ಐಸಿಸಿ ವಿಶ್ವಕಪ್: ಭಾರತ VS ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್ ಫಿಕ್ಸ್! ಅಧಿಕೃತ ಘೋಷಣೆ ಮಾತ್ರ ಬಾಕಿ

ಭಾರತ ತಂಡ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023ರ ಅಖಾಡದಲ್ಲಿ ತನ್ನ ಗೆಲುವಿನ ಓಟ ಮುಂದುವರಿಸಿ, ಸೋಲೇ ಇಲ್ಲದ ಸರದಾರನಾಗಿ ಸೆಮಿಫೈನಲ್ ತಲುಪಿದೆ. ಆದರೆ ಈವರೆಗೆ ಭಾರತದ ವಿರುದ್ಧ ಸೆಮಿಫೈನಲ್ ಪಂದ್ಯ ಆಡಲಿರುವ ತಂಡ ಯಾವುದು? ಅನ್ನೋ ಡೌಟ್ ಇತ್ತು. ಅದ್ರಲ್ಲೂ ಪಾಕಿಸ್ತಾನ ತಂಡ ಮತ್ತೊಮ್ಮೆ ಭಾರತದ ಎದುರಾಳಿ ಆಗುತ್ತಾ? ಅನ್ನೋ ಅನುಮಾನ ಕಾಡುತ್ತಿತ್ತು. ಈಗ ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಪಾಕಿಸ್ತಾನ ತಂಡ ಮನೆಗೆ ಹೋಗೋದು ಗ್ಯಾರಂಟಿ ಆಗಿದೆ.

ಹೌದು, ಐಸಿಸಿ ಏಕದಿನ ವಿಶ್ವಕಪ್-2023 ಭಾರತದಲ್ಲೇ ನಡೆಯುತ್ತಿದೆ. ಭಾರತ ತಂಡ ಕೂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್-2023 ಟೂರ್ನಿಯಲ್ಲಿ ಅಬ್ಬರಿಸ್ತಿದೆ. ಅದು ಯಾವ ಮಟ್ಟಿಗೆ ಅಂದ್ರೆ ಈವರೆಗೂ 8 ಮ್ಯಾಚ್ ಆಡಿರುವ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಒಂದೇ ಒಂದು ಪಂದ್ಯ ಸೋತಿಲ್ಲ.

new-zealand-on-the-cusp-of-semi-final

ಹೀಗಿದ್ದಾಗ ಭಾರತ ತಂಡ ತನ್ನ ಲೀಗ್ ಹಂತದ ಕೊನೇ ಪಂದ್ಯ ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ. ದುರ್ಬಲ ತಂಡ ಅಥವಾ ಕ್ರಿಕೆಟ್ ಶಿಶು ಅಂತಾನೆ ಈ ತಂಡವನ್ನು ಅಂದ್ರೆ ನೆದರ್ಲ್ಯಾಂಡ್ಸ್ ಟೀಂನ ಕರೆಯಲಾಗುತ್ತಿದೆ. ಹೀಗಾಗಿ ಟೀಂ ಇಂಡಿಯಾ ನಾಳಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಬಗ್ಗುಬಡಿಯುವುದು ಗ್ಯಾರಂಟಿ. ಆದರೆ ಈಗ ಭಾರತದ ಸೆಮಿಫೈನಲ್ ಮ್ಯಾಚ್ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

ಭಾರತ VS ನ್ಯೂಜಿಲೆಂಡ್ ಫೈಟ್ ಫಿಕ್ಸ್!

ಹೌದು ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಅಖಾಡದಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಫೈಟ್ ಫಿಕ್ಸ್ ಆಗಿದೆ. ಯಾಕಂದ್ರೆ ಅಂಕಪಟ್ಟಿಯಲ್ಲಿ 2 & 3ನೇ ಸ್ಥಾನ ಪಕ್ಕಾ ಮಾಡಿಕೊಂಡಿರುವ ಇಬ್ಬರು ಫೈನಲ್ ಪ್ರವೇಶಕ್ಕೆ ಬಡಿದಾಡಲಿದ್ದಾರೆ. ಆದರೆ ಭಾರತ ತಂಡ ಯಾರ ವಿರುದ್ಧ ಕದನ ಕಣಕ್ಕೆ ಇಳಿಯುತ್ತದೆ? ಅನ್ನೋ ಪ್ರಶ್ನೆ ಶತಕೋಟಿ ಭಾರತೀಯರನ್ನ ಕಾಡುತ್ತಿತ್ತು. ಇದೀಗ ಶತಕೋಟಿ ಭಾರತೀಯರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅದು ಪಾಕಿಸ್ತಾನದ ಕ್ರಿಕೆಟ್ ತಂಡ ಮಾಡಿಕೊಂಡ ದೊಡ್ಡ ಎಡವಟ್ಟಿನಿಂದಾಗಿ.

ಪಾಕಿಸ್ತಾನ ತಂಡಕ್ಕೆ ಹೀನಾಯ ಹಿನ್ನಡೆ

ಅಷ್ಟಕ್ಕೂ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಫೈಟ್ ಕನ್ಫರ್ಮ್ ಆದ ನಂತರ ಭಾರತ ತಂಡದ ವಿರುದ್ಧ ಫೈಟ್ ಮಾಡಲು ಸೆಮಿಫೈನಲ್ ತಲುಪುವ 4ನೇ ತಂಡ ಯಾವುದು? ಎಂಬ ಪ್ರಶ್ನೆ ಕಾಡುತ್ತಿತ್ತು. ಯಾಕಂದ್ರೆ ನ್ಯೂಜಿಲೆಂಡ್, ಪಾಕಿಸ್ತಾನ & ಅಫ್ಘಾನ್ ತಂಡಗಳ ಅಂಕವು ಇಷ್ಟು ದಿನ ಸಮ ಆಗಿತ್ತು. ಆದರೆ ನಿನ್ನೆ ಅಫ್ಘಾನಿಸ್ತಾನ ತಂಡ ಕೊನೆಯ ಪಂದ್ಯ ಸೋತು ತವರಿಗೆ ಹೋಗಿದೆ. ಹೀಗಿದ್ದಾಗ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ಮೇಲೆ ಗಮನ ನೆಟ್ಟಿತ್ತು.

new-zealand-on-the-cusp-of-semi-final

ಏನಿದೆ ಈಗಿನ ಲೆಕ್ಕಾಚಾರ?

ಹೀಗಿದ್ದಾಗ ಕೊನೆಯದಾಗಿ ನ್ಯೂಜಿಲೆಂಡ್ & ಪಾಕಿಸ್ತಾನ ನಡುವೆ ಸೆಮಿಫೈನಲ್ ತಲುಪಲು ಫೈಟಿಂಗ್ ಬಲು ಜೋರಾಗಿತ್ತು. ಪಾಕಿಸ್ತಾನ ಇಂದು ಇಂಗ್ಲೆಂಡ್ ವಿರುದ್ಧ ಪಂದ್ಯ ಗೆದ್ದರೂ ಅತಿಹೆಚ್ಚು ರನ್‌ರೇಟ್ ಮೂಲಕ ಗೆಲ್ಲಬೇಕಿತ್ತು. ಇದೀಗ ಪಾಕಿಸ್ತಾನ & ಇಂಗ್ಲೆಂಡ್ ಮ್ಯಾಚ್ ಅಂತಿಮ ಹಂತಕ್ಕೆ ಬಂದಿದ್ದು, ಪಾಕಿಸ್ತಾನ ತಂಡ ನ್ಯೂಜಿಲೆಂಡ್ ತಂಡದ ರನ್‌ರೇಟ್ ಟಚ್ ಮಾಡೋಕೆ ಕೂಡ ಆಗೋದಿಲ್ಲ. ಹೀಗಾಗಿ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಎಂಟ್ರಿ ಹಾಕುವ 4ನೇ ತಂಡವಾಗಲಿದೆ.

337 ರನ್ ಗಳಿಸಿ 338 ರನ್ ಗುರಿ ನೀಡಿರುವ ಇಂಗ್ಲೆಂಡ್ ಟೀಂ ಈಗಾಗಲೇ ಪಾಕಿಸ್ತಾನ ಟೀಂ ಹೆಡೆಮುರಿ ಕಟ್ಟಿದೆ. ಹೀಗಾಗಿ, ಸೆಮಿಫೈನಲ್ ಅಖಾಡದಲ್ಲಿ ಭಾರತದ ವಿರುದ್ಧ ಪ್ರಶಸ್ತಿಗಾಗಿ ಫೈಟ್ ಮಾಡುವ ತಂಡವಾಗಿ ನ್ಯೂಜಿಲೆಂಡ್ ಹೊರಹೊಮ್ಮುವುದು ಪಕ್ಕಾ ಆಗಿದೆ. ಭಾರತ & ನ್ಯೂಜಿಲೆಂಡ್ ಕದನ ಕುತೂಹಲ ಕೆರಳಿಸಿದೆ. ಈ ಕುರಿತಾಗಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದೆ. ಹೀಗಾಗಿ ಕಿವೀಸ್ ಪಡೆಯ ಕಿವಿ ಹಿಂಡಿ, ಮನೆ ಕಡೆಗೆ ಕಳುಹಿಸಲು ಭಾರತ ತಂಡ ಸಜ್ಜಾಗಿದೆ. ಒಟ್ನಲ್ಲಿ ಭಾರತ ಈ ಬಾರಿ ಮತ್ತೊಮ್ಮೆ ವಿಶ್ವಕಪ್ ಎತ್ತಿಹಿಡಿದು, ಅಬ್ಬರಿಸುವುದು ಈ ಮೂಲಕ ಪಕ್ಕಾ ಆಗುತ್ತಿದೆ ಅಂತಿದ್ದಾರೆ ಫ್ಯಾನ್ಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+