NZ vs SL: ವಿರಾಟ್ ಕೊಹ್ಲಿ ವಿರುದ್ಧ ಮಾತನಾಡಿದ್ದ ಶ್ರೀಲಂಕಾಗೆ ಹೀನಾಯ ಸೋಲು ಗ್ಯಾರಂಟಿ!
ಶ್ರೀಲಂಕಾ ಕ್ರಿಕೆಟ್ ತಂಡ 2023ರ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹೀನಾಯವಾಗಿ ಸೋತು ಸೋತು ಸುಣ್ಣವಾಗಿದೆ. ಇಂದು ನ್ಯೂಜಿಲೆಂಡ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿ, ಮನೆ ಕಡೆಗೆ ಹೋಗಲಿದೆ. ಹೀಗಿದ್ದರೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಲಂಕನ್ನರ ಪಾಲಿನ ಕೊನೇ ಪಂದ್ಯದಲ್ಲಿ ಮತ್ತೊಮ್ಮೆ, ತನ್ನ ಚಾಳಿ ಮುಂದುವರಿಸಿದೆ ಶ್ರೀಲಂಕಾ. ಈ ಮೂಲಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದ ಶ್ರೀಲಂಕಾ ನಾಯಕನಿಗೆ ಬೆಂಗಳೂರಲ್ಲೂ ಮುಖಭಂಗವಾಗಿದೆ!
ಹೌದು, 1996ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದು ವರ್ಲ್ಡ್ ಚಾಂಪಿಯನ್ ಆಗಿದ್ದ ಶ್ರೀಲಂಕಾ 2023ರಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಲಂಕಾ ಆಟಗಾರರು ಭಾರತ ಕ್ರಿಕೆಟ್ ತಂಡದ ವಿರುದ್ಧ ದ್ವೇಷ ಕಾರುವುದನ್ನು ಬಿಡುತ್ತಿಲ್ಲ. ಈ ಮಾತಿಗೆ ಬಲ ನೀಡುವಂತೆ ಮೊನ್ನೆ ಮೊನ್ನೆ ತಾನೆ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್, ವಿರಾಟ್ ಕೊಹ್ಲಿ ಕುರಿತು ಮಾತನಾಡುವಾಗ ಅಸಭ್ಯ ಪದ ಬಳಸಿದ್ದರು. ಕೊಹ್ಲಿ ಅವರ ಬಗ್ಗೆ ಏನು ಹೇಳ್ತೀರಿ ಅಂತಾ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ, ಅಸಭ್ಯ ಪದ ಬಳಸಿದ್ದರು.

ಕೊಹ್ಲಿ ಬಗ್ಗೆ ಮೆಂಡಿಸ್ ಹೇಳಿದ್ದೇನು?
ಕಳೆದ ಭಾನುವಾರ ವಿರಾಟ್ ಕೊಹ್ಲಿ ಅವರು, ಜಾಗತಿಕ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ್ದರು. ಹಿಂದೆ ಭಾರತದವರೆ ಆಗಿದ್ದ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ ಶತಕ ಸಾಧನೆ ದಾಖಲೆಯನ್ನ ಕೊಹ್ಲಿ ಹಿಂದಿಕ್ಕಿದ್ದರು. ಸಚಿನ್ ತೆಂಡೂಲ್ಕರ್, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 49 ಶತಕ ಗಳಿಸಿ ಅತಿಹೆಚ್ಚು ಶತಕ ಬಾರಿಸಿದ ದಾಖಲೆಯ ತಮ್ಮ ಹೆಸರಲ್ಲೇ ಉಳಿಸಿಕೊಂಡಿದ್ದರು.
Journalist " Virat Just scored his 49th ODI ton. Do you like to congratulate him?"
— Out Of Context Cricket PK (@GemsOfCrickett) November 5, 2023
Kusak Mendis" Why I would congratulate him"😭😭😭#INDvSA #INDvsSA #SAvIND #ViratKohli #CWC2023 pic.twitter.com/DAqh2oeO5e
ಆದರೆ ಕಳೆದ ಭಾನುವಾರ ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಸಚಿನ್ ಸಾಧನೆಯ ಸ್ಥಾನಕ್ಕೆ ಸಮವಾಗಿ ಬಂದು ಕೂತರು. ಹೀಗಿದ್ದಾಗ ಮಹಾಶಯ, ಶ್ರೀಲಂಕಾದ ನಾಯಕ ಕುಸಾಲ್ ಮೆಂಡಿಸ್‌ಗೆ ಕೊಹ್ಲಿ ಸಾಧನೆ ಬಗ್ಗೆ ಪ್ರಶ್ನೆ ಕೇಳಿದ್ದರು ನಮ್ಮ ದೇಶದ ಪತ್ರಕರ್ತರು. ಆದ್ರೆ ಆಗ ಕುಸಾಲ್ ಮೆಂಡಿಸ್ ಕೆಟ್ಟಪದ ಬಳಸಿದ್ರು ಎಂಬ ಆರೋಪ ಕೇಳಿಬಂದಿತ್ತು.

ಕುಸಾಲ್ ಮೆಂಡಿಸ್ ಹೀನಾಯ ಪ್ರದರ್ಶನ!
ಹೀಗೆ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್, ನಮ್ಮ ವಿರಾಟ್ ಕೊಹ್ಲಿ ಕುರಿತಾಗಿ ಅಸಭ್ಯ ಪದ ಬಳಸಿದ್ದರು ಅಂತಾ ಎಲ್ಲೆಡೆ ಆಕ್ರೋಶ ಮೊಳಗಿದ ಸಮಯದಲ್ಲೇ ಮತ್ತೊಮ್ಮೆ ಶ್ರೀಲಂಕಾ ಹೀನಾಯ ಸೋಲು ಕಾಣುತ್ತಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 46.4 ಓವರ್‌ನಲ್ಲಿ 171 ರನ್‌ಗಳಿಗೆ ಸರ್ವಪತನ ಕಂಡು, ತನ್ನ ಹೀನಾಯ ಪರಿಸ್ಥಿತಿ ಪ್ರದರ್ಶನ ಮಾಡುತ್ತಿದೆ. ಈ ಮೂಲಕ ಬಲಿಷ್ಠ ನ್ಯೂಜಿಲೆಂಡ್ ಟೀಂಗೆ ಕೇವಲ 172 ರನ್‌ಗಳ ಗೆಲುವಿನ ಗುರಿ ನೀಡಿದೆ ಶ್ರೀಲಂಕಾ. ಅದರಲ್ಲೂ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುವಾಗ, ಮಾತಿನ ಮಿತಿ ಮೀರಿದ್ದ ಕುಸಾಲ್ ಮೆಂಡಿಸ್, ಇವತ್ತು ಗಳಿಸಿದ್ದು ಕೇವಲ 6 ರನ್‌ಗಳು.
ಒಟ್ನಲ್ಲಿ ಶ್ರೀಲಂಕಾ ತಂಡ ಇಂದು ತನ್ನ ಕೊನೆಯ ಪಂದ್ಯ ಆಡಿ, ತನ್ನ ಮನೆ ಕಡೆ ದಾರಿ ಹಿಡಿಯಲಿದೆ. ಆದರೆ ಈಗಲಾದ್ರೂ ಇವರು ಬದಲಾಗಬೇಕು. ಅದ್ರಲ್ಲೂ ಕುಸಾಲ್ ಮೆಂಡಿಸ್ ಇಂತಹ ಹೀನಾಯ ಪ್ರದರ್ಶನದ ನಂತರ ಪಾಠ ಕಲಿಯಬೇಕು. ಇಲ್ಲವಾದ್ರೆ ನಾಯಕನ ಈ ರೀತಿಯ ವರ್ತನೆಯೇ ಶ್ರೀಲಂಕಾ ತಂಡಕ್ಕೆ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನು, ಶ್ರೀಲಂಕಾ ತಂಡ ನೀಡಿದ 172 ರನ್ ಗುರಿ ಬೆನ್ನುಹತ್ತಿರುವ ನ್ಯೂಜಿಲೆಂಡ್ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಕೇವಲ 16 ಓವರ್‌ಗಳಲ್ಲಿ 108 ರನ್ ಗಳಿಸಿದೆ ನ್ಯೂಜಿಲೆಂಡ್ ತಂಡ. 108 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು, ಸೆಮಿಫೈನಲ್ ಹಾದಿ ಸುಗಮ ಮಾಡಿಕೊಂಡಿದೆ. ನ್ಯೂಜಿಲೆಂಡ್ ಟೀಂ ಸೆಮಿಫೈನಲ್ ಅಖಾಡಕ್ಕೆ ಬಹುತೆಕ ಎಂಟ್ರಿ ಕೊಟ್ಟಂತಾಗಿದೆ.
-
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ












Click it and Unblock the Notifications