Nitish Reddy: ನಿತೀಶ್ ಕುಮಾರ್ ರೆಡ್ಡಿ ವೇಸ್ಟ್... ಹಿಂಗೆ ಹೇಳಿದ್ದ ಸಂಜಯ್ ಮಂಜ್ರೇಕರ್‌ನ ರುಬ್ಬುತ್ತಿರುವ ಫ್ಯಾನ್ಸ್!
ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ಆಸ್ಟ್ರೇಲಿಯಾ ವಿರುದ್ಧ ಸವಾರಿ ಮಾಡಿ ತನ್ನ ತಾಕತ್ ಏನು? ಅನ್ನೋದನ್ನ ಕ್ರಿಕೆಟ್ ಜಗತ್ತಿಗೆ ತೋರಿಸಿದೆ. ಇಂಡಿಯಾ & ಆಸ್ಟ್ರೇಲಿಯಾ 4ನೇ ಟೆಸ್ಟ್ ಪಂದ್ಯ ಇಡೀ ಪ್ರಪಂಚವನ್ನ ತನ್ನತ್ತ ಸೆಳೆಯುತ್ತಿದೆ. ಈ ಸಮಯದಲ್ಲೇ, ನಮ್ಮವರೇ ನಮಗೆ ಮುಳ್ಳು ಆಗುತ್ತಿದ್ದಾರಾ? ಎಂಬ ಪ್ರಶ್ನೆಯನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈಗ ಕೇಳುತ್ತಿದ್ದಾರೆ.
ಯಾಕೆ ಈ ಪ್ರಶ್ನೆ ಅಂದ್ರೆ, ಬಾಯಿ ಹಿಡಿತದಲ್ಲಿ ಇಟ್ಟುಕೊಳ್ಳಲು ಆಗದ ಸಂಜಯ್ ಮಂಜ್ರೇಕರ್ ಮತ್ತೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಅಂತಾ ಕ್ರಿಕೆಟ್ ಫ್ಯಾನ್ಸ್ ಆರೋಪ ಮಾಡುತ್ತಾ ಈಗ ರೊಚ್ಚಿಗೆದ್ದಿದ್ದಾರೆ! 2012 ರಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದ ಈ ಮಹಾಶಯ ಸಂಜಯ್ ಮಂಜ್ರೇಕರ್ ಅವರು, 2019 ರಲ್ಲೂ ಮತ್ತೆ ರವೀಂದ್ರ ಜಡೇಜಾ ಬಗ್ಗೆ ಮಾತನಾಡಿ ಸರಿಯಾಗಿ ರುಬ್ಬಿಸಿಕೊಂಡಿದ್ದರು. ಇದೀಗ, ನಿತೀಶ್ ಕುಮಾರ್ ರೆಡ್ಡಿ ಆಡಿಸುವುದೇ ವೇಸ್ಟ್.... ಅನ್ನೋ ರೀತಿ ಮಾತನಾಡಿ ಲಾಕ್ ಆಗಿ ಕ್ರಿಕೆಟ್ ಅಭಿಮಾನಿಗಳ ಕೈಯಲ್ಲಿ ರುಬ್ಬಿಸಿಕೊಳ್ಳುತ್ತಿದ್ದಾರೆ ಸಂಜಯ್ ಮಂಜ್ರೇಕರ್!

'ನಿತೀಶ್ ಕುಮಾರ್ ರೆಡ್ಡಿ ವೇಸ್ಟ್...'
ಹೌದು, ಕ್ರಿಕೆಟ್ ಅಭಿಮಾನಿಗಳು ಸಂಜಯ್ ಮಂಜ್ರೇಕರ್‌ನ ಟ್ರೋಲ್ ಮಾಡಿ ರುಬ್ಬುತ್ತಿದ್ದಾರೆ. ಯಾಕಪ್ಫಾ ಮತ್ತೆ ಮಂಜ್ರೇಕರ್ ಏನು ಮಾಡಿದ್ರು? ಅನ್ನೋ ಪ್ರಶ್ನೆ ನಿಮ್ಮನ್ನು ಕಾಡ್ತಿರಬಹುದು. ಇದಕ್ಕೆಲ್ಲಾ ಕಾರಣ ಆಗಿದ್ದು ನಿತೀಶ್ ರೆಡ್ಡಿ ಬಗ್ಗೆ ಸಂಜಯ್ ಮಂಜ್ರೇಕರ್ ಅವರು ನೀಡಿದ್ದ ಆ ಒಂದು ಹೇಳಿಕೆ. ನಿತೀಶ್ ಕುಮಾರ್ ರೆಡ್ಡಿ ಆಡಿಸುವುದು ವೇಸ್ಟ್... ಎನ್ನುವಂತೆಯೇ ಹೇಳಿದ್ದ ಸಂಜಯ್ ಮಂಜ್ರೇಕರ್‌ನ ರುಬ್ಬುತ್ತಿರುವ ಕ್ರಿಕೆಟ್ ಫ್ಯಾನ್ಸ್ ಏನಂತ ವಾರ್ನಿಂಗ್ ಕೊಟ್ಟಿದ್ದಾರೆ ಗೊತ್ತಾ?
ನಡೆದಿತ್ತು ಏನಪ್ಪಾ ಅಂತಾ ಅಂದ್ರೆ!
ಅಂದಹಾಗೆ, ಭಾರತ & ಆಸ್ಟ್ರೇಲಿಯಾ ನಡುವೆ ಜಿದ್ದಾಜಿದ್ದಿನ ಟೆಸ್ಟ್ ಮ್ಯಾಚ್ ನಡೆಯುತ್ತಿದೆ. ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹತ್ವದ ಭಾರತ & ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ 4ನೇ ಟೆಸ್ಟ್ ಪಂದ್ಯ ಆರಂಭವಾಗುವ ಮೊದಲು ಸಂಜಯ್ ಮಂಜ್ರೇಕರ್ ಹೇಳಿಕೆ ಒಂದನ್ನ ನೀಡಿದ್ದರು.
ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಡಿಸುವ ಭಾರತ ಕ್ರಿಕೆಟ್ ತಂಡದ ನಿರ್ಧಾರದ ಬಗ್ಗೆಯೂ ರೊಚ್ಚಿಗೆದ್ದಿದ್ದರು. ಅಲ್ಲದೆ, ನಿತೀಶ್ ಕುಮಾರ್ ರೆಡ್ಡಿ ಆಡ್ತಿರುವುದೇ ವೇಸ್ಟ್... ಅನ್ನೋ ರೀತಿ ಮಾತನಾಡಿದ್ದರು. ಆದ್ರೆ ಇದೀಗ ಆಸ್ಟ್ರೇಲಿಯಾ ಬೌಲಿಂಗ್ ಪಡೆಯ ಧೂಳ್ ಧೂಳ್ ಮಾಡಿರುವ ನಿತೀಶ್ ರೆಡ್ಡಿ, ಸೆಂಚ್ಯುರಿ ಬಾರಿಸಿದ್ದಾರೆ. ಹೀಗಿದ್ದಾಗ ಸಂಜಯ್ ಮಂಜ್ರೇಕರ್ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ. ಅಲ್ಲದೆ ಇನ್ನು ಮುಂದೆಯಾದರೂ ನೀವು ಮಾತನಾಡುವ ಮೊದಲು ಯೋಚನೆ ಮಾಡಿ ಅಂತಿದ್ದಾರೆ ಕ್ರಿಕೆಟ್ ಅಭಿಮಾನಿಗಳು. ಹಾಗೇ ಇದೇ ಸಮಯದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಅಭಿಮಾನಿಗಳು ಹೊಗಳುತ್ತಿದ್ದಾರೆ.












Click it and Unblock the Notifications