Ranji Trophy: ಎರಡನೇ ಇನ್ನಿಂಗ್ಸ್‌ನಲ್ಲಿ ತಿರುಗಿಬಿದ್ದ ಕರ್ನಾಟಕ: ಕೊನೆ ದಿನ ಗೆಲುವಿಗೆ ಬೇಕು 268 ರನ್‌

ಕರ್ನಾಟಕ ಮತ್ತು ವಿದರ್ಭ ನಡುವಿನ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯ ರೋಚಕ ಘಟ್ಟಕ್ಕೆ ತಲುಪಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಂಡವನ್ನು 286 ರನ್‌ಗಳಿಗೆ ಆಲೌಟ್ ಮಾಡಿದ ವಿದರ್ಭ 176 ರನ್‌ಗಳ ಮುನ್ನಡೆ ಸಾಧಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಿರುಗೇಟು ಕೊಟ್ಟಿದೆ.

176 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ವಿದರ್ಭ 196 ರನ್‌ಗಳಿಗೆ ಆಲೌಟ್ ಆಗಿದೆ. ನಾಲ್ಕನೇ ದಿನ ಕರ್ನಾಟಕ ತಂಡ ಸಂಪೂರ್ಣವಾಗಿ ಮೇಲುಗೈ ಸಾಧಿಸಿದೆ. ವಿಧ್ವತ್ ಕಾವೇರಪ್ಪ ಮಾರಕ ಬೌಲಿಂಗ್ ಮಾಡಿದರು. 6 ವಿಕೆಟ್ ಪಡೆದ ಅವರು, ವಿದರ್ಭ ತಂಡವನ್ನು ಕಟ್ಟಿಹಾಕಿದರು. ವಿಜಯ್ ಕುಮಾರ್ ವೈಶಾಖ್ 4 ವಿಕೆಟ್ ಪಡೆದು ಕಾವೇರಪ್ಪ ಅವರಿಗೆ ಸಾಥ್ ನೀಡಿದರು.

 Ranji Trophy: Karnataka Steadies Chase with One Wicket Down in 371-Run Pursuit Against Vidarbha

ಧ್ರುವ್ ಶೋರೆ 57 ರನ್ ಗಳಿಸುವ ಮೂಲಕ ವಿದರ್ಭ ತಂಡಕ್ಕೆ ಆಸರೆಯಾದರು. ಕರುಣ್ ನಾಯರ್ 34, ಅಥರ್ವ ಟೈಡೆ 25 ರನ್, ಎಸ್ ಎಸ್ ಸರ್ವಾಟೆ 29 ರನ್ ಗಳಿಸಿದರು. ಉಳಿದ ಬ್ಯಾಟರ್ ಗಳು ಉತ್ತಮ ರನ್ ಗಳಿಸುವಲ್ಲಿ ವಿಫಲವಾದರು. 196 ರನ್‌ಗಳಿಗೆ ಆಲೌಟ್ ಆದರೂ, ವಿದರ್ಭ ಕರ್ನಾಟಕ ತಂಡಕ್ಕೆ 371 ರನ್‌ಗಳ ಬೃಹತ್ ಗುರಿ ನೀಡಿತು.

ಅತ್ಯುತ್ತಮ ಆರಂಭ ಪಡೆದುಕೊಂಡ ಕರ್ನಾಟಕ

373 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಅತ್ಯುತ್ತಮ ಆರಂಭ ಪಡೆಯಿತು. ರವಿಕುಮಾರ್ ಸಮರ್ಥ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್‌ಗೆ 101 ರನ್‌ ಕಲೆಹಾಕಿದರು. 40 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರವಿಕುಮಾರ್ ಸಮರ್ಥ್ ಎ ಸರ್ವಾಟೆಗೆ ಬೌಲ್ಡ್ ಮಾಡಿದರು.

ನಾಯಕ ಮಯಾಂಕ್ ಅಗರ್ವಾಲ್ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದು. 77 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 61 ರನ್ ಗಳಿಸಿದ್ದಾರೆ. ಅನೀಶ್ ಕೆ.ವಿ. ಅಜೇಯ 1 ರನ್ ಗಳಿಸಿದ್ದು ಐದನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.

ಕೊನೆಯ ದಿನ ಕರ್ನಾಟಕ ತಂಡದ ಗೆಲುವಿಗೆ 268 ರನ್‌ಗಳು ಬೇಕಿದೆ. ಉತ್ತಮ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಕರ್ನಾಟಕ ಐದನೇ ದಿನ ಹೋರಾಟ ಕೊಟ್ಟರೆ ದಾಖಲೆಯ ಗೆಲುವಿನ ಮೂಲಕ ಸೆಮಿಫೈನಲ್ ತಲುಪಬಹುದು.

ನಾಯಕ ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ನಿಕಿನ್ ಜೋಸ್, ಹಾರ್ದಿಕ್ ರಾಜ್‌ ಅವರು ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರೆ ಕರ್ನಾಟಕ ತಂಡ ಗೆಲುವಿನ ನಿರೀಕ್ಷೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+