Team India; ಟೀಂ ಇಂಡಿಯಾ ಹೊಸ ಜೆರ್ಸಿ ಬಿಡುಗಡೆ
ಭಾರತ ಏಕದಿನ ತಂಡ ಇನ್ನು ಹೊಸ ಜೆರ್ಸಿಯಲ್ಲಿ ಮಿಂಚಲಿದೆ. ಶುಕ್ರವಾರ ಮುಂಬೈನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಮತ್ತು ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಭಾರತ ಏಕದಿನ ತಂಡದ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದರು. ಭಾರತ ಮಹಿಳಾ ತಂಡ ಆಸ್ಟ್ರೇಲಿಯಾದಲ್ಲಿ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದ್ದು, ಸರಣಿಗೆ ಮುನ್ನ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ.
ಡಿಸೆಂಬರ್ 5ರಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಭಾರತ ಮಹಿಳಾ ತಂಡ ಈ ಸರಣಿಯಲ್ಲಿ ಹಳೆಯ ವಿನ್ಯಾಸದ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಹೊಸ ವಿನ್ಯಾಸದ ಜೆರ್ಸಿಯಲ್ಲಿ ಭುಜಗಳ ಮೇಲೆ ಭಾರತ ಧ್ವಜದ ಮೂರು ಬಣ್ಣಗಳನ್ನು ಹೊಂದಿದೆ, ಹಿಂದಿನ ಜೆರ್ಸಿಯಲ್ಲಿ ಬಿಳಿಯ ಮೂರು ಪಟ್ಟಿಗಳನ್ನು ಮಾತ್ರ ಹೊಂದಿತ್ತು, ಈಗ ಅದನ್ನು ಬದಲಾಯಿಸಲಾಗಿದೆ.

ಡಿಸೆಂಬರ್ 22 ರಿಂದ 27 ರವರೆಗೆ ವಡೋದರಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಈ ಸರಣಿಯಲ್ಲಿ ಭಾರತ ಮಹಿಳಾ ತಂಡವು ಹೊಸ ವಿನ್ಯಾಸದ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದೆ ಎಂದು ನಾಯಕಿ ಹರ್ಮನ್‌ಪ್ರೀತ್ ಕೌರ್ ಖಚಿತಪಡಿಸಿದ್ದಾರೆ.
📍 BCCI Headquarters, Mumbai
— BCCI (@BCCI) November 29, 2024
Mr Jay Shah, Honorary Secretary, BCCI & Ms Harmanpreet Kaur, Captain, Indian Cricket Team unveiled #TeamIndia's new ODI jersey 👏 👏@JayShah | @ImHarmanpreet | @adidas pic.twitter.com/YujTcjDHRO
ಹೆಮ್ಮೆಯ ಕ್ಷಣ ಎಂದ ಕೌರ್
ಭಾರತ ತಂಡದ ಜೆರ್ಸಿಯನ್ನು ಅನಾವರಣಗೊಳಿಸುವುದು ಒಂದು ಗೌರವ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಈ ಜೆರ್ಸಿಯನ್ನು ಧರಿಸಿ ಆಡಲಿದ್ದೇವೆ ಎನ್ನುವುದು ಹೆಮ್ಮೆಯ ಭಾವನೆ ಎಂದು ಹರ್ಮನ್‌ಪ್ರೀತ್ ಕೌರ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಹೊಸ ಜೆರ್ಸಿಯ ವಿನ್ಯಾಸವನ್ನು ಹರ್ಮನ್‌ಪ್ರೀತ್ ಕೌರ್ ಮೆಚ್ಚಿಕೊಂಡಿದ್ದು, ನಾನು ಹೊಸ ಜೆರ್ಸಿಯ ಡಿಸೈನ್ ಅನ್ನು ಇಷ್ಟಪಟ್ಟಿದ್ದೇನೆ. ಭುಜದ ಮೇಲಿರುವ ಮೂರು ಬಣ್ಣಗಳು ಸುಂದರವಾಗಿ ಕಾಣಿಸುತ್ತಿವೆ. ನಾವು ಏಕದಿನ ಮಾದರಿಗೆ ವಿಶೇಷ ಜೆರ್ಸಿ ಪಡೆದಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
ಭಾರತ ಮಹಿಳಾ ತಂಡ ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ಬಳಿಕ ಟಿ20 ಸರಣಿಯನ್ನು ಆಡಲಿದೆ. ಇದಾದ ನಂತರ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ನಡೆಯಲಿದೆ.
ಕ್ರೀಡಾ ಉಡುಪು ತಯಾರಕ ಅಡಿಡಾಸ್ 2023 ರಲ್ಲಿ ಬಿಸಿಸಿಐ ಕಿಟ್ ಪ್ರಾಯೋಜಕತ್ವ ಪಡೆದ ಬಳಿಕ ಭಾರತ ಜೆರ್ಸಿಗಳನ್ನು ನಿಯಮಿತವಾಗಿ ನವೀಕರಿಸಲು ಪ್ರಯತ್ನ ಮಾಡುತ್ತಿದೆ. ಏಕದಿನ ಮತ್ತು ಟಿ20 ವಿಶ್ವಕಪ್‌ನಲ್ಲಿ ಕೂಡ ವಿಶೇಷ ಕಿಟ್‌ಗಳನ್ನು ನೀಡಲಾಗಿತ್ತು.












Click it and Unblock the Notifications