Paris Olympics 2024: ಸಿಂಧು, ಲಕ್ಷ್ಯ ಸೇನ್ ಭರ್ಜರಿ ಗೆಲುವು
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಹಾಗೂ ಲಕ್ಷ್ಯ ಸೇನ್ ಅವರು ಗುಂಪು ಹಂತದಲ್ಲಿ ಸೊಗಸಾದ ಪ್ರದರ್ಶನ ನೀಡಿದ್ದು, ಗೆಲುವು ಸಾಧಿಸಿದ್ದಾರೆ. ಈ ಮೂಲಕ ಲಕ್ಷ್ಯ ಸೇನ್ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಪಿವಿ ಸಿಂಧು ಎರಡು ನೇರ ಸೆಟ್‌ಗಳಲ್ಲಿ ಕ್ರಿಸ್ಟಿನ್ ಕುಬಾ ಅವರನ್ನು ಮಣಿಸಿ ಮುನ್ನಡೆದರು. ಸಿಂಧು ಅವರ ಗ್ಯಾಪ್ ಶಾಟ್, ಕ್ರಾಸ್ ಕೋರ್ಟ್ ಶಾರ್ಟ್, ಸ್ಯ್ನಾಷ್‌ಗಳಿಗೆ ಉತ್ತರಿಸಲು ಎದುರಾಳಿ ಆಟಗಾರ್ತಿ ವಿಫಲರಾದರು. ಹೀಗಾಗಿ ಸಿಂಧು ಸುಲಭವಾಗಿ ಪಂದ್ಯವನ್ನು ಗೆದ್ದು ಮೂರನೇ ಪದಕದ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ.

2016ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ, 2020ರ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದಿರುವ ಸಿಂಧು ಅವರು ಈ ಬಾರಿ ಮೂರನೇ ಪದಕದ ಕನಸು ಕಾಣುತ್ತಿದ್ದಾರೆ. ಸಿಂಧು 21-5, 21-10 ರಿಂದ ಎಸ್ಟೋನಿಯಾದ ಕ್ರಿಸ್ಟನ್ ವಿರುದ್ಧ ಏಕ ಪಕ್ಷೀಯ ಜಯ ಸಾಧಿಸಿದರು.
ಲಕ್ಷ್ಯ ಸೇನ್ ಜಯ
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಸೇನೆ, ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ವಿರುದ್ಧ ಅಮೋಘ ಜಯ ಸಾಧಿಸಿದರು. ಎಲ್ ಗುಂಪಿನ ಹಂತದ ಪಂದ್ಯದಲ್ಲಿ ಲಕ್ಷ್ಯ ಸೇನ್ ಎರಡು ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಲಕ್ಷ್ಯ ಸೇನ್ ಅವರು ಕ್ಲಾಸಿಕ್ ಆಟದ ಪ್ರದರ್ಶನ ನೀಡಿದರು. ತಮಗಿಂತ ಹೆಚ್ಚಿನ ಶ್ರೇಯಾಂಕಿತ ಇಂಡೋನೇಷ್ಯಾದ ಆಟಗಾರನ ವಿರುದ್ಧ ಲಕ್ಷ್ಯ ಸೇನ್ 21-18, 21-12 ರಿಂದ ಜಯ ಸಾಧಿಸಿದರು.
ಈ ಜಯದ ಮೂಲಕ ಲಕ್ಷ್ಯ ಸೇನ್ ಅವರು ಮುಂದಿನ ಹಂತಕ್ಕೆ ಕ್ವಾಲಿಫೈ ಆಗಿದ್ದಾರೆ.












Click it and Unblock the Notifications