Ben Stokes: ಸಿಎಸ್‌ಕೆ ತಂಡಕ್ಕೆ ಆಘಾತ ನೀಡಿದ ಬೆನ್ ಸ್ಟೋಕ್ಸ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭವಿಷ್ಯದ ನಾಯಕ ಎಂದೇ ಬಿಂಬಿಸಲಾಗಿದ್ದ ಬೆನ್ ಸ್ಟೋಕ್ಸ್ ಇದೀಗ ಚೆನ್ನೈ ಮೂಲದ ಫ್ರಾಂಚೈಸಿಗೆ ಆಘಾತ ನೀಡಿದ್ದಾರೆ. ಮುಂದಿನ ಐಪಿಎಲ್‌ನಲ್ಲಿ ಬೆನ್ ಸ್ಟೋಕ್ಸ್ ಆಡುವುದು ಬಹುತೇಕ ಅನುಮಾನವಾಗಿದೆ. ಇಂಗ್ಲೆಂಡ್ ತಂಡಕ್ಕೆ ಶುಭ ಸುದ್ದಿ ಸಿಕ್ಕಿದ್ದು, ಏಕದಿನ ಮಾದರಿಗೆ ಮರಳಲು ಸಜ್ಜಾಗಿದ್ದಾರೆ.
2019ರಲ್ಲಿ ಇಂಗ್ಲೆಂಡ್ ವಿಶ್ವಕಪ್ ಗೆಲುವಿನಲ್ಲಿ ಬೆನ್‌ಸ್ಟೋಕ್ಸ್ ಮುಖ್ಯ ಪಾತ್ರ ವಹಿಸಿದ್ದರು. 2022ರಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನಲ್ಲಿ ಕೂಡ ಸ್ಟೋಕ್ಸ್ ಕೊಡುಗೆ ಹೆಚ್ಚಾಗಿದೆ. ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದ್ದ ಸ್ಟೋಕ್ಸ್ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಲ್ಲಿ ಹೆಚ್ಚಾಗಿ ಆಡುತ್ತಿದ್ದಾರೆ.

2023ರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು ಬೆನ್‌ಸ್ಟೋಕ್ಸ್ ನಿವೃತ್ತಿಯಿಂದ ಮರಳಿ ತಂಡಕ್ಕಾಗಿ ಆಡುವಂತೆ ಒತ್ತಾಯ ಕೇಳಿಬಂದಿತ್ತು. ಇಂಗ್ಲೆಂಡ್ ತರಬೇತುದಾರ ಮ್ಯಾಥ್ಯೂ ಮೋಟ್ ಮತ್ತು ವೈಟ್-ಬಾಲ್ ನಾಯಕ ಜೋಸ್ ಬಟ್ಲರ್ ಅವರು ಸ್ಟೋಕ್ಸ್ ಬಳಿ ಚರ್ಚೆ ಮಾಡಿ ಬಳಿಕ ಏಕದಿನ ಮಾದರಿಗೆ ಮರಳಲು ನಿರ್ಧರಿಸಿದ್ದು, ಐಪಿಎಲ್‌ನಿಂದ ಹೊರಗುಳಿಯುವುದು ಬಹುತೇಕ ಖಷಿತವಾಗಿದೆ.
ಐಪಿಎಲ್‌ನಲ್ಲಿ ಆಡದಿರಲು ಕಾರಣವೇನು?
ಬೆನ್ ಸ್ಟೋಕ್ಸ್ ವಿಶ್ವಕಪ್ 2023 ರಲ್ಲಿ ಆಡುವುದು ಖಚಿತವಾಗಿದ್ದು, ಅವರು ಒಂದೂವರೆ ತಿಂಗಳ ಕಾಲ ಭಾರತದಲ್ಲಿರುತ್ತಾರೆ. ಒಂದು ವೇಳೆ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದರೆ, ನಂತರ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಕೇವಲ ಒಂದು ತಿಂಗಳು ವಿಶ್ರಾಂತಿ ಸಮಯ ಸಿಗುತ್ತದೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ನಂತರ ಅವರು ಭಾರತದಲ್ಲಿ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತ ಇಂಗ್ಲೆಂಡ್ ನಡುವಿನ ಸರಣಿ ಮುಗಿಯುತ್ತಿದ್ದಂತರೆ 2024ರ ಐಪಿಎಲ್ ಆರಂಭವಾಗಲಿದೆ. ಐಪಿಎಲ್ ಮುಗಿಯುತ್ತಿದ್ದಂತೆ 2024ರ ಟಿ20 ವಿಶ್ವಕಪ್ ಆರಂಭವಾಗಲಿದೆ.
ಇದರಿಂಗಾಗಿ ಸ್ಟೋಕ್ಸ್ ಇಂಗ್ಲೆಂಡ್‌ನಿಂದ ಸುಮಾರು 5 ತಿಂಗಳು ಹೊರಗುಳಿಯಬೇಕಾಗುತ್ತದೆ. ಅಲ್ಲದೆ ಬೆನ್‌ಸ್ಟೋಕ್ಸ್ ಮೊಣಕಾಲು ನೋವಿನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇಂಗ್ಲೆಂಡ್ ಪರಿಸ್ಥಿತಿಯಿಂದ ಹೆಚ್ಚಿನ ದಿನ ಇರುವುದು ಸ್ಟೋಕ್ಸ್ ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗಿದೆ.
ಸಂಪೂರ್ಣ ಫಿಟ್ ಆಗಿಲ್ಲ ಸ್ಟೋಕ್ಸ್
ವರದಿಯ ಪ್ರಕಾರ, ಬೆನ್ ಸ್ಟೋಕ್ಸ್ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ, ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಮಾತ್ರ ಕಾಣಿಸಿಕೊಳ್ಳಲಿದ್ದು, ಏಕದಿನ ಮಾದರಿಯಲ್ಲಿ 10 ಓವರ್ ಗಳನ್ನು ಬೌಲ್ ಮಾಡುವುದು ಅನುಮಾನವಾಗಿದೆ. 2023ರ ಐಪಿಎಲ್‌ನಲ್ಲಿ, ಸ್ಟೋಕ್ಸ್ ಹೆಚ್ಚಿನ ಪಂದ್ಯಾವಳಿಯನ್ನು ತಪ್ಪಿಸಿಕೊಂಡರು.
ಸಿಎಸ್‌ಕೆ ತಂಡಕ್ಕೆ ಹೊಸ ತಲೆನೋವು
ಬೆನ್ ಸ್ಟೋಕ್ಸ್ ಐಪಿಎಲ್ ಅನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ, ಇದು ಸಿಎಸ್‌ಕೆ ತಂಡಕ್ಕೆ ತಲೆನೋವು ತಂದಿಟ್ಟಿದೆ. ಎಂಎಸ್ ಧೋನಿ ನಿವೃತ್ತಿ ನಂತರ ಸ್ಟೋಕ್ಸ್ ಸಿಎಸ್‌ಕೆ ತಂಡವನ್ನು ಮುನ್ನಡೆಸುತ್ತಾರೆ ಎಂದು ಭಾವಿಸಲಾಗಿತ್ತು, ಈಗ ಸ್ಟೋಕ್ಸ್ ಅನಿಶ್ಚಿತತೆ ತಂಡಕ್ಕೆ ಮತ್ತೊಬ್ಬ ಸಮರ್ಪಕ ನಾಯಕನನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಿಸಿದೆ.
2023ರ ಮಿನಿ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರಿಗೆ ಸಿಎಸ್‌ಕೆ ಬರೋಬ್ಬರಿ 16.25 ಕೋಟಿ ರೂ. ನೀಡುವ ಮೂಲಕ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಈಗ ಮಿನಿ ಹರಾಜಿಗೆ ಮುನ್ನ ಪರ್ಸ್ ಉಳಿಸಿಕೊಳ್ಳಲು ಸ್ಟೋಕ್ಸ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications