ಪಾಕ್ ಮಣಿಸಿದ ಕ್ರಿಕೆಟ್ ಶಿಶುಗಳು: ಬಾಬರ್ ಆಜಂ ಪಡೆಗೆ ವಿಶ್ವಕಪ್‌ನಲ್ಲಿ ಇನ್ನು ಕಷ್ಟಕಷ್ಟ!

ಪಾಕಿಸ್ತಾನ ತಂಡ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಅಖಾಡದಲ್ಲಿ ಭರ್ಜರಿ ಮುಖಭಂಗವನ್ನ ಅನುಭವಿಸಿದೆ. ಅದರಲ್ಲೂ ಕ್ರಿಕೆಟ್ ಶಿಶುಗಳ ಎದುರು ಬಲಶಾಲಿ ಪಾಕಿಸ್ತಾನ ಕ್ರಿಕೆಟ್ ತಂಡ ಹೀನಾಯ ಸೋಲು ಕಂಡಿದೆ. ಹಾಗಾದ್ರೆ ಪಾಕಿಸ್ತಾನ ಟೀಂ ವಿರುದ್ಧ ಹೇಗಿತ್ತು ಅಫ್ಘಾನಿಸ್ತಾನ ತಂಡದ ವಿಜಯ ಯಾತ್ರೆ? ಪಾಕ್ ತಂಡ ಈ ಸೋಲಿನ ಮೂಲಕ ವಿಶ್ವಕಪ್‌ನಲ್ಲಿ ಹೇಗೆಲ್ಲಾ ಸಮಸ್ಯೆ ಎದುರಿಸಲಿದೆ?

ಪಾಕಿಸ್ತಾನ ತಂಡ ಸ್ಥಿರವಾಗಿ ಆಡಲು ಪರದಾಡುತ್ತಿದ್ದು ಸಾಲು ಸಾಲು ಸೋಲಿನಿಂದ ಮತ್ತೆ ಕಂಗೆಟ್ಟಿದೆ. ಈ ಬಾರಿ ವಿಶ್ವಕಪ್ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿ ಮೊದಲ ಎರಡು ಮ್ಯಾಚ್‌ಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು ಪಾಕಿಸ್ತಾನ ಕ್ರಿಕೆಟ್ ತಂಡ. ಆದರೆ ಯಾವಾಗ ಭಾರತ ವಿರುದ್ಧ ಮ್ಯಾಚ್ ಆಡಿತೋ, ಅಲ್ಲಿಂದ ಶುರುವಾದ ಪಾಕಿಸ್ತಾನ ತಂಡದ ಸೋಲಿನ ಸರಪಳಿ ಈಗಲೂ ಮುಗಿದಿಲ್ಲ. ಅದ್ರಲ್ಲೂ ಭಾರತದ ವಿರುದ್ಧ ಸೋತ ಬಳಿಕ ಆಸ್ಟ್ರೇಲಿಯಾ ತಂಡದ ವಿರುದ್ಧ 368 ರನ್‌ಗಳ ಗುರಿ ಬೆನ್ನತ್ತಿ ಆಲೌಟ್ ಆಗಿತ್ತು ಪಾಕಿಸ್ತಾನ ಇದೀಗ ಕ್ರಿಕೆಟ್ ಶೀಶು ಅಂತಲೇ ಕರೆಸಿಕೊಳ್ಳುವ ಅಫ್ಘಾನಿಸ್ತಾನ ವಿರುದ್ಧವೂ ಸೋತು ಸುಣ್ಣವಾಗಿದೆ.

Pakistan is in big trouble after losing the game against Afghanistan in ICC 2023 World Cup

ಪಾಕಿಸ್ತಾನ ಸೋತಿದ್ದು ಹೇಗೆ ಗೊತ್ತಾ?

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 22ನೇ ಪಂದ್ಯದಲ್ಲಿ ಅಫ್ಘಾನ್ ವಿರುದ್ಧ ಪಾಕಿಸ್ತಾನ ಸವಾಲಿನ ಮೊತ್ತ ಕಲೆಹಾಕಿ ಭರವಸೆ ಮೂಡಿಸಿತ್ತು. ಆದ್ರೆ ಪಾಕಿಸ್ತಾನ ಟೀಂನ ಹಣೆಬರಹ ಗೊತ್ತಾಗಿದ್ದು 2ನೇ ಇನ್ನಿಂಗ್ಸ್ ಶುರುವಾದಾಗ. ಪಾಕಿಸ್ತಾನ ತಂಡ 283 ರನ್‌ಗಳ ಗುರಿ ನೀಡಿದ್ರು ಅಫ್ಘಾನಿಸ್ತಾನ ತಂಡವನ್ನ ಕಟ್ಟಿಹಾಕಲು ಪರದಾಡುತ್ತಿತ್ತು. ಅಂತಿಮವಾಗಿ, ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತಂಡ ಪಾಕಿಸ್ತಾನ ತಂಡಕ್ಕೆ ಈ ಪಂದ್ಯದಲ್ಲಿ ಪಾಠ ಕಲಿಸಿಬಿಟ್ಟಿತು.

ಮೊದಲು ಬ್ಯಾಟ್ ಮಾಡಿದರೂ ಉಪಯೋಗವಿಲ್ಲ

ಪಾಕಿಸ್ತಾನದ ಪರ ಇನ್ನಿಂಗ್ಸ್ ಆರಂಭಿಸಿದ, ಅಬ್ದುಲ್ಲಾ ಶಫೀಕ್ ಹಾಗೂ ಇಮಾಮ್-ಉಲ್-ಹಕ್ ಜೋಡಿ ಮೊದಲ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನೀಡಿತು. ಹಾಗೇ, 22 ಎಸೆತಗಳಲ್ಲಿ 17 ರನ್ ಗಳಿಸಿ ಆಡುತ್ತಿದ್ದ ಇಮಾಮ್-ಉಲ್-ಹಕ್ ಅಜ್ಮತುಲ್ಲಾ ಒಮರ್ಜಾಯ್ ಬೌಲಿಂಗ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ಬಾಬರ್ ಅಜಂ ಅಫ್ಘಾನಿಸ್ತಾನ ಬೌಲರ್‌ಗಳನ್ನ ಕಾಡಿದ್ರು. ಈ ವೇಳೆ 75 ಎಸೆತಗಳಲ್ಲಿ 5 ಬೌಂಡರಿ & 2 ಸಿಕ್ಸರ್‌ಗಳ ಮೂಲಕ 58 ರನ್ ಬಾರಿಸಿ ಔಟಾದರು ಅಬ್ದುಲ್ಲಾ ಶಫೀಕ್.

ಆ ನಂತ್ರ ಮೊಹಮ್ಮದ್ ರಿಜ್ವಾನ್ ಕೇವಲ 8 ರನ್‌ಗಳಿಗೆ ವಿಕೆಟ್‌ನ ಒಪ್ಪಿಸಿದರು. ಬಾಬರ್ ಅಜಂ 92 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 74 ರನ್ ಗಳಿಸಿದ್ರೆ, ಸೌದ್ ಶಕೀಲ್ 34 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 25 ರನ್ ಗಳಿಸಿದ್ರು. ಹೀಗೆ ಎದ್ದೂ.. ಬಿದ್ದು.. ಪಾಕ್ ಟೀಂ 282 ರನ್ ಗಳಿಸಿತ್ತು. ಆದ್ರೆ ಈ ಸವಾಲಿನ ಮೊತ್ತ ಕೊಟ್ಟಿದ್ದರೂ ಪಾಕಿಸ್ತಾನ ಕ್ರಿಕೆಟ್ ತಂಡ ಜಯ ಕಾಣುವಲ್ಲಿ ಪರದಾಡಿತು. ಅಫ್ಘಾನಿಸ್ತಾನ ತಂಡದ ದಾಂಡಿಗರು ಪಾಕಿಸ್ತಾನ ಬೌಲಿಂಗ್‌ಗೆ ತಕ್ಕ ಉತ್ತರ ನೀಡಿ ಬರೋಬ್ಬರಿ 8 ವಿಕೆಟ್‌ಗಳ ಅಂತರದಲ್ಲಿ ಗೆಲುವು ಕಂಡರು. 283 ರನ್‌ಗಳ ಗುರಿ ಬೆನ್ನುಹತ್ತಿದ್ದ ಅಫ್ಘಾನಿಸ್ತಾನ ತಂಡ ಬರೋಬ್ಬರಿ 286 ರನ್ ಗಳಿಸಿ, ಇನ್ನೂ 1 ಓವರ್ ಬಾಕಿ ಇರುವಂತೆ ಪಾಕಿಸ್ತಾನ ಬೌಲರ್‌ಗಳ ಚಳಿ ಬಿಡಿಸಿತು.

Pakistan is in big trouble after losing the game against Afghanistan in ICC 2023 World Cup

ಈ ಗೆಲುವಿನ ಮೂಲಕ ಅಫ್ಘಾನ್ ಟೀಂ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಅಂಕಪಟ್ಟಿಯಲ್ಲಿ ದಿಢೀರ್ 6ನೇ ಸ್ಥಾನಕ್ಕೆ ಏರಿಕೆ ಕಂಡಿದ್ದು, ಇಂಗ್ಲೆಂಡ್ ತಂಡ ಕೊನೆಯ ಸ್ಥಾನದಲ್ಲಿ ಇದ್ದರೆ, ಭಾರತ ಮೊದಲ ಸ್ಥಾನದಲ್ಲಿ ವಿಜೃಂಭಿಸುತ್ತಿದೆ. ಈ ಮಧ್ಯೆ ಅಂಕಪಟ್ಟಿಯಲ್ಲಿ ಪಾಕಿಸ್ತಾನಕ್ಕೆ 5ನೇ ಸ್ಥಾನ ಪಕ್ಕಾ ಆಗಿದೆ. ಅಲ್ಲದೆ ಪಾಕ್ ತಂಡದ ವಿಶ್ವಕಪ್ ಸೆಮಿಫೈನಲ್ ಕನಸು ಕೂಡ ಕಮರುತ್ತಿದೆ. ಹೀಗೆ ಕ್ರಿಕೆಟ್ ಶಿಶು ಎದುರಿಗೆ ಪಾಕಿಸ್ತಾನ ಹೀನಾಯ ಸೋಲು ಕಂಡು ಸಾಲು ಸಾಲು ಸಮಸ್ಯೆಗೆ ಸಿಲುಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+