6, 6, 6... ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ಪುಣ್ಯಾತ್ಮ!
ಕ್ರಿಕೆಟ್ ಜಗತ್ತಿನಲ್ಲಿ ಇಂದು ಹೊಸ ಇತಿಹಾಸ ನಿರ್ಮಾಣ ಆಗಿದ್ದು, ಒಂದು ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿ ಹೊಸ ದಾಖಲೆ ಬರೆದಿದ್ದಾನೆ ಈ ಕ್ರಿಕೆಟ್ ಆಟಗಾರ. ಭಾರತದ ಯುವರಾಜ್ ಸಿಂಗ್ ಬಳಿಕ ಮತ್ತೊಮ್ಮೆ ಇಡೀ ಕ್ರಿಕೆಟ್ ಜಗತ್ತು ತಿರುಗಿ ನೋಡುವಂತೆ ನೇಪಾಳದ ಆಟಗಾರ 6 ಬಾಲ್‌ಗೆ 6 ಸಿಕ್ಸರ್ ಬಾರಿಸಿದ್ದಾರೆ! ಹಾಗಾದ್ರೆ ಯಾರದು? ಹೆಂಗಿತ್ತು ಸಿಕ್ಸರ್ ಬಾರಿಸಿದ ಆ ರೀತಿ? ಬನ್ನಿ ನೋಡೋಣ.
ನೇಪಾಳದ ದಿಪೇಂದ್ರ ಸಿಂಗ್ ಐರಿ, ಎಸಿಸಿ ಪುರುಷರ ಪ್ರೀಮಿಯರ್ ಕಪ್ T20 ಪಂದ್ಯದಲ್ಲಿ ಹೀಗೆ ಭರ್ಜರಿ ಸಿಕ್ಸರ್ ಹಬ್ಬ ಮಾಡಿದ್ದಾರೆ. ನೇಪಾಳ ಕ್ರಿಕೆಟ್ ತಂಡವು ಈ ಹಿಂದಿನಿಂದಲೂ ಟಿ20 ಕ್ರಿಕೆಟ್ ಅಂಗಳದಲ್ಲಿ ಭಾರಿ ಸಾಧನೆ ಮಾಡುತ್ತಿದೆ. ಹಲವು ದಾಖಲೆಗಳನ್ನ ಈಗಾಗಲೇ ಇದೇ ನೇಪಾಳ ತಂಡ ತನ್ನ ಹೆಸರಿಗೆ ಬರೆದುಕೊಂಡಿದೆ. ಇಂದು ಕೂಡ ಅಂತಹದ್ದೇ, ದಾಖಲೆಯ ಸೃಷ್ಟಿ ಮಾಡಿದೆ ನೇಪಾಳ ಕ್ರಿಕೆಟ್ ಟೀಂ. ನೇಪಾಳ ಆಟಗಾರ ದಿಪೇಂದ್ರ ಸಿಂಗ್ ಐರಿ ಒಂದೇ ಓವರ್‌ಗೆ ಭರ್ಜರಿ 6 ಸಿಕ್ಸರ್ ಬಾರಿಸಿದ್ದಾರೆ. ಹಾಗಾದ್ರೆ ಯಾರ ವಿರುದ್ಧದ ಪಂದ್ಯದಲ್ಲಿ ಹೀಗೆ 6 ಸಿಕ್ಸರ್ ಬಾರಿಸಿದ್ದಾರೆ ಗೊತ್ತಾ? ಒಂದೊಂದು ಶಾಟ್ ಹೇಗಿತ್ತು ಅಂತಾ ನೋಡಲು ಮುಂದೆ ಓದಿ.

ಅಷ್ಟಕ್ಕೂ ಇಂದು ಖತಾರ್ ವಿರುದ್ಧ ನೇಪಾಳ ಕ್ರಿಕೆಟ್ ಟೀಂ ಅಂತಾರಾಷ್ಟ್ರೀಯ T20 ಪಂದ್ಯ ಆಡುತ್ತಿತ್ತು. ಈ ಪಂದ್ಯದಲ್ಲೇ ದಿಪೇಂದ್ರ ಸಿಂಗ್ ಐರಿ ಹೊಸ ಇತಿಹಾಸ ನಿರ್ಮಿಸಿದ್ದು, ಇಡೀ ಕ್ರಿಕೆಟ್ ಜಗತ್ತು ತಿರುಗಿ ನೋಡುವಂತೆ ಆಟ ಆಡಿದ್ದಾರೆ. ಭಾರತ ಪರವಾಗಿ ಯುವರಾಜ್ ಸಿಂಗ್ ಅವರು 2007ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ 6 ಬಾಲ್‌ಗೆ 6 ಸಿಕ್ಸರ್ ಬಾರಿಸಿದ್ದು ದಾಖಲೆ ಆಗಿತ್ತು. ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಈ ರೀತಿ ಆಟ ಆಡಿ, ಭರ್ಜರಿ 6 ಬಾಲ್‌ಗೆ 6 ಸಿಕ್ಸರ್ ಬಾರಿಸಿದ್ದರು. ಸ್ಟುವರ್ಟ್ ಬ್ರಾಡ್ ವಿರುದ್ಧ, ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿದ್ದರು ಯುವರಾಜ್ ಸಿಂಗ್. ಇದೀಗ ನೇಪಾಳ ಕ್ರಿಕೆಟ್ ಆಟಗಾರ ಯುವಿ ಆಟ ನೆನಪು ಮಾಡಿದ್ದಾರೆ.
Nepal Lion 🦁💪hitting 6 sixes 6️⃣ in six balls 🏏 🔥 🔥 .#ACCMensPremierCup2024 #nepal #Cricket #TATAIPL2024 #NEPvQAT pic.twitter.com/GyosOHIA1z
— 🚹🔞 (@adhikari_saleen) April 13, 2024
ಹೀಗೆ ಯುವರಾಜ್ ಸಿಂಗ್ ಬಳಿಕ ಕೀರಾನ್ ಪೊಲಾರ್ಡ್ ಅವರು, 2021 ರಲ್ಲಿ ಶ್ರೀಲಂಕಾ ತಂಡದ ಅಕಿಲಾ ಧನಂಜಯ ವಿರುದ್ಧ ಈ ಸಾಧನೆ ಮಾಡಿದ್ದರು. ಈಗ ನೇಪಾಳದ ದಿಪೇಂದ್ರ ಸಿಂಗ್ ಐರಿಗೆ ಕೂಡ ಹೊಸ ಕಿರೀಟ ಸಿಕ್ಕಿದೆ. 24 ವರ್ಷದ ಐರಿ, 21 ಎಸೆತಗಳಲ್ಲಿ 3 ಬೌಂಡರಿ & 7 ಸಿಕ್ಸರ್ ಸೇರಿ 64 ರನ್ ಗಳಿಸಿ 304.76 ಸ್ಟ್ರೈಕ್ ರೇಟ್‌ನಲ್ಲಿ ಔಟ್ ಆಗದೆ ಉಳಿದರು. ಹೀಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆ ಮಾಡಿದ 5ನೇ ಬ್ಯಾಟ್ಸ್‌ಮನ್ ಐರಿ ಆಗಿದ್ದು, ಹೊಸ ಇತಿಹಾಸ ನಿರ್ಮಿಸಿದ್ದಾರೆ.
ತಮಾಷೆ ಮಾತೇ ಅಲ್ಲ!
ಹೀಗೆ ಒಂದೇ ಓವರ್‌ನಲ್ಲಿ ಅಷ್ಟೂ ಬೌಲ್‌ಗಳನ್ನ ಸಿಕ್ಸ್ ಬಾರಿಸುವುದು ಸುಲಭದ ಮಾತಲ್ಲ. ಯಾಕಂದ್ರೆ ಬೌಂಡರಿ ಹೊಡೆಯುವುದೇ ಕಷ್ಟ ಎಂಬ ಸ್ಥಿತಿ ಇರುವಾಗ, 6ಕ್ಕೆ 6 ಬಾಲ್‌ಗಳನ್ನ ಬೌಂಡರಿ ಗೆರೆ ದಾಟಿಸೋದು ತುಂಬಾನೆ ಕಷ್ಟದ ಕೆಲಸ. ಆದ್ರೆ ಈ ಕೆಲಸವನ್ನು ನೇಪಾಳದ ಕ್ರಿಕೆಟರ್ ಅದ್ಭುತವಾಗಿ ನೆರವೇರಿಸಿದ್ದಾರೆ. ಮತ್ತೊಂದು ಕಡೆ ದಿಪೇಂದ್ರ ಸಿಂಗ್ ಐರಿಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಗೌರವ ನೀಡಲಾಗುತ್ತಿದೆ. ಹಾಗೆಯೇ 6ಕ್ಕೆ 6 ಬಾಲ್‌ಗಳನ್ನ ಸಿಕ್ಸರ್ ಬಾರಿಸಿದ ಕೆಲವೇ ಕೆಲವು ಲೆಜೆಂಡ್ ಆಟಗಾರರ ಪೈಕಿ, ಇದೀಗ ದಿಪೇಂದ್ರ ಸಿಂಗ್ ಐರಿ ಕೂಡ ಒಬ್ಬರಾಗಿದ್ದಾರೆ. ಈ ಪೈಕಿ ಭಾರತದ ಯುವರಾಜ್ ಸಿಂಗ್ ಮೊದಲಿಗರು ಅನ್ನೋದೆ ಖುಷಿಯ ಸಂಗತಿ.
ವೇಗವಾಗಿ ಬೆಳೆಯುತ್ತಿದೆ ಕ್ರಿಕೆಟ್ ಆಟ!
ಕ್ರಿಕೆಟ್ ಆಟದ ಶ್ರೀಮಂತಿಕೆ & ಸೆಳೆತವೇ ಹೀಗೆ ಎನ್ನಬಹುದು. ಅದ್ರಲ್ಲೂ ಟಿ20 ಫಾರ್ಮೆಟ್ ಶುರುವಾದ ನಂತರ ಕ್ರಿಕೆಟ್‌ಗೆ ಒಂದು ಹೊಸ ಹಾದಿ ಸಿಕ್ಕಂತಾಗಿದೆ. ಕಳೆದ 15 ವರ್ಷಗಳಲ್ಲಿ ಕ್ರಿಕೆಟ್ ಮತ್ತಷ್ಟು ವೇಗವಾಗಿ ಬೆಳೆಯುತ್ತಿದೆ. ಮೊದಲೆಲ್ಲ 50 ಓವರ್‌ಗೆ 250 ರನ್ ಗಳಿಸಿದರೆ ಅದೇ ದೊಡ್ಡದು ಎನ್ನವಂತೆ ಆಗಿತ್ತು. ಆದರೆ ಈಗ, ಟಿ20 ಫಾರ್ಮೆಟ್ ಶುರುವಾದ ನಂತರ 20 ಓವರ್‌ಗೆ ಸುಲಭವಾಗಿ 250 ರನ್ ಗಳಿಸುವ ಸಾಮರ್ಥ್ಯವು ಈಗಿನ ಕಾಲದ ದಾಂಡಿಗರಿಗೆ ಬಂದುಬಿಟ್ಟಿದೆ. ಅದರಲ್ಲೂ ನೆಪಾಳ ಆಟಗಾರ ಈಗ ಮಾಡಿರುವ ಈ ಸಾಧನೆ ಬಗ್ಗೆ, ಇಡೀ ಕ್ರಿಕೆಟ್ ಜಗತ್ತು ಈಗ ಮಾತನಾಡಿಕೊಳ್ಳುತ್ತಿದೆ.












Click it and Unblock the Notifications