RCB: ವಿರಾಟ್ ಕೊಹ್ಲಿ ಶಿಷ್ಯನಿಗೆ ಆರ್‌ಸಿಬಿ ನಾಯಕತ್ವ
ಐಪಿಎಲ್ 2025ರ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕನ ಹೆಸರು ಘೋಷಿಸಿದೆ. ತಂಡದ ನಾಯಕನಾಗಿ ರಜತ್ ಪಟಿದಾರ್ ನೇಮಕವಾಗಿದ್ದಾರೆ. ಬದಲೀ ಆಟಗಾರನಾಗಿ ತಂಡಕ್ಕೆ ಬಂದ ರಜತ್ ಪಟಿದಾರ್ ಇಂದು ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. 2022ರಲ್ಲಿ 20 ಲಕ್ಷ ರೂಪಾಯಿ ಮೂಲಬೆಲೆಗೆ ತಂಡ ಸೇರಿದ್ದ ರಜತ್ ಪಟಿದಾರ್ ಈಗ ಬರೋಬ್ಬರಿ 11 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.
ಗುರುವಾರ ನಡೆದ ವಿಶೇಷ ಸಮಾರಂಭದಲ್ಲಿ ಆರ್ ಸಿಬಿ ಹೊಸ ನಾಯಕನ ಹೆಸರನ್ನು ಘೋಷಣೆ ಮಾಡಿತು. ರಜತ್ ಪಟಿದಾರ್ ಈಗಾಗಲೇ ಮಧ್ಯಪ್ರದೇಶ ತಂಡದ ನಾಯಕರಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ನಾಯಕತ್ವದಲ್ಲಿ ಮಧ್ಯಪ್ರದೇಶ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು.

ಈಗ ರಜತ್ ಪಟಿದಾರ್ ಆರ್ ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯವರೇ ಮತ್ತೊಮ್ಮೆ ನಾಯಕರಾಗುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಕೊಹ್ಲಿ ಮೇಲೆ ಯಾವುದೇ ಒತ್ತಡ ಹಾಕದೇ ಇರಲು ನಿರ್ಧರಿಸಿದ್ದು ಪಟಿದಾರ್ ಗೆ ಜವಾಬ್ದಾರಿ ನೀಡಲಾಗಿದೆ.
ವಿರಾಟ್ ಕೊಹ್ಲಿ ಹೇಳಿದ್ದೇನು?
ರಜತ್ ಪಟಿದಾರ್ ನಾಯಕತ್ವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ ಆರ್ ಸಿಬಿ ನಾಯಕರಾಗಿದ್ದಕ್ಕೆ ಶುಭಾಶಯ ತಿಳಿಸಿದ್ದಾರೆ. ನಿಮ್ಮನ್ನು ಹತ್ತಿರದಿಂದ ನೋಡಿದ್ದೇನೆ, ನಿಮ್ಮ ಬಗ್ಗೆ ನಮಗೆ ಚನ್ನಾಗಿ ಗೊತ್ತಿದೆ. ನಾನು ಮತ್ತು ಇಡೀ ತಂಡ ನಿಮಗೆ ಬೆಂಬಲ ನೀಡಲು ಸದಾ ಸಿದ್ದರಾಗಿರುತ್ತೇವೆ. ಈ ಸ್ಥಾನಕ್ಕೆ ಬರಲು ನೀವು ತುಂಬಾ ಶ್ರಮ ಪಟ್ಟಿದ್ದಿರಾ ಎಂದರು. ಇಷ್ಟು ದಿನ ಯಾವ ರೀತಿ ತಂಡಕ್ಕೆ ಬೆಂಬಲ ಕೊಟ್ಟಿದ್ದೀರಾ ಇನ್ನು ಮುಂದೆ ಕೂಡ ನಿಮ್ಮ ಬೆಂಬಲ ಹೀಗೆ ಇರಲಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
2025ರ ಐಪಿಎಲ್‌ಗೆ ಆರ್ ಸಿಬಿ ತಂಡ
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಟಿದಾರ್ (ನಾಯಕ), ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ, ಜೇಕಬ್ ಬೆಥೆಲ್, ಜೋಶ್ ಹೇಜಲ್‌ವುಡ್, ರಸಿಕ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಲುಂಗಿ ಎಂಗಿಡಿ, ಅಭಿನಂದನ್ ಸಿಂಗ್, ಮೊಹಿತ್ ರಾಥೀ, ಯಶ್ ದಯಾಳ್.












Click it and Unblock the Notifications