ODI World Cup 2023: ಏಕದಿನ ವಿಶ್ವಕಪ್ ಟಿಕೆಟ್ ಖರೀದಿ ಇನ್ನೂ ಸುಲಭ: ಯಾವಾಗಿಂದ ಮಾರಾಟ ತಿಳಿಯಿರಿ

ಏಕದಿನ ವಿಶ್ವಕಪ್ 2023ರ ಆರಂಭಕ್ಕೆ ದಿನಗಳು ಹತ್ತಿರವಾಗುತ್ತಿದೆ. ಭಾರಿ ಕುತೂಹಲ ಕೆರಳಿಸಿರುವ ಈ ಪಂದ್ಯಾವಳಿ ವೀಕ್ಷಿಸಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಭಾರತದ 12 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿದೆ.

ಗ್ರಾಹಕರ ಅನುಕೂಲಕ್ಕಾಗಿ ಟಿಕೆಟ್ ಖರೀದಿಯನ್ನು ಸುಲಭವಾಗಿಸಲು ಬಿಸಿಸಿಐ ನಿರ್ಧರಿಸಿದೆ. ಏಕದಿನ ವಿಶ್ವಕಪ್ 2023 ಟಿಕೆಟ್‌ಗಳ ಮಾರಾಟದ ನಿರ್ವಹಣೆಯನ್ನು ಬುಕ್‌ ಮೈ ಶೋ ಮತ್ತು ಪೇ ಟಿಎಂ ಫ್ಲಾಟ್‌ಫಾರ್ಮ್‌ಗಳಿಗೆ ನೀಡಲು ಬಿಸಿಸಿಐ ನಿರ್ಧರಿಸಿದೆ.

ODI World Cup 2023

ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿ ಮಾಡಿದರು ಪಂದ್ಯ ವೀಕ್ಷಿಸಲು ತೆರಳುವ ವೇಳೆ ಟಿಕೆಟ್‌ ಅನ್ನು ಹೊಂದಿರಬೇಕು ಎಂದು ಹೇಳಿದೆ. ವಿಶ್ವ ಕಪ್ ಪಂದ್ಯಗಳಲ್ಲಿ ಅರ್ಧದಷ್ಟು ಪಂದ್ಯಗಳನ್ನು ಎರಡು ಟಿಕೆಟಿಂಗ್ ಕಂಪನಿಗಳು ನಿರ್ವಹಿಸುತ್ತವೆ ಎಂದು ಬಿಸಿಸಿಐ ಹೇಳಿದೆ.

ವಾಂಖೆಡೆ ಸ್ಟೇಡಿಯಂ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಸೆಮಿಫೈನಲ್‌ ಪಂದ್ಯಗಳ ಟಿಕೆಟ್‌ಗಳು ಪೇಟಿಎಂ (Paytm.com) ನಲ್ಲಿ ಲಭ್ಯವಿರುತ್ತವೆ. ಭಾರತ vs ಪಾಕಿಸ್ತಾನ (IND vs PAK) ಪಂದ್ಯ ಮತ್ತು ಫೈನಲ್‌ ಪಂದ್ಯದ ಟಿಕೆಟ್‌ಗಳು ಬುಕ್ ಮೈ ಶೋ (Bookmyshow.com) ನಲ್ಲಿ ಲಭ್ಯವಿರುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಆಗಸ್ಟ್ 10ರಿಂದ ಟಿಕೆಟ್ ಮಾರಾಟ

ಐಸಿಸಿ ವೀಕ್ಷಕರ ತಂಡವು ವಿಶ್ವಕಪ್ ಪಂದ್ಯಗಳು ಮತ್ತು ಅಭ್ಯಾಸ ಪಂದ್ಯಗಳು ನಡೆಯುವ ಎಲ್ಲಾ 12 ಕ್ರೀಡಾಂಗಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಏಕದಿನ ವಿಶ್ವಕಪ್ 2023 ಟಿಕೆಟ್‌ಗಳ ಬೆಲೆಗಳನ್ನು ಜುಲೈ 31 ರೊಳಗೆ ಅಂತಿಮಗೊಳಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಜುಲೈ 31 ರೊಳಗೆ ಪ್ರತಿ ರಾಜ್ಯ ಸಂಸ್ಥೆಯು ತನ್ನ ಅಂತಿಮಗೊಳಿಸಿದ ಟಿಕೆಟ್ ದರಗಳನ್ನು ಬಿಸಿಸಿಐಗೆ ತಿಳಿಸಲು ಕೇಳಿದ್ದಾರೆ.

ವೇಳಾಪಟ್ಟಿ ಬದಲಾಗುವ ಸಾಧ್ಯತೆ ಕೂಡ ಇದ್ದು, ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡ ನಂತರ ಟಿಕೆಟ್ ಮಾರಾಟ ಆರಂಭವಾಗಲಿದೆ ಎಂದು ಜಯ್‌ ಶಾ ಹೇಳಿದ್ದಾರೆ. ಭಾರತ ಪಾಕಿಸ್ತಾನ ಪಂದ್ಯ ಅಕ್ಟೋಬರ್ 15ರ ಬದಲಾಗಿ ಒಂದು ದಿನ ಮುಂಚಿತವಾಗಿ ನಡೆಯುವ ಸಾಧ್ಯತೆ ಇದೆ. ಆಗಸ್ಟ್ 10 ರಿಂದ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ.

ಟಿಕೆಟ್ ಬುಕ್ ಮಾಡಿದ ಬಳಿಕ ಟಿಕೆಟ್ ಅನ್ನು ಪಡೆದುಕೊಳ್ಳಲು ಪ್ರತಿ ನಗರದಲ್ಲಿ ಹೆಚ್ಚುವರಿ ಕಲೆಕ್ಷನ್ ಪಾಯಿಂಟ್‌ಗಳನ್ನು ಸ್ಥಾಪಿಸುವುದಾಗಿ ಬಿಸಿಸಿಐ ಹೇಳಿದೆ. ಅಕ್ಟೋಬರ್ 5 ರಂದು ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಪ್ರೇಕ್ಷಕರು ವಿಶ್ವಕಪ್ 2023 ಟಿಕೆಟ್‌ಗಳನ್ನು ತೆಗೆದುಕೊಳ್ಳಬಹುದು.

ಐಸಿಸಿ ಮತ್ತು ಬಿಸಿಸಿಐ ಪ್ರತಿ ಆಟಕ್ಕೆ ಅಗತ್ಯವಿರುವಂತೆ ತಲಾ 300 ಉಚಿತ ಆತಿಥ್ಯ ಟಿಕೆಟ್‌ಗಳನ್ನು ಪಡೆಯಲಿವೆ. ಇದಲ್ಲದೆ, ರಾಜ್ಯವು ಐಸಿಸಿಗೆ ಲೀಗ್ ಪಂದ್ಯಗಳಿಗೆ 1295 ಟಿಕೆಟ್‌ಗಳನ್ನು ಮತ್ತು ಭಾರತ ಮತ್ತು ಸೆಮಿಫೈನಲ್ ಪಂದ್ಯಗಳಿಗೆ 1355 ಟಿಕೆಟ್‌ಗಳನ್ನು ನೀಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+