RCB: ಆರ್‌ಸಿಬಿಗೆ ಆಡಲು ಕಾಯುತ್ತಿದ್ದ ನಿತೀಶ್ ರೆಡ್ಡಿ

ನಿತೀಶ್ ರೆಡ್ಡಿ, ಸದ್ಯ ಭಾರತ ಕ್ರಿಕೆಟ್ ತಂಡದ ಭರವಸೆಯ ಕ್ರಿಕೆಟಿಗ. ಭವಿಷ್ಯದಲ್ಲಿ ಸೂಪರ್ ಸ್ಟಾರ್ ಆಗುವ ಎಲ್ಲಾ ಲಕ್ಷಣ ತೋರಿಸಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೆಗಾ ಹರಾಜಿಗೆ ಮುನ್ನ ಅವರನ್ನು ರಿಟೇನ್ ಮಾಡಿಕೊಂಡಿದ್ದು, ತಂಡದಲ್ಲಿ ಉಳಿಸಿಕೊಂಡಿದೆ. ನಿತೀಶ್ ಕುಮಾರ್ ರೆಡ್ಡಿ ಆರ್ ಸಿಬಿ ತಂಡಕ್ಕಾಗಿ ಆಡಲು ಬಯಸಿದ್ದರು, ಆದರೆ ಸನ್‌ರೈಸರ್ಸ್ ಹೈದರಾಬಾದ್ ಅವರನ್ನು ಖರೀದಿ ಮಾಡಿದ್ದು, ಮೆಗಾ ಹರಾಜಿಗೆ ಮುನ್ನ ತಂಡದಲ್ಲಿ ಉಳಿಸಿಕೊಂಡಿದೆ.

2024ರ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಭಾರತ ಟಿ20 ತಂಡಕ್ಕೆ ಆಯ್ಕೆಯಾದ ನಿತೀಶ್ ರೆಡ್ಡಿ ಬಳಿಕ ಟೆಸ್ಟ್ ತಂಡದಲ್ಲಿ ಕೂಡ ಅವಕಾಶ ಪಡೆದುಕೊಂಡಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯಾವಳಿಯಲ್ಲಿ ಮಿಂಚುತ್ತಿದ್ದು, ಭವಿಷ್ಯದಲ್ಲಿ ಮೂರು ಮಾದರಿಯಲ್ಲಿ ಭಾರತ ತಂಡದ ಪ್ರಮುಖ ಆಟಗಾರನಾಗುವ ಭರವಸೆ ಮೂಡಿಸಿದ್ದಾರೆ.

nitish kumar reddy wants to play for rcb missed trials

ಆರ್‌ಸಿಬಿಗೆ ಆಡಲು ಇಷ್ಟಪಡುತ್ತಿದ್ದ ರೆಡ್ಡಿ

ನಿತೀಶ್ ಕುಮಾರ್ ರೆಡ್ಡಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಯ್ಕೆಯಾಗಿದ್ದರೂ, ಅವರಿಗೆ ಆರ್ ಸಿಬಿ ತಂಡವೆಂದರೆ ಅಭಿಮಾನ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡಬೇಕು ಎನ್ನುವುದು ಅವರ ಕನಸು. ವಿರಾಟ್ ಕೊಹ್ಲಿ ಜೊತೆ ಆಡಬೇಕು, ಅವರು ಮೆಚ್ಚಿಕೊಳ್ಳಬೇಕು ಎಂದು ತುಂಬಾ ಕನಸು ಕಟ್ಟಿಕೊಂಡಿದ್ದರು. ಆದರೆ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅವರನ್ನು ಖರೀದಿ ಮಾಡಿದ್ದರಿಂದ ನಿತೀಶ್ ರೆಡ್ಡಿ ಕನಸು ಈಡೇರಿಲ್ಲ. 2023ರ ಮಿನಿ ಹರಾಜಿನಲ್ಲಿ ನಿತೀಶ್ ಕುಮಾರ್ ರೆಡ್ಡಿ ಎಸ್‌ಆರ್‌ಹೆಚ್‌ ತಂಡದ ಪಾಲಾಗಿದ್ದರು. 2025ರ ಮೆಗಾ ಹರಾಜಿಗೆ ಮೊದಲು ಅವರನ್ನು 6 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ.

ವಿಸ್ಡನ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಎಲ್‌ಎಸ್‌ಜಿ ತಂಡದ ಟ್ರಯಲ್ಸ್‌ಗೆ ಹೋಗಿದ್ದಾಗಿ ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಜೊತೆ ಆಡಲು ಇಷ್ಟಪಟ್ಟಿದ್ದಾಗಿ ಹೇಳಿದ ಅವರು, ಒಂದು ಬಾರಿ ಟ್ರಯಲ್ಸ್‌ಗೆ ಬಂದಿದ್ದರು ಎರಡನೇ ಬಾರಿ ಹಾಜರಾಗಿರಲಿಲ್ಲ ಎಂದು ಹೇಳಿದ್ದಾರೆ.

ನಾನು ಆರ್ ಸಿ ಬಿ ಮತ್ತು ಎಲ್‌ಎಸ್‌ಜಿ ಸೇರಿದಂತೆ ಹಲವು ತಂಡಗಳ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದೆ. ಆರ್ ಸಿಬಿ ನನ್ನನ್ನು ಆಯ್ಕೆ ಮಾಡುತ್ತದೆ ಎಂದುಕೊಂಡಿದ್ದೆ, ಅವರು ನನ್ನ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದರು. ಮೊದಲ ಟ್ರಯಲ್ಸ್ ನಂತರ, ಅವರು ನನ್ನ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎರಡನೇ ಬಾರಿ ಟ್ರಯಲ್ಸ್‌ಗೆ ಬನ್ನಿ ಎಂದಿದ್ದರು ಆದರೆ ನಾನು ಹೋಗಲು ಸಾಧ್ಯವಾಗಿರಲಿಲ್ಲ. ಹರಾಜಿನಲ್ಲಿ ಅವರು ಬೇರೆ ಆಟಗಾರರಲ್ಲಿ ಆಸಕ್ತಿ ತೋರಿಸಿದರು. ಹರಾಜಿನಲ್ಲಿ ಎಸ್‌ ಆರ್ ಎಚ್‌ ಖರೀದಿ ಮಾಡಿತು ಎಂದಿದ್ದಾರೆ.

ಗಾಯದ ಸಮಸ್ಯೆಯಿಂದ ನಾನು ಎರಡು ವರ್ಷ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಲು ಆಗಿರಲಿಲ್ಲ. ಆದರೆ ಸನ್‌ರೈಸರ್ಸ್ ಹೈದರಾಬಾದ್ ನನ್ನ ಹಳೆಯ ಪ್ರದರ್ಶನದ ವಿಡಿಯೋಗಳನ್ನು ನೋಡಿದರು. ಟ್ರಯಲ್ಸ್‌ನಲ್ಲಿ ನನ್ನ ಪ್ರದರ್ಶನವನ್ನು ಇಷ್ಟಪಟ್ಟರು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+