ಕ್ರಿಕೆಟ್ ಕೇವಲ ಆಟವಲ್ಲ.. ಅದೊಂದು ಭಾವನೆ: ಭಾರತದಲ್ಲಿ ಕ್ರಿಕೆಟ್ ಕ್ರೇಜ್ ನೋಡಿ ಜಗತ್ತೇ ಸುಸ್ತು ಗುರೂ!

ಭಾರತದಲ್ಲಿ ಕ್ರಿಕೆಟ್ ಕೂಡ ಒಂದು ಧರ್ಮ ಎಂದು ಹೇಳುವವರು ಇದ್ದಾರೆ. ಯಾಕಂದ್ರೆ ಈ ರೀತಿ ನಮ್ಮ ಭಾರತದಷ್ಟು ಕ್ರಿಕೆಟ್ ಆಟವನ್ನು ಇಷ್ಟಪಡುವ ಮತ್ತೊಂದು ದೇಶ ಇಲ್ಲ ಎಂದು ಹೇಳಬಹುದು. ಯಾಕಂದ್ರೆ ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ಶತಕೋಟಿ ಅಭಿಮಾನಿಗಳು ಇದ್ದಾರೆ. ಈ ಮಾತನ್ನ ಇದೀಗ ಮುಂಬೈ ನಗರವು ಮತ್ತೊಮ್ಮೆ ಜಗತ್ತಿನ ಎದುರು ಪ್ರೂವ್ ಮಾಡಿದೆ. ಆ ವಿಡಿಯೋಗಳನ್ನ ನೋಡಲು ಮುಂದೆ ಓದಿ.

2007ರಲ್ಲಿ ಮೊದಲ ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದ್ದ ಭಾರತಕ್ಕೆ 2024 ರಲ್ಲಿ ಮತ್ತೊಮ್ಮೆ ವಿಜಯಲಕ್ಷ್ಮೀ ಒಲಿದು ಬಂದಿದ್ದು ಸಾರ್ಥಕ ಕ್ಷಣಕ್ಕೂ ಸಾಕ್ಷಿ ಆಗಿದೆ. ಹೀಗೆ ಕಪ್ ಗೆದ್ದು ಹಲವು ದಿನಗಳ ನಂತರ ಭಾರತಕ್ಕೆ ಬಂದ ಭಾರತೀಯ ಕ್ರಿಕೆಟ್ ಆಟಗಾರರಿಗೆ ಭರ್ಜರಿ ಸ್ವಾಗತವನ್ನು ಕೋರಲಾಗಿತ್ತು. ಭಾರತೀಯರನ್ನ ಬರಮಾಡಿಕೊಳ್ಳಲು ಲಕ್ಷ ಲಕ್ಷ ಜನರು ಮುಂಬೈ ನಗರದ ಸಮುದ್ರದ ದಡದಲ್ಲಿ ನಿಂತು ಕಾಯುತ್ತಿದ್ದರು. ಹೀಗೆ ಸುಮಾರು 9 ಕಿಲೋ ಮೀಟರ್ ತನಕ ಮೆರವಣಿಗೆಯಲ್ಲಿ ಸಾಗಿ ಬಂದ ಭಾರತದ ಕ್ರಿಕೆಟ್ ಆಟಗಾರರು ಟಿ20 ವಿಶ್ವಕಪ್ ಟ್ರೋಫಿಯನ್ನು ಫ್ಯಾನ್ಸ್‌ಗೆ ತೋರಿಸಿದ್ರು. ಆಗ ಆಕಾಶದಿಂದ ನೆಲ ಹೇಗೆ ಕಾಣುತ್ತಿತ್ತು ಅನ್ನೋ ವಿಡಿಯೋ ಮುಂದೆ ನೋಡಿ.

Mumbai Crowd Shows That How Much The Indians Are Liking The Cricket Game

ಮುಂಬೈ ಪೂರ್ತಿ ಕ್ರಿಕೆಟ್ ಮಯ!

ಟಿ20 ವಿಶ್ವಕಪ್ ಆರಂಭಕ್ಕೆ ಮೊದಲು ಭಾರತವು ಕೂಡ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ, ಅದರಲ್ಲೂ ಫೈನಲ್‌ಗೆ ಹೋಗುವ ಪ್ರಮುಖ ತಂಡಗಳಲ್ಲಿ ಒಂದಾಗಿತ್ತು. ಎಲ್ಲವೂ, ಅಂದು ಕೊಂಡ ರೀತಿಯೇ ನಡೆಯಿತು. ಕೊನೆಗೆ ಫೈನಲ್ ಪಂದ್ಯದಲ್ಲಿ ಭಾರತ ಅದ್ಭುತ ಗೆಲುವನ್ನ ಸಾಧಿಸಿ ವಿಜಯದ ನಗೆ ಬೀರಿತ್ತು. ಹೀಗಾಗಿ ಭಾರತೀಯರು ಕೂಡ ಉಸಿರು ಬಿಗಿ ಹಿಡಿದು ಈ ಕ್ಷಣಕ್ಕಾಗಿ ಕಾಯುತ್ತಿದ್ದರು. ನಿನ್ನೆ ಮುಂಬೈ ನಗರದಲ್ಲಿ ಹಬ್ಬವನ್ನೇ ಆಚರಿಸಿದ್ದು, ವಿಡಿಯೋ ಈಗ ಜಗತ್ತಿನಾದ್ಯಂತ ವೈರಲ್ ಆಗುತ್ತಿವೆ.

ಫುಟ್‌ಬಾಲ್ ರೀತಿ ಸಂಭ್ರಮಾಚರಣೆ!

ಜಗತ್ತಿನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ ಎಂದರೆ ಅದು ಫುಟ್‌ಬಾಲ್ ಎನ್ನಬಹುದು. ಯಾಕಂದ್ರೆ ಫುಟ್‌ಬಾಲ್‌ಗೆ ಇರುವಷ್ಟು ಕ್ರೇಜ್ ಯಾವುದೇ ಕ್ರೀಡೆಗೂ ಇಲ್ಲ. ಆದರೆ ಫುಟ್‌ಬಾಲ್ ರೀತಿಯಲ್ಲೇ ಇದೀಗ ಕ್ರಿಕೆಟ್ ಕೂಡ ಬೆಳೆದು ನಿಲ್ಲುತ್ತಿದೆ. ಕೋಟಿ ಕೋಟಿ ಅಭಿಮಾನಿಗಳನ್ನ ಕ್ರಿಕೆಟ್ ಕೂಡ ಸಂಪಾದನೆ ಮಾಡುತ್ತಿದೆ. ಈ ಮಾತು ಇದೀಗ ಭಾರತದಲ್ಲಿ ಸಾಬೀತು ಕೂಡ ಆಗಿದೆ.

ಒಟ್ನಲ್ಲಿ ಕ್ರಿಕೆಟ್ ಎಂಬುದು ಭಾರತ ದೇಶದಲ್ಲಿ ಒಂದು ಧರ್ಮವಾಗಿ ಬೆಳೆದು ನಿಲ್ಲುತ್ತಿದ್ದು, ಈ ಕ್ರೀಡೆಗೆ ಮತ್ತಷ್ಟು ಉಜ್ವಲ ಭವಿಷ್ಯ ಇದೆ ಎಂದು ಕೆಲವರು ಹೇಳುತ್ತಾರೆ. ಆದರೆ ಕ್ರಿಕೆಟ್ ರೀತಿಯಲ್ಲೇ ಬೇರೆ ಬೇರೆ ಕ್ರೀಡೆಗಳಿಗೂ ಪ್ರೋತ್ಸಾಹ ಸಿಗಬೇಕು ಎಂಬ ಒತ್ತಾಯ ಕೂಡ ಇದೆ. ಹೀಗಾಗಿ ಎಲ್ಲವನ್ನೂ ಈಗ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣ ಆಗಿದೆ. ಆದರೂ ಕ್ರಿಕೆಟ್ ಕ್ರೇಜ್ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದೆ. ಹಾಗೇ ಪಾಶ್ಚಿಮಾತ್ಯ ದೇಶಗಳು ಕೂಡ ಕ್ರಿಕೆಟ್ ಆಟಕ್ಕೆ ಒತ್ತು ನೀಡುತ್ತಿರುವುದು ಗಮನಾರ್ಹ ಸಂಗತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+