Get Updates
Get notified of breaking news, exclusive insights, and must-see stories!

Rahul Dravid: ಕಾಲಿಗೆ ಗಾಯವಾಗಿದ್ದರೂ ರಾಜಸ್ಥಾನ ರಾಯಲ್ಸ್‌ ತಂಡ ಸೇರಿಕೊಂಡ ರಾಹುಲ್ ದ್ರಾವಿಡ್‌

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಈಗಾಗಲೇ ಎಲ್ಲಾ ತಂಡಗಳು ತಯಾರಿ ಆರಂಭಿಸಿವೆ. ರಾಜಸ್ಥಾನ ರಾಯಲ್ಸ್ ಕೂಡ ತಯಾರಿಯನ್ನು ಆರಂಭಿಸಿದೆ. ಬುಧವಾರದಿಂದ ತಂಡವು ಅಭ್ಯಾಸ ನಡೆಸುತ್ತಿದೆ, ಆದರೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕಾಲಿಗೆ ಗಾಯಗೊಂಡಿದ್ದು, ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡೇ ಕೋಚಿಂಗ್ ಮುಂದುವರೆಸಿದ್ದಾರೆ.

ಗಾಯಗೊಂಡಿದ್ದರೂ ನನ್ನ ಕೆಲಸ ಬಿಡಲ್ಲ ಎನ್ನುವಂತಿರುವ ರಾಹುಲ್ ದ್ರಾವಿಡ್, ಊರುಗೋಲುಗಳ ಸಹಾಯದಿಂದ ಮೈದಾನದಲ್ಲಿ ನಡೆದಾಡುತ್ತಿದ್ದು ಆಟಗಾರರಿಗೆ ಸಲಹೆ ಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕ್ಲಬ್ ಪಂದ್ಯವೊಂದನ್ನು ಆಡುವ ಸಂದರ್ಭದಲ್ಲಿ ಅವರ ಎಡಗಾಲಿಗೆ ಗಾಯವಾಗಿತ್ತು, ಒಂದು ವಾರದ ಬಳಿಕವೂ ಅವರು ಇನ್ನೂ ಗಾಯದ ನೋವಿನಿಂದ ಬಳಲುತ್ತಿದ್ದಾರೆ.

Rahul dravid attends rajasthan royals ipl 2025 camp

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಂಚಿಕೊಂಡಿದ್ದು, ಅದರಲ್ಲಿ ದ್ರಾವಿಡ್ ಎಡಗಾಲಿಗೆ ಕಟ್ಟುಪಟ್ಟಿ ಧರಿಸಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕ್ರಿಕೆಟ್ ಆಡುವಾಗ ಗಾಯಗೊಂಡಿದ್ದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಇಂದು ಜೈಪುರದಲ್ಲಿ ನಮ್ಮೊಂದಿಗೆ ಸೇರಲಿದ್ದಾರೆ ಎಂದು ಶೀರ್ಷಿಕೆ ನೀಡಿದೆ.

ಗಾಯಗೊಂಡಿದ್ದರೂ ಕೋಚಿಂಗ್ ಕೆಲಸ

ವೈದ್ಯಕೀಯ ವಾಕಿಂಗ್ ಬೂಟ್ ಧರಿಸಿದ ಅವರು ಎಡಗಾಲು ನೋವಿನ ನಡುವೆಯೂ ಅಭ್ಯಾಸದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡರು. ತಂಡದ ಯುವ ಆಟಗಾರ ರಿಯಾನ್ ಪರಾಗ್ ಜೊತೆಗೆ ಚರ್ಚೆ ನಡೆಸಿದರು. ಯಶಸ್ವಿ ಜೈಸ್ವಾಲ್ ಜೊತೆ ಕೂಡ ಕೆಲ ಸಮಯ ಕಳೆದರು. ಅಭ್ಯಾಸದಲ್ಲಿ ಪಾಲ್ಗೊಂಡಿದ್ದ ಆಟಗಾರರ ಕೈಕುಲುಕಿದರು.

ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದರೂ ಆಟಗಾರರ ಅಭ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿದ ಅವರು ಆಟಗಾರರಿಗೆ ಸಲಹೆಗಳನ್ನು ಕೊಟ್ಟರು. ರಾಜಸ್ಥಾನ ರಾಯಲ್ಸ್ ರಾಹುಲ್ ದ್ರಾವಿಡ್ ಅಭ್ಯಾಸದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡ ವಿಡಿಯೋ ಹಂಚಿಕೊಂಡಿದ್ದು, ಅಭಿಮಾನಿಗಳು ದ್ರಾವಿಡ್‌ರನ್ನು ಮನಸಾರೆ ಶ್ಲಾಘಿಸಿದ್ದಾರೆ.

ಮತ್ತೆ ರಾಜಸ್ಥಾನ ತಂಡಕ್ಕೆ ಮರಳಿದ ದ್ರಾವಿಡ್

ರಾಹುಲ್ ದ್ರಾವಿಡ್ 2011 ರಿಂದ 2015 ರವರೆಗೆ ಐದು ವರ್ಷ ರಾಜಸ್ಥಾನ ರಾಯಲ್ಸ್ ತಂಡಕ್ಕಾಗಿ ಆಡಿದರು. ಬಳಿಕ ತಂಡದ ಮೆಂಟರ್ ಆಗಿ, ಕೋಚ್ ಆಗಿ ಕೆಲಸ ಮಾಡಿದರು. ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕವಾದ ಬಳಿಕ ಐಪಿಎಲ್‌ನಿಂದ ದೂರ ಉಳಿದಿದ್ದರು. 2024ರಲ್ಲಿ ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೋಚ್ ಸ್ಥಾನದಿಂದ ಕೆಳಗಿಳಿದರು. ಬಳಿಕ ಮತ್ತೆ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ನೇಮಕವಾದರು.

ಫೆಬ್ರವರಿ 22 ರಂದು ನಸೂರ್ ಮೆಮೋರಿಯಲ್ ಶೀಲ್ಡ್‌ನಲ್ಲಿ ನಡೆದ ಕೆಎಸ್‌ಸಿಎ ಗ್ರೂಪ್ I, ಡಿವಿಷನ್ III ಲೀಗ್ ಪಂದ್ಯದಲ್ಲಿ ತಮ್ಮ ಕಿರಿಯ ಮಗ ಅನ್ವಯ್‌ ಜೊತೆ ಆಡುವ ಮೂಲಕ ಭಾರತದ ಮಾಜಿ ಮುಖ್ಯ ಕೋಚ್ ದ್ರಾವಿಡ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದರು.

ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ಅಭ್ಯಾಸ ನಡೆಸುತ್ತಿದ್ದು ಮಾರ್ಚ್ 23 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣೆಸಲಿದ್ದು, ಮೊದಲ ಪಂದ್ಯಕ್ಕೆ ಮುನ್ನ ರಾಹುಲ್ ದ್ರಾವಿಡ್ ಫಿಟ್ ಆಗುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+