸ ಮತ್ತು ಸಜನಾ ಸಜೀವನ್ 43 ರನ್‌ಗಳನ್ನು ಕಲೆಹಾಕಿದರು. ಸೋಫಿ ಡಿವೈನ್ 6ನೇ ಓವರ್ ನ ಕೊನೆಯ ಎಸೆತದಲ್ಲಿ ಸಜನಾ ಸಜೀವನ್ ವಿಕೆಟ್ ಪಡೆದ ನಂತರ ಮುಂಬೈ ಲೆಕ್ಕಾಚಾರ ತಲೆಕೆಳಗಾಯಿತು.

ಎಲ್ಲಿಸ್ ಪೆರ್ರಿ 9ನೇ ಓವರ್ ನಲ್ಲಿ 2 ವಿಕೆಟ್ ಪಡೆದು ಮುಂಬೈ ಇಂಡಿಯನ್ಸ್‌ಗೆ ಆಘಾತ ನೀಡಿದರು. ನಾಯಕಿ ಹರ್ಮನ್ ಪ್ರೀತ್ ಅವರನ್ನು ಮೊದಲ ಎಸೆತದಲ್ಲೇ ಬೌಲ್ಡ್ ಮಾಡುವ ಮೂಲಕ ಮಿಂಚಿದರು. 11ನೇ ಓವರ್ ನಲ್ಲಿ ಮತ್ತೆ ಎರಡು ವಿಕೆಟ್ ಪಡೆದ ಅವರು ಎಂಐ ತಂಡಕ್ಕೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಬಳಿಕ 13ನೇ ಓವರ್ ನಲ್ಲಿ ಮತ್ತೆರಡು ವಿಕೆಟ್ ಪಡೆದರು. ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಆರು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. 4 ಓವರ್ ಗಳಲ್ಲಿ 15 ರನ್ ನೀಡಿದ ಅವರು 6 ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 19 ಓವರ್ ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು.

ಬ್ಯಾಟಿಂಗ್‌ನಲ್ಲೂ ಪೆರ್ರಿ ಮಿಂಚು

ಸಾಧಾರಣ ಮೊತ್ತವನ್ನು ಬೆನ್ನತ್ತಿದ ಆರ್ ಸಿಬಿ ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿತು. ಮಂಧಾನ ಮತ್ತು ಸೋಫಿ ಮೊಲಿನೊಕ್ಸ್ ಮೊದಲ ವಿಕೆಟ್‌ಗೆ 22 ರನ್ ಕಲೆಹಾಕಿದರು. ಮೊಲಿನೋಕ್ಸ್ 9 ರನ್ ಗಳಿಸಿ ಔಟಾದ ಬಳಿಕ, ನಾಯಕಿ ಮಂಧಾನ ಕೂಡ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸೋಫಿ ಡಿವೈನ್ 4 ರನ್ ಗಳಿಸಿ ಔಟಾದರು. 39 ರನ್ ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡ ಆರ್ ಸಿಬಿ ಹಿನ್ನಡೆ ಅನುಭವಿಸಿತು.

ಮೂರು ವಿಕೆಟ್ ಪತನವಾದ ಬಳಿಕ ಜೊತೆಯಾದ ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಈ ಜೋಡಿ ನಾಲ್ಕನೆ ವಿಕೆಟ್‌ಗೆ 76 ರನ್‌ಗಳ ಅಮೂಲ್ಯ ಜೊತೆಯಾಟ ಆಡುವ ಮೂಲಕ ಆರ್ ಸಿಬಿ ಗೆಲುವನ್ನು ಸುಲಭವಾಗಿಸಿತು.

ಎಲ್ಲಿಸ್ ಪೆರ್ರಿ 38 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ನೆರವಿನಿಂದ ಅಜೇಯ 40 ರನ್ ಗಳಿಸಿದರೆ, ರಿಚಾ ಘೋಷ್ 28 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 36 ರನ್ ಗಳಿಸಿದರು. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಖಚಿತ ಪಡಿಸಿಕೊಂಡ ಆರ್ ಸಿಬಿ ಎಲಿಮಿನೇಟರ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+