Maxwell vs Warner: ಮ್ಯಾಕ್ಸ್‌ವೆಲ್ ಹೇಳಿಕೆಗೆ ಬಹಿರಂಗವಾಗಿಯೇ ತಿರುಗೇಟು ಕೊಟ್ಟ ಡೇವಿಡ್ ವಾರ್ನರ್! ಅಷ್ಟಕ್ಕೂ ಆಗಿದ್ದೇನು?
ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಗೆಲುವಿನ ಲಯ ಕಂಡುಕೊಂಡಿದೆ. ಮೊದಲ ಎರಡು ಪಂದ್ಯಗಳನ್ನು ಸೋತ ಆಸ್ಟ್ರೇಲಿಯಾ ನಂತರ ಮೂರು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ. ಬುಧವಾರ ದೆಹಲಿಯ ಅರುಣ್ ಜೇಟ್ಲಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 300 ರನ್‌ಗಳ ಭಾರಿ ಗೆಲುವು ಸಾಧಿಸಿದೆ.
ಈ ದೊಡ್ಡ ಗೆಲುವಿಗೆ ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕೊಡುಗೆ ಹೆಚ್ಚಿದೆ. ಈ ಇಬ್ಬರೂ ಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾ 399 ರನ್ ಗಳಿಸಲು ಸಹಾಯ ಮಾಡಿದರೆ, ಬೌಲಿಂಗ್ ಪಡೆ ನೆದರ್ಲ್ಯಾಂಡ್ಸ್ ತಂಡವನ್ನು 99 ರನ್‌ಗಳಿಗೆ ಆಲೌಟ್ ಮಾಡಿತು.

40 ಎಸೆತಗಳಲ್ಲಿ ಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ವಿಶ್ವಕಪ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಸಾಧನೆ ಮಾಡಿದರು. ಡೇವಿಡ್ ವಾರ್ನರ್ ಕೂಡ ವಿಶ್ವಕಪ್‌ನಲ್ಲಿ ತಮ್ಮ 6ನೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ ಸಾಧನೆ ಸರಿಗಟ್ಟಿದರು.
I absolutely loved the light show, what an atmosphere. It’s all about the fans. Without you all we won’t be able to do what we love. 🙏🙏🙏 https://t.co/ywKVn5d5gc
— David Warner (@davidwarner31) October 25, 2023
ಇಬ್ಬರ ನಡುವೆ ಮನಸ್ತಾಪ?
ಪಂದ್ಯದ ನಂತರ ಇಬ್ಬರೂ ನೀಡಿದ ಹೇಳಿಕೆ ಈಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಡುವೆ ಎಲ್ಲವೂ ಸರಿಯಾಗಿದೆಯೇ? ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಡೇವಿಡ್ ವಾರ್ನರ್ ಸಾರ್ವಜನಿಕವಾಗಿ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ತಿರುಗೇಟು ನೀಡಿದ್ದು ಇದಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ಆಸ್ಟ್ರೇಲಿಯಾದ ರೋಚಕ ವಿಜಯದ ನಂತರ ವರ್ಣರಂಜಿತ ಪಟಾಕಿಗಳು ಮತ್ತು ಬೆಳಕಿನ ಪ್ರದರ್ಶನವು ಕ್ರೀಡಾಂಗಣವನ್ನು ಬೆಳಗಿಸಿತು. ನೆದರ್ಲ್ಯಾಂಡ್ಸ್‌ನ ಚೇಸ್ ಸಮಯದಲ್ಲಿ, ಒಂದು ಮ್ಯೂಸಿಕ್ ಮತ್ತು ಬೆಳಕಿನ ಪ್ರದರ್ಶನವೂ ಇತ್ತು.
ಲೈಟಿಂಗ್ ಪ್ರದರ್ಶನದ ಸಂದರ್ಭದಲ್ಲಿ ಆಲ್-ರೌಂಡ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಸರಿಸುಮಾರು ಎರಡು ನಿಮಿಷಗಳ ಪ್ರದರ್ಶನದ ಅವಧಿಯವರೆಗೆ ಎರಡೂ ಕೈಗಳಿಂದ ತನ್ನ ಕಣ್ಣುಗಳನ್ನು ಮುಚ್ಚಿಕೊಂಡರು.
ಲೈಟ್ ಶೋ ಬಗ್ಗೆ ಮಾತನಾಡಿದ ಅವರು, "ಇದು ನನಗೆ ಆಘಾತಕಾರಿ ತಲೆನೋವು ನೀಡಿದೆ ಎಂದು ನಾನು ಭಾವಿಸಿದೆ ಮತ್ತು ನನ್ನ ಕಣ್ಣುಗಳನ್ನು ಮರುಹೊಂದಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಕ್ರಿಕೆಟಿಗರಿಗೆ ಇದು ಮೂರ್ಖ ಕಲ್ಪನೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ, ನಾನು ಎಷ್ಟು ಸಾಧ್ಯವೋ ಅಷ್ಟು ಕಣ್ಣು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತೇನೆ ಮತ್ತು ಅದನ್ನು ನಿರ್ಲಕ್ಷಿಸುತ್ತೇನೆ ಆದರೆ ಇದು ಕೆಟ್ಟ ಯೋಚನೆ, ಅಭಿಮಾನಿಗಳಿಗೆ ಅದ್ಭುತವಾಗಿದೆ, ಆಟಗಾರರಿಗೆ ಕಷ್ಟವಾಗುತ್ತದೆ." ಎಂದು ಹೇಳಿದರು.
ಆದರೆ ಮ್ಯಾಕ್ಸ್‌ವೆಲ್ ಅವರ ಹೇಳಿಕೆಗೆ ತಿರುಗೇಟು ಕೊಟ್ಟ ಡೇವಿಡ್ ವಾರ್ನರ್, "ನಾನು ಬೆಳಕಿನ ಪ್ರದರ್ಶನವನ್ನು ಸಂಪೂರ್ಣವಾಗಿ ಇಷ್ಟಪಟ್ಟೆ, ಎಂತಹ ವಾತಾವರಣ. ಇದು ಅಭಿಮಾನಿಗಳಿಗೆ ಸಂಬಂಧಿಸಿದೆ. ಅಭಿಮಾನಿಗಳು ಇಲ್ಲದೆ ನಾವು ಇಷ್ಟಪಡುವದನ್ನು ಮಾಡಲು ಸಾಧ್ಯವಾಗುವುದಿಲ್ಲ" ಎಂದು ವಾರ್ನರ್ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications