IPL 2024: ಆರ್ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್!
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಪ್ರಮುಖ ಆಟಗಾರರು ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದು ಸಿದ್ಧತೆ ಆರಂಭಿಸಿದ್ದಾರೆ. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ.
ಆರ್ಸಿಬಿ ಪ್ರಮುಖ ಆಟಗಾರರು ತಂಡವನ್ನು ಸೇರಿಕೊಳ್ಳುತ್ತಿದ್ದು, ಮಂಗಳವಾರ ಸಂಜೆ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಶಿಬಿರವನ್ನು ಸೇರಿಕೊಂಡಿದ್ದಾರೆ. ಇನ್ನು 10 ದಿನಗಳ ಸಮಯ ಇದ್ದು ಅಭ್ಯಾಸ ಆರಂಭಿಸಲಿದೆ.

ಫಾಫ್ ಡುಪ್ಲೆಸಿಸ್ ಜೊತೆಗೆ ಅನುಜ್ ರಾವತ್, ಮನೋಜ್ ಭಾಂಡಗೆ, ಕರಣ್ ಶರ್ಮಾ, ವೈಶಾಖ್ ವಿಜಯ್ ಕುಮಾರ್, ಮಹಿಪಾಲ್ ಲೋಮ್ರೋರ್, ಅಲ್ಜಾರಿ ಜೋಸೆಫ್ ಸೇರಿದಂತೆ ಹಲವು ಆಟಗಾರರು ತಂಡವನ್ನು ಸೇರಿಕೊಂಡಿದ್ದಾರೆ.
ಮಾರ್ಚ್ 19ರಂದು ಅನ್‌ಬಾಕ್ಸ್ ಕಾರ್ಯಕ್ರಮ
ಐಪಿಎಲ್ 2024ರ ಪಂದ್ಯಾವಳಿ ಆರಂಭಕ್ಕೆ ಮುನ್ನ ಆರ್ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಹಲವು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಅನ್‌ಬಾಕ್ಸ್ ಇವೆಂಟ್‌ಗಾಗಿ ಆರ್ ಬಿಸಿ ಈಗಾಗಲೇ ಟಿಕೆಟ್ ಮಾರಾಟ ಆರಂಭಿಸಿದೆ. ಮಾರ್ಚ್ 19ರಂದು ಕಾರ್ಯಕ್ರಮ ನಡೆಯಲಿದ್ದು, ಮನರಂಜನಾ ಕಾರ್ಯಕ್ರಮದ ಜೊತೆಗೆ ಹಲವು ಅಚ್ಚರಿಗಳು ಕೂಡ ಅಭಿಮಾನಿಗಳಿಗೆ ಕಾದಿವೆ.
ವಿರಾಟ್ ಕೊಹ್ಲಿ ಬರೋದ್ಯಾವಾಗ?
ಅಫ್ಘಾನಿಸ್ತಾನದ ವಿರುದ್ಧದ ಟಿ20 ಸರಣಿ ಬಳಿಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದರೂ ಮೊದಲನೇ ಪಂದ್ಯಕ್ಕೆ ಮುನ್ನವೇ ಅವರು ಕುಟುಂಬದ ಜೊತೆ ಸಮಯ ಕಳೆಯಲು ಸರಣಿಯಿಂದ ಹೊರಗುಳಿದರು. ಈಗ ಕೊಹ್ಲಿ ಎಲ್ಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.
ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಮಾರ್ಚ್ 19ರಂದು ಅನ್‌ಬಾಕ್ಸ್ ಕಾರ್ಯಕ್ರಮದ ವೇಳೆಗೆ ಆರ್ ಸಿಬಿ ಪಾಳಯವನ್ನು ಸೇರಿಕೊಳ್ಳಬಹುದು ಎಂದು ಹೇಳಲಾಗಿದೆ.
ಮಾರ್ಚ್ 22ರಂದು ಐಪಿಎಲ್ 2024ರ ಆವೃತ್ತಿಯ ಮೊದಲ ಪಂದ್ಯ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
2024ರ ಐಪಿಎಲ್‌ಗೆ ಆರ್ಸಿಬಿ ತಂಡ
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ದಿನೇಶ್ ಕಾರ್ತಿಕ್, ಕ್ಯಾಮೆರಾನ್ ಗ್ರೀನ್, ವೈಶಾಕ್ ವಿಜಯ್‌ಕುಮಾರ್, ಮನೋಜ್ ಭಾಂಡಗೆ, ರಜತ್ ಪಾಟಿದಾರ್, ಅನುಜ್ ರಾವತ್, ಸುಯಶ್ ಪ್ರಬುದೇಸಾಯಿ, ಆಕಾಶ್ ದೀಪ್, ರೀಸ್ ಟೋಪ್ಲಿ, ರಾಜನ್ ಕುಮಾರ್, ಹಿಮಾಂಶು ಶರ್ಮಾ, ಕರ್ನ್ ಶರ್ಮಾ, ಮಹಿಪಾಲ್ ಲೊಮ್ರೋರ್, ವಿಲ್ ಜ್ಯಾಕ್ಸ್, ಅಲ್ಜಾರಿ ಜೋಸೆಫ್, ಯಶ್ ದಯಾಲ್, ಟಾಮ್ ಕರ್ರಾನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್.












Click it and Unblock the Notifications