Rajat Patidar: ಸಚಿನ್ ತೆಂಡೂಲ್ಕರ್, ರುತುರಾಜ್ ದಾಖಲೆ ಮುರಿದ ಆರ್‌ಸಿಬಿ ನಾಯಕ ರಜತ್ ಪಟಿದಾರ್
ಆರ್‌ಸಿಬಿ vs ಪಿಬಿಕೆಎಸ್ ಪಂದ್ಯದಲ್ಲಿ ರಜತ್ ಪಾಟಿದಾರ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆದರೂ ಐಪಿಎಲ್‌ನಲ್ಲಿ ಹೊಸ ದಾಖಲೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ರಜತ್ ಪಟಿದಾರ್ ಆರ್ ಸಿಬಿ ತಂಡಕ್ಕಾಗಿ 1000 ರನ್ ಗಳಿಸಿದರು. ಈ ಸಾಧನೆ ಮಾಡಿದ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡರು. ವಿರಾಟ್ ಕೊಹ್ಲಿ ಮತ್ತು ರಜತ್ ಪಟಿದಾರ್ ಮಾತ್ರ ಈ ಸಾಧನೆ ಮಾಡಿದ್ದು, ಇಬ್ಬರ ಬಳಿಕ ಮೂರನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡರು.
18 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಕೇವಲ 23 ರನ್ ಗಳಿಸಿ ಔಟಾದರು. ಆದರೂ ಐಪಿಎಲ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ ಎನ್ನುವ ಸಾಧನೆ ಮಾಡಿದರು. ಈ ಮೈಲಿಗಲ್ಲು ತಲುಪಿದ ಭಾರತೀಯರಲ್ಲಿ ಎರಡನೇ ಅತ್ಯಂತ ವೇಗದ ಆಟಗಾರ, ಗುಜರಾತ್ ಟೈಟಾನ್ಸ್‌ನ ಸಾಯಿ ಸುದರ್ಶನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಭಾರತೀಯರು
ಸಾಯಿ ಸುದರ್ಶನ್ - 25 ಇನ್ನಿಂಗ್ಸ್
ರಜತ್ ಪಾಟಿದಾರ್ - 30 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್ - 31 ಇನ್ನಿಂಗ್ಸ್
ರುತುರಾಜ್ ಗಾಯಕ್ವಾಡ್ - 31 ಇನ್ನಿಂಗ್ಸ್
ತಿಲಕ್ ವರ್ಮಾ - 33 ಇನ್ನಿಂಗ್ಸ್
ಐಪಿಎಲ್ ಕ್ರಿಕೆಟ್‌ನಲ್ಲಿ 1000 ರನ್ ಗಳಿಸಲು ರಜತ್ ಪಾಟಿದಾರ್‌ಗೆ ಕೇವಲ 15 ರನ್‌ಗಳು ಬೇಕಾಗಿದ್ದವು, ಆರ್‌ಸಿಬಿ vs ಪಿಬಿಕೆಎಸ್ ಪಂದ್ಯದಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಾಳ್ಮೆಯಿಂದ ಬ್ಯಾಟಿಂಗ್ ಆಡಿದರೂ ಬಳಿಕ ಸಿಕ್ಸರ್ ಹೊಡೆಯುವ ಪ್ರಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು.
ಪಾಟಿದಾರ್ ತಮ್ಮ 30 ನೇ ಐಪಿಎಲ್ ಪಂದ್ಯದಲ್ಲಿ 1000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಐಪಿಎಲ್ 2022 ರಲ್ಲಿ ಲುವ್ನಿತ್ ಸಿಸೋಡಿಯಾ ಗಾಯಗೊಂಡ ಬಳಿಕ ಬದಲೀ ಆಟಗಾರನಾಗಿ ಆರ್ ಸಿಬಿ ಸೇರಿದ ರಜತ್ ಪಟಿದಾರ್ ಕೇವಲ 4 ವರ್ಷಗಳಲ್ಲೇ ತಂಡದ ನಾಯಕತ್ವ ವಹಿಸಿಕೊಳ್ಳುವ ಮಟ್ಟಕ್ಕೆ ಬೆಳೆದರು. ಉತ್ತಮ ಪ್ರದರ್ಶನ ನೀಡಿದ ಬಳಿಕ ಭಾರತ ತಂಡಕ್ಕೂ ಆಯ್ಕೆಯಾಗಿದ್ದರು. ಈಗ ಐಪಿಎಲ್‌ನ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರುತುರಾಜ್ ಗಾಯಕ್ವಾಡ್ ಮತ್ತು ತಿಲಕ್ ವರ್ಮಾ ಅವರನ್ನು ಹಿಂದಿಕ್ಕಿ ಹೊಸ ದಾಖಲೆ ಮಾಡಿದ್ದಾರೆ.
18 ವರ್ಷಗಳ ಟೂರ್ನಿಯಲ್ಲಿ ಫ್ರಾಂಚೈಸಿಯೊಂದಿಗೆ 1000 ರನ್‌ಗಳ ಗಡಿಯನ್ನು ತಲುಪಿದ ಮೂರನೇ ಭಾರತೀಯ ರಜತ್ ಪಾಟಿದಾರ್ ಕೂಡ. ವಿರಾಟ್ ಕೊಹ್ಲಿ 8000+ ರನ್‌ಗಳನ್ನು ಗಳಿಸಿದ್ದರೆ, ದೇವದತ್ ಪಡಿಕ್ಕಲ್ ಕಳೆದ ಪಂದ್ಯದಲ್ಲಿ ಆರ್ ಸಿಬಿ ಪರವಾಗಿ 1000 ರನ್ ಪೂರೈಸಿದ್ದರು.
ರಜತ್ ಪಟಿದಾರ್ ಆರ್ ಸಿಬಿ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಯಾವಾಗಲೂ ಶಾಂತವಾಗಿರುವ ಅವರು ಬ್ಯಾಟಿಂಗ್‌ನಲ್ಲಿ ಮಾತ್ರ ಅಬ್ಬರಿಸುತ್ತಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರು ಮುಖ್ಯವಾಗಿ ಎದುರಾಳಿಗಳ ಸ್ಪಿನ್ ದಾಳಿಯನ್ನು ಧ್ವಂಸ ಮಾಡುವುದಕ್ಕೆ ಹೆಸರು ಮಾಡಿದ್ದಾರೆ.
ಐಪಿಎಲ್‌ನಲ್ಲಿ 1000 ರನ್ ಗಳಿಸಿದ ಎಲ್ಲಾ ಆಟಗಾರರಲ್ಲಿ, ಪಾಟಿದಾರ್ 35 ಕ್ಕಿಂತ ಹೆಚ್ಚು ಸರಾಸರಿ ಮತ್ತು 150+ ಬ್ಯಾಟಿಂಗ್ ಮಾಡಿದ ಏಕೈಕ ಭಾರತೀಯ. ಪಾಟಿದಾರ್ ಕ್ರಿಸ್ ಗೇಲ್, ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್, ಶಿಮ್ರಾನ್ ಹೆಟ್ಮೈಯರ್ ಮತ್ತು ಟ್ರಾವಿಸ್ ಹೆಡ್ ಅವರ ಗುಂಪಿನಲ್ಲಿ ಸೇರಿದ್ದಾರೆ.












Click it and Unblock the Notifications