Ravichandran Ashwin: ಅಶ್ವಿನ್ ಆಟ ಇನ್ನಿರಲ್ಲ... ಭಾರತದ ಸ್ಪಿನ್ ಮಾಂತ್ರಿಕನಿಗೆ ‘ಗುಡ್‌ಬೈ’ ಹೇಳಿದ ಬಿಸಿಸಿಐ!
ಕ್ರಿಕೆಟ್ ಅಂದ್ರೆ ಭಾರತ... ಭಾರತ ಅಂದ್ರೆ ಕ್ರಿಕೆಟ್... ಹೀಗೆ ಅಭಿಮಾನಿಗಳು ಭಾರತದಲ್ಲಿನ ಕ್ರಿಕೆಟ್ ಪ್ರೇಮದ ಬಗ್ಗೆ ಮಾತನಾಡುತ್ತಾರೆ. ಆದರೆ ಇತ್ತೀಚೆಗೆ ಹೊಸ ಮಾತು ಕೇಳಿ ಬಂದಿತ್ತು, ಸ್ಪಿನ್ ಅಂದ್ರೆ ಅಶ್ವಿನ್... ಅಶ್ವಿನ್ ಅಂದ್ರೆ ಸ್ಪಿನ್... ಅಂತಾ ಕ್ರಿಕೆಟ್ ಲೋಕದ ಕೋಟಿ, ಕೋಟಿ ಅಭಿಮಾನಿಗಳು ಮಾತನಾಡುತ್ತಿದ್ದರು. ಮತ್ತೊಂದು ಕಡೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಈ ಅದ್ಭುತ ಆಟಗಾರ & ಸ್ಪಿನ್ ಮೋಡಿಗಾರ ಆರ್. ಅಶ್ವಿನ್ ಅತಿಹೆಚ್ಚು ವಿಕೆಟ್ ಗಳಿಸಿದ ವಿಶ್ವ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಆದರೆ ಇಂತಹ ಸಮಯದಲ್ಲೇ....
ಆರ್. ಅಶ್ವಿನ್ ಬೌಲಿಂಗ್ ಮಾಡಲು ಫೀಲ್ಡ್‌ಗೆ ಎಂಟ್ರಿ ಕೊಟ್ಟರೆ ಮುಗಿದೇ ಹೋಯ್ತು ಕಥೆ, ಒಂದೋ ಎದುರಾಳಿ ಬ್ಯಾಟ್ಸ್‌ಮನ್ ಪಡೆ ಹೆದರಿ ಓಡಿ ಹೋಗಬೇಕು, ಇಲ್ಲ ವಿಕೆಟ್ ತರಗೆಲೆ ರೀತಿ ಬೀಳುತ್ತಿರಬೇಕು. ಇಷ್ಟೆಲ್ಲಾ ಹವಾ ಇಟ್ಟಿದ್ದ ಆರ್. ಅಶ್ವಿನ್ ಅವರು ಇನ್ನೂ ಏನೇನೋ ಸಾಧನೆ ಮಾಡಿ, ದಾಖಲೆ ನಿರ್ಮಿಸುತ್ತಾರೆ ಅಂತಾ ಕೋಟ್ಯಂತರ ಅಭಿಮಾನಿಗಳು ಕಾಯ್ತಿದ್ದರು. ಹೀಗಿದ್ದಾಗಲೇ, ಅಶ್ವಿನ್ ಆಟ ಇನ್ನಿರಲ್ಲ... ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.

ಆಟ ನಿಲ್ಲಿಸಿದ ರವಿಚಂದ್ರನ್ ಅಶ್ವಿನ್!
ಭಾರತ & ಆಸ್ಟ್ರೇಲಿಯಾ ನಡುವೆ ಭೀಕರ ಟೆಸ್ಟ್ ಕದನ ನಡೆಯುತ್ತಿದ್ದು, ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟ ಪಡೆಯಲು ಸಾಕಷ್ಟು ಕಷ್ಟಪಟ್ಟು ಮುಂದೆ ನುಗ್ಗಬೇಕಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಚರ್ಚೆ ಕೂಡ ನಡೆಯುತ್ತಿದೆ, ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಲೈನ್ ಡಲ್ ಆಗಿ ಡಮ್ಮಿ ಆಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ, ರವಿಚಂದ್ರನ್ ಅಶ್ವಿನ್ ಅವರು ಭಾರತೀಯ ಕ್ರಿಕೆಟ್ ಲೋಕಕ್ಕೆ ಆಘಾತ ನೀಡಿದ್ದಾರೆ.
537 ವಿಕೆಟ್ ಉರುಳಿಸಿದ್ದ ಅಶ್ವಿನ್!
ಅಂದಹಾಗೆ, ಅಶ್ವಿನ್ ಇದೀಗ ಭಾರತೀಯ ಕ್ರಿಕೆಟ್ ತಂಡದಿಂದ ನಿವೃತ್ತಿ ಪಡೆಯುವ ಘೋಷಣೆ ಹೊರಡಿಸಿದ್ದಾರೆ. ಅಷ್ಟಕ್ಕೂ ರವಿಚಂದ್ರನ್ ಅಶ್ವಿನ್ ಭಾರತದ ಪರ 106 ಟೆಸ್ಟ್ ಮ್ಯಾಚ್ ಆಡಿ, 537 ವಿಕೆಟ್ ಉರುಳಿಸಿ ಇಡೀ ಜಗತ್ತಿನ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೆ, ರವಿಚಂದ್ರನ್ ಅಶ್ವಿನ್ ಅವರು ಮತ್ತಷ್ಟು ವಿಶ್ವದಾಖಲೆ ಕೂಡ ಮಾಡಲು ಸಜ್ಜಾಗಿದ್ದರು. ಆದರೆ ಅಶ್ವಿನ್ ಅವರ ನಿವೃತ್ತಿ ನಿರ್ಧಾರ ಹಲ್‌ಚಲ್ ಎಬ್ಬಿಸಿದೆ.
ಹೀಗೆ ಬ್ಯಾಟಿಂಗ್ ವಿಚಾರದಲ್ಲಿ ಕೂಡ ಗುಡುಗಿದ್ದ ರವಿಚಂದ್ರನ್ ಅಶ್ವಿನ್ ಅವರು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 6 ಶತಕ ಗಳಿಸಿ 14 ಅರ್ಧಶತಕ ಬಾರಿಸಿದ್ದಾರೆ. ಜೊತೆಗೆ 116 ಏಕದಿನ & 65 ಟಿ-20 ಮ್ಯಾಚ್ ಆಡಿ ಮಿಂಚಿದ್ದರು. ಇಂತಿಪ್ಪ ರವಿಚಂದ್ರನ್ ಅಶ್ವಿನ್ ಅವರು ಕ್ರಿಕೆಟ್ ಲೋಕದಿಂದ ನಿವೃತ್ತಿ ಪಡೆಯುತ್ತಿರುವ ವಿಚಾರ ಇದೀಗ ಸುನಾಮಿ ಎಬ್ಬಿಸಿದೆ. ಅಲ್ಲದೆ ಈ ವಿಚಾರವಾಗಿ ಭಾರಿ ದೊಡ್ಡ ಚರ್ಚೆ ಕೂಡ ಶುರುವಾಗಿದೆ.












Click it and Unblock the Notifications