ODI World Cup: ಈ ಬಾರಿ ವಿಶ್ವಕಪ್ ಗೆಲ್ತೀರಾ ಎನ್ನುವ ಪ್ರಶ್ನೆಗೆ ರೋಹಿತ್ ಶರ್ಮಾ ಏನಂದ್ರು ಗೊತ್ತಾ?

ಒಂದು ದಶಕದ ನಂತರ ಭಾರತದಲ್ಲಿ ಮತ್ತೆ ಏಕದಿನ ವಿಶ್ವಕಪ್ ನಡೆಯುತ್ತಿದ್ದು, ಎಲ್ಲಾ 10 ತಂಡಗಳು ಹೋರಾಟಕ್ಕೆ ಸಜ್ಜಾಗಿವೆ. 2011ರಲ್ಲಿ ಭಾರತ ಎಂಎಸ್ ಧೋನಿ ನಾಯಕತ್ವದಲ್ಲಿ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತ್ತು. 2013ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ತಂಡದಲ್ಲಿದ್ದ ರೋಹಿತ್ ಶರ್ಮಾ ಈ ಬಾರಿ ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.

2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ಮತ್ತೆ ಐಸಿಸಿ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಈ ಬಾರಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯುತ್ತಿರುವ ಕಾರಣ ಭಾರತ ತಂಡದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ತವರಿನ ಅಂಗಳದ ಲಾಭ ಪಡೆದು ಚಾಂಪಿಯನ್ ಆಗಲಿ ಎಂದು ಕೋಟ್ಯಂತರ ಅಭಿಮಾನಿಗಳು ಹಾರೈಸುತ್ತಿದ್ದಾರೆ.

odi-world-cup-2023

ಭಾರತವು ತವರಿನಲ್ಲಿ ವಿಶ್ವಕಪ್ ಆಡುತ್ತಿರುವ ಕಾರಣ ರೋಹಿತ್ ಮತ್ತು ತಂಡದ ಮೇಲೆ ಅಪಾರ ಒತ್ತಡವಿದೆ. ವಿಶ್ವಕಪ್ ಆರಂಭಕ್ಕೆ ಮುನ್ನಾ ದಿನ ಅಹಮದಾಬಾದ್‌ನಲ್ಲಿ ಕ್ಯಾಪ್ಟನ್ಸ್ ಡೇ ಯಲ್ಲಿ ಎಲ್ಲಾ 10 ತಂಡಗಳ ನಾಯಕರು ಭಾಗವಹಿಸಿ, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಭಾರತವು ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿಯುತ್ತಾ ಎನ್ನುವ ಪ್ರಶ್ನೆಗೆ ನಾಯಕ ರೋಹಿತ್ ಶರ್ಮಾ ಉತ್ತರ ನೀಡಿದ್ದಾರೆ.

"ಅದಕ್ಕೆ ನನ್ನ ಬಳಿ ಉತ್ತರವಿಲ್ಲ. ನಾನು ಈಗ ಅದನ್ನು ಹೇಗೆ ಹೇಳಲಿ? ತಂಡವು ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಎಲ್ಲರೂ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಪ್ರಶಸ್ತಿ ಗೆಲ್ಲಬೇಕು ಎಂದು ನಾನು ಆಶಿಸಬಹುದು, ಇದನ್ನು ಮೀರಿ ನಾನು ಹೇಳಲಾರೆ. ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಭಾರತ ತಂಡ ಫೇವರಿಟ್

ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ಕೂಡ ಒಂದಾಗಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳನ್ನು ನೆಚ್ಚಿನ ತಂಡಗಳು ಎಂದು ಹೇಳಲಾಗಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಗೆದ್ದಿರುವ ಭಾರತ ತಂಡ, ಅದಕ್ಕೂ ಮುನ್ನ ಏಷ್ಯಾಕಪ್ ಗೆದ್ದಿತ್ತು, ತಂಡದ ಆತ್ಮವಿಶ್ವಾಸ ಹೆಚ್ಚಾಗಿದ್ದು ಇದೇ ರೀತಿಯ ಉತ್ತಮ ಪ್ರದರ್ಶನವನ್ನು ಮುಂದುವರೆಸುವ ಉತ್ಸಾಹದಲ್ಲಿದೆ.

ನಾಯಕತ್ವದ ಬಗ್ಗೆ ರೋಹಿತ್ ಹೇಳಿದ್ದೇನು?

ರೋಹಿತ್ ಶರ್ಮಾ ಅವರ ನಾಯಕತ್ವದ ಪ್ರಯಾಣದ ಬಗ್ಗೆ ಪ್ರಶ್ನೆ ಮಾಡಿದಾಗ, ನಾನು ಸ್ವಂತ ಪ್ರಯತ್ನದಿಂದ ಈ ಸ್ಥಾನಕ್ಕೆ ಬಂದಿರುವುದಾಗಿ ಹೇಳಿದರು. ನಾನು ಏನು ಮಾಡಬೇಕು ಎನ್ನುವುದನ್ನು ನಾನೇ ಅರಿತುಕೊಂಡಿದ್ದೇನೆ, ನಿಜವಾಗಿ ಹೇಳಬೇಕೆಂದರೆ ಈ ಪ್ರಯಾಣದಲ್ಲಿ ಯಾರೂ ಕೂಡ ಅಷ್ಟಾಗಿ ನನಗೆ ಸಹಾಯ ಮಾಡಿಲ್ಲ, ಇಂದು ನಾನೇನು ಆಗಿದ್ದೇನೆ ಅದಕ್ಕೆ ನಾನೇ ಕಾರಣ, ಇದಕ್ಕೆ ನನ್ನ ಕುಟುಂಬ, ಸ್ನೇಹಿತರೂ ಮತ್ತು ಎಲ್ಲರೂ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ನನಗೆ ಅರಿವಾಗಿದೆ ನಾನೇ ಎಲ್ಲವನ್ನೂ ಮಾಡಬೇಕು, ಯಾರೋ ಬಂದು ಬಾಸ್ ಇದನ್ನು ಮಾಡು ಎಂದು ಹೇಳುವುದಿಲ್ಲ, ಯಾರೋ ನನಗಾಗಿ ಅದನ್ನು ಮಾಡಬೇಕು ಎಂದು ಬಯಸುವುದಿಲ್ಲ ಎಂದು ರೋಹಿತ್ ಶರ್ಮಾ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+