ಇಂದಿನಿಂದ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟ: ಜುಲೈ 26ಕ್ಕೆ ಉದ್ಘಾಟನೆ: ನಾಳೆ ಭಾರತೀಯ ಕ್ರೀಡಾ ಪಟುಗಳು ಕಣಕ್ಕೆ

ವಿಶ್ವ ಟಿ20 ವಿಶ್ವಕಪ್‌ ಮುಗಿದ ಬಳಿಕ ಕೆಲವು ವಾರಗಳ ಕಾಲ ತಣ್ಣಗಿದ್ದ, ಕ್ರೀಡಾ ಚಟುವಟಿಕೆಗಳು ಮತ್ತೆ ಅದ್ಧೂರಿಯಿಂದ ಆರಂಭವಾಗಲಿವೆ. ಈ ಬಾರಿ ಒಲಿಂಪಿಕ್ಸ್‌ ಪ್ಯಾರೀಸ್‌ನಲ್ಲಿ ನಡೆಯಲಿದ್ದು, ಇಂದು (ಜುಲೈ 24) ರಿಂದ ಕ್ರೀಡಾ ಕೂಟಗಳು ಆರಂಭವಾಗಲಿವೆ. ಭಾರತೀಯ ಕ್ರೀಡಾ ಪಟುಗಳು ನಾಳೆ ಅಖಾಡ ಪ್ರವೇಶಿಸಲಿದ್ದಾರೆ.

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗಾಗಿ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಒಲಿಂಪಿಕ್ಸ್‌ ಮೂರನೇ ಬಾರಿಗೆ ಫ್ರಾನ್ಸ್‌ನಲ್ಲಿ ಯೋಜಿಸಲಾಗುತ್ತಿದೆ. ಈ ಹಿಂದೆ 1900 ರಲ್ಲಿ ಮತ್ತು ನಂತರ 1924 ರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಿತ್ತು. ಜುಲೈ 26 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಈ ಬಾರಿ ವಿಶೇಷ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿದೆ.

Paris Olympic Games 2024 Events Begin on July 24 with Football and Rugby Sevens

ಎಷ್ಟು ದೇಶಗಳು ಭಾಗಿ?

206 ದೇಶಗಳ ಕ್ರೀಡಾ ಪಟುಗಳು ಅಖಾಡ ಪ್ರವೇಶಿಸಲಿದ್ದಾರೆ. 18 ದಿನಗಳ ಕಾಲ ನಡೆಯುವ ಕ್ರೀಡಾ ಹಬ್ಬದಲ್ಲಿ ಕ್ರೀಡಾ ಪಟುಗಳು ಪದಕದ ಬೇಟೆ ನಡೆಸಲಿದ್ದಾರೆ. ಭಾರತೀಯ 117 ಕ್ರೀಡಾಪಟುಗಳು ಒಟ್ಟು 16 ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ.

ಜುಲೈ 24 ರಂದು ಫುಟ್‌ಬಾಲ್ ಮತ್ತು ರಗ್ಬಿ ಸೆವೆನ್ಸ್ ಪಂದ್ಯಗಳು ನಡೆಯಲಿವೆ. ಫುಟ್‌ಬಾಲ್‌ನಲ್ಲಿ ಬಿ ಮತ್ತು ಸಿ ಗುಂಪಿನಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಇದರಲ್ಲಿ ಕೊಪಾ ಅಮೇರಿಕಾ 2024 ಟ್ರೋಫಿ ಗೆದ್ದ ಅರ್ಜೆಂಟೀನಾ ತಂಡ ಬಿ ಗುಂಪಿನಲ್ಲಿ ಮೊರೊಕ್ಕೊ ತಂಡದೊಂದಿಗೆ ಪೈಪೋಟಿ ನಡೆಸಲಿದೆ. ಯುರೋ 2024 ಗೆದ್ದ ಸ್ಪೇನ್ ತಂಡ ಉಜ್ಬೇಕಿಸ್ತಾನ್ ತಂಡದ ವಿರುದ್ಧ ಪಂದ್ಯವನ್ನು ಆಡಲಿದೆ. ಈ ಎರಡೂ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 6:30ಕ್ಕೆ ಆರಂಭವಾಗಲಿವೆ.

ರಗ್ಬಿ ಸೆವೆನ್ಸ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾವು ಪೂಲ್ ಬಿಯಲ್ಲಿ ಸಮೋವಾ ತಂಡವನ್ನು ಎದುರಿಸಲಿದೆ, ಆದರೆ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಜುಲೈ 25 ರಂದು ಬೆಳಿಗ್ಗೆ 1 ಗಂಟೆಗೆ ಪ್ರಾರಂಭವಾಗುತ್ತದೆ.

ಜುಲೈ 25ಕ್ಕೆ ಆರ್ಚರಿ

ಭಾರತೀಯ ಆರ್ಚರಿ ತಂಡವು ಜುಲೈ 25 ರಂದು ನಡೆಯಲಿದೆ
2024 ರ ಒಲಿಂಪಿಕ್ಸ್‌ನಲ್ಲಿ ಜುಲೈ 25 ರಂದು ನಡೆಯಲಿರುವ ಈವೆಂಟ್‌ಗಳಲ್ಲಿ ಭಾರತೀಯ ಕ್ರೀಡಾ ಪಟುಗಳು ಅಂಗಳ ಪ್ರವೇಶಿಸಲಿದ್ದಾರೆ.

ಮಹಿಳೆಯರ ವೈಯಕ್ತಿಕ ಶ್ರೇಯಾಂಕದ ಸುತ್ತಿನ ಸ್ಪರ್ಧೆಯ ಹೊರತಾಗಿ, ಆರ್ಚರಿಯಲ್ಲಿ ಪುರುಷರ ವೈಯಕ್ತಿಕ ಶ್ರೇಯಾಂಕದ ಸುತ್ತಿನ ಸ್ಪರ್ಧೆಯೂ ಇರುತ್ತದೆ. ಇದರಲ್ಲಿ ಭಾರತೀಯ ಮಹಿಳೆಯರಿಂದ ದೀಪಿಕಾ ಕುಮಾರಿ, ಅಂಕಿತಾ ಭಕತ್ ಮತ್ತು ಭಜನ್ ಕೌರ್ ಕಾಣಿಸಿಕೊಂಡರೆ, ಪುರುಷರ ಕಡೆಯಿಂದ ರಮೇಶ್ ಪ್ರವೀಣ್ ಜಾಧವ್, ತರುಣದೀಪ್ ರಾಯ್ ಮತ್ತು ಧೀರಜ್ ಬೊಮ್ಮದೇವರ ಕಾಣಿಸಿಕೊಳ್ಳಲಿದ್ದಾರೆ.

ಐತಿಹಾಸಿಕ ಉದ್ಘಾಟನೆ

ವಾಸ್ತವವಾಗಿ, ಪ್ಯಾರಿಸ್ ಒಲಿಂಪಿಕ್ಸ್ 2024 ರ ಉದ್ಘಾಟನಾ ಸಮಾರಂಭವು ಐತಿಹಾಸಿಕವಾಗಿರುತ್ತದೆ, ಏಕೆಂದರೆ ಇದು ಕ್ರೀಡಾಂಗಣದಲ್ಲಿ ಅಲ್ಲ, ಅದರ ಹೊರಗೆ ನಡೆಯಲಿದೆ. ಒಲಿಂಪಿಕ್ಸ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭವು ಹೊರಾಂಗಣದಲ್ಲಿ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್ 2024 ರ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆ ಸೀನ್ ನದಿಯಾಗಿದ್ದು, ಈ ನದಿಯು ಪ್ಯಾರಿಸ್ ನಗರದ ಹೃದಯಭಾಗದಲ್ಲಿ ಹರಿಯುತ್ತದೆ.

ಈ ನದಿಯ ದಡದಲ್ಲಿ ಅನೇಕ ಐತಿಹಾಸಿಕ ಘಟನೆಗಳು ನಡೆದಿವೆ. ಆಚರಣೆಯ ಸಮಯದಲ್ಲಿ, ನದಿಯಲ್ಲಿ ಭವ್ಯವಾದ ದೋಣಿ ಮೆರವಣಿಗೆಯನ್ನು ಸಹ ಆಯೋಜಿಸಲಾಗುತ್ತದೆ, ಇದರಲ್ಲಿ ಎಲ್ಲಾ ದೇಶಗಳ ಕ್ರೀಡಾಪಟುಗಳು ತಮ್ಮ ರಾಷ್ಟ್ರೀಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+