ಐಸಿಸಿ ವಿಶ್ವಕಪ್: ಭಾರತ 1st ರ‍್ಯಾಂಕ್, ಡಚ್ಚರು ಲಾಸ್ಟ್ ರ‍್ಯಾಂಕ್: ವರ್ಲ್ಡ್ ಕಪ್ ಇತಿಹಾಸದಲ್ಲೇ ಇಂತಹ ಸಾಧನೆ ಇದೇ ಮೊದಲು!

ಐಸಿಸಿ ಏಕದಿನ ವಿಶ್ವಕಪ್ 2023ರ ಲೀಗ್ ಹಂತದ ಅಂತಿಮ ಪಂದ್ಯ ಈಗ ಮುಕ್ತಾಯವಾಗಿ, ಭಾರತ ಕ್ರಿಕೆಟ್ ಲೋಕದಲ್ಲಿ ಭವ್ಯ ಇತಿಹಾಸ ಬರೆದಿದೆ. ಅದರಲ್ಲೂ ಭಾರತದ ನೆಲದಲ್ಲೇ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಜಗತ್ತಿನ ಗಮನ ಸೆಳೆದಿತ್ತು. ಈ ರೀತಿ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಸಂಚಲನ ಸೃಷ್ಟಿಸುತ್ತಿರುವ ಸಮಯದಲ್ಲೇ, ಭಾರತ ಟೀಂ ವಿಶ್ವಕಪ್ ಅಖಾಡದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮಿರ ಮಿರ ಮಿಂಚಿದೆ.

ಮೊದಲೇ ಹೇಳಿದಂತೆ ಭಾರತ ತಂಡವು, ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ 1st ರ‍್ಯಾಂಕ್ ಪಡೆದಿದೆ. ಅದರಲ್ಲೂ ಇಂದು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರಿ ದೊಡ್ಡ ಅಂತರದ ಗೆಲುವು ದಾಖಲಿಸಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಸೇರಿದಂತೆ ಘಟಾನುಘಟಿ ಕ್ರಿಕೆಟ್ ತಂಡಗಳನ್ನು ಬಗ್ಗುಬಡಿದ ಭಾರತ ಅಜೇಯವಾಗಿ ಈಗ ವಿಶ್ವಕಪ್ ಸೆಮಿಫೈನಲ್ ಅಖಾಡಕ್ಕೆ ಧುಮುಕಿದೆ. ಈ ಮೂಲಕ ದೀಪಾವಳಿ ಹಬ್ಬದ ದಿನ, ಭಾರತ ಕ್ರಿಕೆಟ್ ತಂಡ ಅಬ್ಬರಿಸಿದೆ. 18 ಅಂಕ ಗಳಿಸುವ ಮೂಲಕ ತನ್ನ ಬಲ ಪ್ರದರ್ಶನ ಮಾಡಿದೆ.

Netherlands VS India Match Creates Several Records In Cricket History

9ಕ್ಕೆ 9 ಪಂದ್ಯವನ್ನೂ ಗೆದ್ದ ಭಾರತ

ಹೌದು, ಭಾರತ ಏಕದಿನ ವಿಶ್ವಕಪ್ 2023ರ ಟೂರ್ನಿ ಲೀಗ್ ಹಂತದಲ್ಲಿ ಒಟ್ಟಾರೆ 9 ಪಂದ್ಯ ಆಡಿದೆ. ಹೀಗೆ ಆಡಿದ 9ಕ್ಕೆ 9 ಪಂದ್ಯವನ್ನು ಗೆದ್ದು ಬೀಗಿದೆ. ಈ ಮೂಲಕ 9 ಪಂದ್ಯದಲ್ಲಿ ಗೆದ್ದು 18 ಅಂಕ ಗಳಿಸಿದೆ. ಹಾಗೇ +2.570 ರನ್‌ರೇಟ್ ಮೂಲಕ ಮತ್ತೊಂದು ದಾಖಲೆಯ ಬರೆದಿದೆ. ಆಸ್ಟ್ರೇಲಿಯಾ ಟೀಂ ವಿರುದ್ಧ ಮೊದಲ ಪಂದ್ಯವನ್ನ ಆಡಿದ್ದ ಭಾರತ ತಂಡ, 6 ವಿಕೆಟ್ ಭರ್ಜರಿ ಗೆಲುವನ್ನ ದಾಖಲಿಸಿತ್ತು. ಹೀಗೆ ಭಾರತ ತಂಡ ತನ್ನ ಗೆಲುವಿನ ಓಟವನ್ನ ಮುಂದುವರಿಸಿತ್ತು. ಏಕದಿನ ವಿಶ್ವಕಪ್ 2023ರ ಟೂರ್ನಿ 2ನೇ ಪಂದ್ಯದಲ್ಲೂ ಅಫ್ಘಾನಿಸ್ತಾನ ತಂಡದ ವಿರುದ್ಧ 8 ವಿಕೆಟ್ ಗೆಲುವು ದಾಖಲಿಸಿತ್ತು ಭಾರತ.

ಪಾಕಿಸ್ತಾನ ವಿರುದ್ಧವೂ ಗುಡುಗಿದ್ದ ಭಾರತ

ಭಾರತ ತಂಡ, ಏಕದಿನ ವಿಶ್ವಕಪ್ 2023ರ ಟೂರ್ನಿಯ 3ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪಂದ್ಯ ಆಡಿತ್ತು. ಈ ಮ್ಯಾಚ್‌ನಲ್ಲಿ ಕೂಡ ಭರ್ಜರಿ ಜಯ ದಾಖಲಿಸಿದ್ದ ರೊಹಿತ್ ನೇತೃತ್ವದ ಭಾರತ ಟೀಂ, ಬರೋಬ್ಬರಿ 7 ವಿಕೆಟ್ ಅಂತರದ ಜಯ ಕಂಡಿತ್ತು. 4ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 7 ವಿಕೆಟ್ ಅಂತರದಲ್ಲಿ ಸೋಲಿಸಿ ಅಬ್ಬರಿಸಿತ್ತು ಭಾರತ. ಆ ನಂತರ ನ್ಯೂಜಿಲೆಂಡ್ ವಿರುದ್ಧವೂ ಭರ್ಜರಿ 4 ವಿಕೆಟ್‌ನ ಗೆಲುವು ದಾಖಲಿಸಿದ ಭಾರತ ಟೀಂ, ಇಂಗ್ಲೆಂಡ್ ವಿರುದ್ಧ ಶತಕದ ಜಯವನ್ನ ಅಂದ್ರೆ ಭರ್ಜರಿ 100 ರನ್‌ಗಳ ಅಂತರದಲ್ಲಿ ಗೆದ್ದು ಬೀಗಿತ್ತು.

Netherlands VS India Match Creates Several Records In Cricket History

ಡಚ್ಚರಿಗೆ ಡಿಚ್ಚಿ ಕೊಟ್ಟ ಭಾರತ!

ಇನ್ನು ಶ್ರೀಲಂಕಾ ಕ್ರಿಕೆಟ್ ಟೀಂನ ವಿರುದ್ಧ 302 ರನ್ ಅಂತರದ ಗೆಲುವು ಕಂಡಿದ್ದ ಭಾರತ ತಂಡ, ದಕ್ಷಿಣ ಆಫ್ರಿಕಾ ತಂಡವನ್ನು 83 ರನ್‌ಗೆ ಆಲೌಟ್ ಮಾಡಿ 243 ರನ್‌ಗಳ ಅಂತರದ ಜಯ ದಾಖಲಿಸಿತ್ತು. ಅಂತಿಮವಾಗಿ ಇಂದು ನೆದರ್ಲೆಂಡ್ಸ್ ತಂಡದ ವಿರುದ್ಧ 160 ರನ್‌ಗಳ ಅಂತರದ ಗೆಲುವು ಪಡೆದಿದೆ. ಹಾಗಾದರೆ ಹೇಗಿತ್ತು ಭಾರತ ತಂಡದ ಡಚ್ಚರ ವಿರುದ್ಧದ ಈ ದಾಖಲೆಯ ಸವಾರಿ? ಮುಂದೆ ಓದಿ.

ಭಾರತ ತಂಡ 410 ರನ್ ಗಳಿಸಿ ಡಚ್ಚರ ತಂಡಕ್ಕೆ ಅಂದ್ರೆ ನೆದರ್ಲೆಂಡ್ಸ್ ತಂಡಕ್ಕೆ 411 ರನ್ ಗುರಿ ನೀಡಿತ್ತು. ಆದರೆ, ಭಾರತದ ಬೌಲಿಂಗ್ ದಾಳಿಯಲ್ಲಿ ತರಗೆಲೆಯ ರೀತಿ ಕೊಚ್ಚಿಹೋದ ಡಚ್ಚರು 250 ರನ್‌ಗೆ ತಮ್ಮ ಬಿಡಾರ ಖಾಲಿ ಮಾಡಿದರು. ಹೀಗಾಗಿ ನೆದರ್ಲೆಂಡ್ಸ್ ಸೋಲಿನ ಮೂಲಕ ಅಂಕಪಟ್ಟಿಯಲ್ಲಿ ಕೊನೇ ಸ್ಥಾನವನ್ನು ಪಡೆದು ತನ್ನ 2023ರ ಏಕದಿನ ವಿಶ್ವಕಪ್ ಟೂರ್ನಿಯ ಸಂಚಾರ ಮುಗಿಸಿದೆ. ಭಾರತ ಇದೇ ವೇಳೆ ಮೊದಲ ಸ್ಥಾನ ಪಡೆದು ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿದೆ. ಭಾರತವು, ನ್ಯೂಜಿಲೆಂಡ್ ತಂಡವನ್ನ ಸೆಮಿಫೈನಲ್ ಅಖಾಡದಲ್ಲಿ ಎದುರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+