MS Dhoni: ಧೋನಿ ಸ್ಟಾರ್ ಕ್ರಿಕೆಟ್‌ ಪ್ಲೇಯರ್‌ ಅಷ್ಟೇ ಅಲ್ಲ; ಬೆಸ್ಟ್‌ ಉದ್ಯಮಿ

ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಮಾಜಿ ನಾಯಕ. ಭಾರತಕ್ಕೆ ಟಿ20 ವಿಶ್ವಕಪ್‌, ಏಕದಿನ ವಿಶ್ವಕಪ್‌ ಹಾಗೂ ಚಾಂಪಿಯನ್‌ ಟ್ರೋಫಿ ಗೆದ್ದ ಕ್ಯಾಪ್ಟನ್‌. ಮೈದಾನದಲ್ಲಿ ಇವರು ಎಷ್ಟು ಕೂಲ್‌ ಎಂಬುದು ಎಲ್ಲರಿಗೂ ಗೊತ್ತು. ಆದರೆ ಮೈದಾನದ ಹೊರಗೆ ಧೋನಿ ಏನೆಲ್ಲಾ ಮಾಡ್ತಾರೆ ಎಂಬುದರ ಪರಿಚಯ ಇಲ್ಲಿದೆ.

ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದಿವೆ. ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಇನ್ನು ಆಡುತ್ತಲೇ ಇದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಮನಸ್ಸು ಗೆಲ್ಲುತ್ತಿದ್ದಾರೆ. ಮೈದಾನದಲ್ಲಿ ಸರಿಯಾದ ಫೀಲ್ಡ್ ಪ್ಲೇಸ್ಮೆಂಟ್‌, ಪರ್ಫೆಕ್ಟ್‌ ಡಿಸಿಜನ್‌, ಕೂಲ್‌ ಕ್ಯಾಪ್ಟನ್‌ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಧೋನಿ ಮೈದಾನದ ಹೊರಗೂ ಸಹ ಇಷ್ಟೇ ಕೂಲ್‌ ಆಗಿ ಉದ್ಯಮವನ್ನು ನಡೆಸುತ್ತಿದ್ದಾರೆ.

MS Dhoni is not just a star cricket player Best businessman

ಧೋನಿ ದೇಶದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಅವರ ನಿವ್ವಳ ಆದಯ 1,040 ಕೋಟಿ ರೂ. ಅವರ ಕ್ರಿಕೆಟ್ ವೃತ್ತಿಜೀವನವು ಅವರ ಗಳಿಕೆಗೆ ಕೊಡುಗೆ ನೀಡಿದೆ. ಇನ್ನು ಧೋನಿ ಆದಾಯವನ್ನು ಸಹ ಅಚ್ಚುಕಟ್ಟಾಗಿ ಕಟ್ಟುತ್ತಾ ಸುದ್ದಿಯಲ್ಲಿರುತ್ತಾರೆ. ಧೋನಿ ಹಲವು ಕಂಪನಿಗಳಲ್ಲಿ ಹೂಡಿಕೆಯನ್ನು ಹೊಂದಿದ್ದಾರೆ. ಅಲ್ಲದೆ ಇವುಗಳು ಸಹ ಅವರ ಆದಯ ಹೆಚ್ಚುವ ಮೂಲಗಳಾಗಿವೆ.

ಬೆಂಗಳೂರಿನಲ್ಲಿದೆ ಧೋನಿ ಸ್ಕೂಲ್

ಎಂಎಸ್‌ ಧೋನಿಗೂ ಬೆಂಗಳೂರಿಗೂ ಸಂಬಂಧವಿದೆ. ಧೋನಿ ಬೆಂಗಳೂರಿನಲ್ಲಿ ಎಂಎಸ್ ಧೋನಿ ಗ್ಲೋಬಲ್ ಶಾಲೆಯನ್ನು ಸಹ ತೆರೆದಿದ್ದಾರೆ. ಇದು CBSE ಆಂಗ್ಲ ಮಾಧ್ಯಮ ಶಾಲೆ. ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ ಅವರೊಂದಿಗೆ ಪಾಲುದಾರಿಕೆಯೊಂದಿದೆ, ಈ ಶಾಲೆಯು ವಿದ್ಯಾರ್ಥಿಗಳಿಗೆ ವಿಭಿನ್ನ ರೀತಿಯ ಶೈಕ್ಷಣಿಕ ಅನುಭವ ನೀಡುತ್ತದೆ.

ಧೋನಿ ಪಾನೀಯ ಬ್ರಾಂಡ್ ಮತ್ತು ಚಾಕೊಲೇಟ್ ಕಂಪನಿ 7ಇಂಕ್ ಬ್ರೂಸ್‌ನಲ್ಲಿ ಹೂಡಿಕೆಗಳನ್ನು ಮಾಡಿದ್ದಾರೆ. ಇದು ಧೋನಿಯ ಸಿಗ್ನೇಚರ್ ಹೆಲಿಕಾಪ್ಟರ್ ಶಾಟ್‌ನಿಂದ ಪ್ರೇರಿತವಾಗಿ ಕಾಪ್ಟರ್ 7 ಅನ್ನು ಪ್ರಾರಂಭಿಸಿತು.

MS Dhoni is not just a star cricket player Best businessman

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಪ್ರಸಿದ್ಧ ಉಡುಪು ಬ್ರ್ಯಾಂಡ್ ಸೆವೆನ್‌ನ ಮಾಲೀಕ. ಜಾಹೀರಾತಿನಿಂದಲೂ ಅವರು ಸಾಕಷ್ಟು ಆದಾಯ ಗಳಿಸುತ್ತಾರೆ. ಎಂಎಸ್ ಧೋನಿ ಅವರು ತಮ್ಮ ತವರು ರಾಂಚಿಯಲ್ಲಿ ಮಾಹಿ ರೆಸಿಡೆನ್ಸಿ ಹೆಸರಿನ ಹೋಟೆಲ್ ಅನ್ನು ಹೊಂದಿದ್ದಾರೆ. ಇದು Airbnb, Oyo ಮತ್ತು ಮೇಕ್ ಮೈ ಟ್ರಿಪ್‌ನಂತಹ ಜನಪ್ರಿಯ ಆಪ್‌ಗಳ ಪಟ್ಟಿಯಲ್ಲಿದೆ.

ಸ್ಪೋರ್ಟ್ಸ್ ಫಿಟ್

ಮಹೇಂದ್ರ ಸಿಂಗ್ ಧೋನಿಗೆ ಫಿಟ್ನೆಸ್‌ ಬಗ್ಗೆ ಆಸಕ್ತಿ ಇದೆ. ಇವರು ಫಿಟ್ ಆಗಿರಲು ಬೇಕಾದ ಎಲ್ಲ ಕಸರತ್ತುಗಳನ್ನು ಮಾಡುತ್ತಾರೆ. ಹೀಗಾಗಿಯೇ ಇವರು ಈ ಕ್ಷೇತ್ರದಲ್ಲೂ ಹೂಡಿಕೆ ಮಾಡಿದ್ದಾರೆ. ಇವರು ಜಿಮ್‌ ಹೊಂದಿದ್ದು, ಇದರ ಹೆಸರು ಧೋನಿ ಸ್ಪೋರ್ಟ್ಸ್ ಫಿಟ್. ಮಾಹಿ ಅದರ ಮಾಲೀಕ. ಈ ಜಿಮ್ ದೇಶಾದ್ಯಂತ 200 ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಧೋನಿ ಅವರ ಅತ್ತೆ ಶೀಲಾ ಸಿಂಗ್ ಅವರು ಬಹುಕೋಟಿ ವ್ಯವಹಾರದ ಉದ್ಯಮವಾಗಿರುವ ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್‌ನ ಸಿಇಒ ಕೂಡ ಆಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ತಮ್ಮ ವಿವಿಧ ವ್ಯವಹಾರಗಳ ಮೂಲಕ ಕ್ರಿಕೆಟ್ ಐಕಾನ್ ಆಗಿ ತಮ್ಮ ಸ್ಥಾನಮಾನವನ್ನು ಭದ್ರಪಡಿಸಿಕೊಳ್ಳುತ್ತಾರೆ.

ಧೋನಿ ಕೋವಿಡ್‌ ಸಮಯದಲ್ಲಿ ಕೃಷಿ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರಿ. ಅಲ್ಲದೆ ತಮ್ಮ ತೋಟದಲ್ಲಿ ನಾನಾ ವಿದಧ ತರಾಕಾರಿ ಬೆಳೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+