Rashid Khan: ಕೋಪದಲ್ಲಿ ತನ್ನದೇ ತಂಡದ ಆಟಗಾರನ ಮೇಲೆ ಬ್ಯಾಟ್ ಎಸೆದ ರಶೀದ್ ಖಾನ್

2024ರ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಅಫ್ಘಾನಿಸ್ತಾನ, ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 7 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ವಿಶ್ವಕಪ್‌ನಿಂದ ಹೊರಗೆ ಹಾಕಿದ್ದಲ್ಲದೆ, ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

ಬಾಂಗ್ಲಾದೇಶದ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ 115 ರನ್‌ಗಳ ಸಣ್ಣ ಮೊತ್ತವನ್ನು ಅದ್ಭುತ ಬೌಲಿಂಗ್ ಮಾಡುವ ಮೂಲಕ ಅಫ್ಘಾನಿಸ್ತಾನ ರಕ್ಷಣೆ ಮಾಡಿಕೊಂಡಿತು. ಬಾಂಗ್ಲಾದೇಶ 105 ರನ್‌ಗಳಿಗೆ ಆಲೌಟ್ ಆಯಿತು.

Rashid Khan s Outburst at Teammate During T20 World Cup Match

ರಶೀದ್ ಖಾನ್ ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 10 ಎಸೆತಗಳಲ್ಲಿ 3 ಸಿಕ್ಸರ್ ಸಹಿತ ಅಜೇಯ 19 ರನ್ ಗಳಿಸಿದ ಅವರು, 4 ಓವರ್ ಗಳಲ್ಲಿ 23 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರು.

ಕೋಪಗೊಂಡ ರಶೀದ್ ಖಾನ್

ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ತಮ್ಮದೇ ತಂಡದ ಆಟಗಾರನ ವಿರುದ್ಧ ಕೋಪಗೊಂಡ ನಾಯಕ ರಶೀದ್ ಖಾನ್, ತಮ್ಮ ಬ್ಯಾಟ್ ಎಸೆದು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಅಫ್ಘಾನಿಸ್ತಾನ 5 ವಿಕೆಟ್ ಕಳೆದುಕೊಂಡು 93 ರನ್ ಗಳಿಸಿ ಹೆಣಗಾಡುತ್ತಿರುವಾಗ ಬ್ಯಾಟಿಂಗ್‌ಗೆ ರಶೀದ್ ಖಾನ್ ಬ್ಯಾಟಿಂಗ್ ಮಾಡಲು ಬಂದರು. ಇನ್ನಿಂಗ್ಸ್‌ನಲ್ಲಿ ಕೇವಲ 14 ಎಸೆತಗಳು ಮಾತ್ರ ಉಳಿದಿದ್ದವು. ಎರಡು ರನ್ ಗಳಿಸಲು ಸಹ ಆಟಗಾರ ಕರೀಮ್ ಜನತ್ ನಿರಾಕರಿಸಿದ ಬಳಿಕ ರಶೀದ್ ಕೋಪಗೊಂಡರು ಮತ್ತು ಬ್ಯಾಟ್ ಅನ್ನು ಕರೀಮ್ ಕಡೆಗೆ ಎಸೆದರು.

ಅಫ್ಘಾನಿಸ್ತಾನದ ಇನಿಂಗ್ಸ್‌ನ ಕೊನೆಯ ಓವರ್‌ನ ಮೂರನೇ ಎಸೆತದಲ್ಲಿ (19.3) ಈ ಘಟನೆ ನಡೆಯಿತು. ರಶೀದ್ ಅವರ ಹೊಡೆತವು ಕವರ್ ಪ್ರದೇಶದ ಕಡೆಗೆ ಹೋಗಿತ್ತು. ಎರಡನೇ ರನ್ ಓಡಲು ಸಾಧ್ಯ ಎಂದು ರಶೀದ್ ಭಾವಿಸಿದ್ದರು, ಆದರೆ ಜನತ್ ಪಿಚ್‌ನಿಂದ ಅರ್ಧದಾರಿಯಲ್ಲೇ ಹಿಂದಕ್ಕೆ ಕಳುಹಿಸಿದರು.

ಅಫ್ಘಾನಿಸ್ತಾನದ ನಾಯಕ ಕೋಪಗೊಂಡನು ಮತ್ತು ತನ್ನ ಕ್ರೀಸ್‌ಗೆ ಹಿಂತಿರುಗುವ ಮೊದಲು ತನ್ನ ಬ್ಯಾಟ್ ಅನ್ನು ಜನತ್ ಕಡೆಗೆ ಎಸೆದರು.

ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರಾಳಿ

ಬಾಂಗ್ಲಾದೇಶದ ವಿರುದ್ಧ ರೋಚಕ ಗೆಲುವಿನ ನಂತರ ಅಫ್ಘಾನಿಸ್ತಾನ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಲಿದ್ದು, ಅಲ್ಲಿ ಗೆದ್ದರೆ ಫೈನಲ್‌ನಲ್ಲಿ ಭಾರತ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸುತ್ತದೆ.

ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ತಾನ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಕೂಡ ಗೆದ್ದು ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+