ಪ್ಯಾರೀಸ್ ಒಲಿಂಪಿಕ್ಸ್: ಕ್ರೀಡಾ ಗ್ರಾಮಕ್ಕೆ ಕಾಲಿಟ್ಟ ಕೋವಿಡ್-19: ಈಜು ಬೆಳ್ಳಿ ಪದಕ ವಿಜೇತ ಅಥ್ಲೀಟ್‌ಗೆ ಸೊಂಕು
ಪ್ಯಾರೀಸ್ ಒಲಿಂಪಿಕ್ಸ್ ಸಂಭ್ರಮ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ವಿಶ್ವದ ಕ್ರೀಡಾಭಿಮಾನಿಗಳ ಚಿತ್ತ ಕದ್ದಿರುವ ಈ ಕ್ರೀಡಾ ಕೂಟವನ್ನು ಯಶಸ್ವಿಯಾಗಿ ಆಯೋಜಿಸಲು ಭರ್ಜರಿ ಸಿದ್ಧತೆ ನಡೆದಿವೆ. ಈ ನಡುವೆ ಪ್ಯಾರೀಸ್ ಮೈದಾನದಿಂದ ಆತಂಕಕಾರಿ ಸುದ್ದಿಯೊಂದು ಹೊರ ಬಿದ್ದಿದೆ.
ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಈಗಾಗಲೇ ಪದಕಗಳ ಬೇಟೆಯನ್ನು ಹಲವು ದೇಶಗಳು ಆರಂಭಿಸಿವೆ. ಭಾರತ ಸಹ 10 ಮೀಟರ್ ಶೂಟಿಂಗ್‌ನಲ್ಲಿ ಮೊದಲ ಕಂಚು ಪಡೆದಿದೆ. ಈ ಮಧ್ಯ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ, ಬೆಳ್ಳಿ ಪದಕ ವಿಜೇತ ಕ್ರೀಡಾ ಪಟು ಆಡಮ್ ಪೀಟಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಈಗ ಅವರು ರಿಲೇ ರೇಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಸ್ಪರ್ಧೆಯ ಫೈನಲ್‌ಗೂ ಮುನ್ನ ಕೊರಳಲ್ಲಿ ಏನೋ ಸಿಕ್ಕಿಕೊಂಡ ಹಾಗೆ ಅನಿಸಿತು. ಸ್ಪರ್ಧೆಗೂ ಮುನ್ನವೇ ಆರೋಗ್ಯ ಸರಿ ಇರಲಿಲ್ಲ ಎಂದು ಪಿಟಿ ಬಹಿರಂಗ ಪಡಿಸಿದ್ದಾರೆ.
ಅಂತಿಮ ಪಂದ್ಯದ ಕೆಲವೇ ಗಂಟೆಗಳ ನಂತರ, ಅವರಲ್ಲಿನ ರೋಗಲಕ್ಷಣಗಳು ಕಾಣಲು ಆರಂಭವಾದವು. ಸೋಮವಾರ ಬೆಳಗ್ಗೆ ಅವರ ಕೋವಿಡ್ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ ಇರುವುದು ಧೃಡ ಪಟ್ಟಿದೆ. ನಂತರ ಅವರು ಕೋವಿಡ್ ಪಾಸಿಟಿವ್ ಎಂದು ಅಧಿಕೃತವಾಗಿ ದೃಢಪಡಿಸಿದರು.
ಅಮೆರಿಕದ ನಿಕ್ ಫಿಂಕ್ ಅವರೊಂದಿಗೆ ಪಿಟಿ ಬೆಳ್ಳಿ ಪದಕ ಗೆದ್ದರು. ಇಬ್ಬರೂ ಈಜುಗಾರರು ಇಟಲಿಯ ನಿಕೊಲೊ ಮಾರ್ಟಿನೆಂಗಿಗಿಂತ 0.02 ಸೆಕೆಂಡ್ ಹಿಂದೆ ಮುಗಿಸಿದರು. ನಿಕೊಲೊ ಚಿನ್ನದ ಪದಕ ವಶಪಡಿಸಿಕೊಂಡರು.
ಆಡಮ್ ಪೀಟಿ ಯಾರು?
ಆಡಮ್ ಪೀಟಿ ಇಂಗ್ಲೆಂಡ್‌ನ ಉಟೊಕ್ಸೆಟರ್ ಮೂಲದವರು. ಅವರನ್ನು ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಪರಿಣಿತ ಎಂದು ಪರಿಗಣಿಸಲಾಗಿದೆ. ಪಿಟಿ ಈ ಹಿಂದೆ 2016ರ ಒಲಿಂಪಿಕ್ಸ್‌ನಲ್ಲಿ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದು 24 ವರ್ಷಗಳಲ್ಲಿ ಪುರುಷ ಈಜುಗಾರ ಇಂಗ್ಲೆಂಡ್ ದೇಶಕ್ಕಾಗಿ ಗೆದ್ದ ಮೊದಲ ಪದಕವಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಅವರು ತಮ್ಮ ಪ್ರಶಸ್ತಿಯನ್ನು ಉಳಿಸಿಕೊಂಡರು. ಅವರು ಒಲಿಂಪಿಕ್ ಪ್ರಶಸ್ತಿಯನ್ನು ಉಳಿಸಿಕೊಂಡ ಮೊದಲ ಬ್ರಿಟಿಷ್ ಈಜುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆಡಮ್ ಸಾಧನೆ
ವಿಶೇಷವೆಂದರೆ ಪಿಟಿ ಎಂಟು ಬಾರಿ ವಿಶ್ವ ಚಾಂಪಿಯನ್. ಅಷ್ಟೇ ಅಲ್ಲದೆ ಅವರು 16 ಬಾರಿ ಯುರೋಪಿಯನ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಅವರು 4 ಬಾರಿ ಕಾಮನ್‌ವೆಲ್ತ್ ಚಾಂಪಿಯನ್ ಕೂಡ ಹೌದು. 50ಮೀ ಮತ್ತು 100ಮೀ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಗಳಲ್ಲಿಯೂ ಪಿಟಿ ವಿಶ್ವ ದಾಖಲೆ ಹೊಂದಿದ್ದಾರೆ. ಅವರು 14 ಬಾರಿ ವಿಶ್ವದಾಖಲೆ ಮುರಿದ ದಾಖಲೆ ಹೊಂದಿದ್ದಾರೆ.
ಕೆಲವು ದಿನಗಳ ಹಿಂದೆ, ಆಸ್ಟ್ರೇಲಿಯಾದ ಐವರು ಮಹಿಳಾ ಆಟಗಾರರ ಕೋವಿಡ್ ಕಾಣಿಸಿಕೊಂಡಿತ್ತು.












Click it and Unblock the Notifications