ಎಂ.ಎಸ್. ಧೋನಿ ಮತ್ತು ರಿಷಭ್ ಪಂತ್ ಪಾರ್ಟಿ ವಿಡಿಯೊ ಭಾರಿ ವೈರಲ್
ಟೀಮ್ ಇಂಡಿಯಾ ಕ್ರಿಕೆಟ್‌ನ ಮಾಜಿ ನಾಯಕ ಎಂ.ಎಸ್. ಧೋನಿ ಹಾಗೂ ಹಾಲಿ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಒಟ್ಟಿಗೆ ಪಾರ್ಟಿ ಮಾಡುತ್ತಿರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅದರಲ್ಲೂ ಇದರಲ್ಲಿ ಪಂತ್ ಫುಲ್ ಕುಡಿದವಂತೆ ಎಂಜಾಯ್ ಮಾಡಿರುವ ದೃಶ್ಯ ಇದೀಗ ಭಾರಿ ಚರ್ಚೆಗೂ ಕಾರಣವಾಗಿದೆ.
ಎಂ.ಎಸ್. ಧೋನಿ ಹಾಗೂ ರಿಷಭ್ ಪಂತ್ ಒಟ್ಟಿಗೆ ಪಾರ್ಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಸ್ನೇಹಿತರೊಂದಿಗೆ ಖಾಸಗಿ ಸ್ಥಳದಲ್ಲಿ ನಡೆದ ಈ ಸಮಾರಂಭದ ದೃಶ್ಯಗಳು ತೀವ್ರ ಚರ್ಚೆಗೆ ಕಾರಣವಾಗಿವೆ. ಹೋಟೆಲ್ ಕೋಣೆಯಂತಿರುವ ಜಾಗದಲ್ಲಿ ನಡೆದ ಈ ಪಾರ್ಟಿಯ ದೃಶ್ಯಾವಳಿಯಲ್ಲಿ ರಿಷಭ್ ಪಂತ್ ಅವರು ಹಿರಿಯ ವ್ಯಕ್ತಿಯೊಬ್ಬರ ಜೊತೆ ಕುಳಿತು ಸಂಭಾಷಣೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ರಿಷಭ್ ಪಂತ್ ಎಂಜಾಯ್‌ಮೆಂಟ್ ವಿಡಿಯೋ ವೈರಲ್
ರಿಷಭ್ ಪಂತ್ ಅವರ ನಡೆ-ನುಡಿಗಳು ಮದ್ಯದ ಅಮಲಿನಲ್ಲಿರುವಂತೆ ಕಾಣಿಸುತ್ತಿದ್ದು, ಮೇಜಿನ ಮೇಲೆ ಬಿಯರ್ ಕ್ಯಾನ್‌ಗಳು ಮತ್ತು ಕಾಕ್‌ಟೇಲ್‌ಗಳು ಇರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇದೇ ವೇಳೆ ಧೋನಿ ಕೂಡ ಅಲ್ಲಿ ಹಾಜರಿದ್ದು, ಫೋಟೊ ತೆಗೆಸಿಕೊಂಡು ಪಂತ್ ಬಳಿ ಪಿಸು ಪಿಸು ಮಾತಾಡಿದ್ದಾರೆ. ಈ ಮಾತುಗಳೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿವೆ.
ಧೋನಿ, ಪಂತ್ ನಡುವೆ ಇದೆ ಉತ್ತಮ ಬಾಂಧವ್ಯ
ರಿಷಭ್ ಪಂತ್ ಭಾರತ ತಂಡದ ಪ್ರಮುಖ ಆಟಗಾರನಾಗಿ ಬೆಳೆದಂತೆ ಧೋನಿ ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಪಂತ್ ರಾಂಚಿಯಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಧೋನಿ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಜೊತೆಗೆ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆಯೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು.
2022ರ ಡಿಸೆಂಬರ್ 30ರಂದು ರಿಷಭ್ ಪಂತ್ ಭೀಕರ ಕಾರು ಅಪಘಾತಕ್ಕೆ ಈಡಾಗುವ ಮುನ್ನವೂ ದುಬೈನಲ್ಲಿ ಧೋನಿ ಅವರೊಂದಿಗೆ ಕ್ರಿಸ್‌ಮಸ್ ಆಚರಣೆ ಮಾಡಿದ್ದರು. ಅಲ್ಲಿಂದ ಮರಳಿ ತಾಯಿಗೆ ಹೊಸ ವರ್ಷದ ಹುಡುಗೊರೆ ನೀಡಲು ಡೆಹ್ರಾಡೂನ್‌ಗೆ ಪ್ರಯಾಣಿಸುವಾಗ ಈ ದುರಂತ ಸಂಭವಿಸಿತ್ತು. ಆ ಅಪಘಾತದಿಂದ ಪವಾಡಸದೃಶವಾಗಿ ಪಾರಾಗಿದ್ದ ಪಂತ್, ಸುದೀರ್ಘ ಚಿಕಿತ್ಸೆ ಮತ್ತು ಚೇತರಿಕೆಯ ನಂತರ ಮತ್ತೆ ಕ್ರಿಕೆಟ್‌ಗೆ ಯಶಸ್ವಿಯಾಗಿ ಮರಳಿದ್ದಾರೆ.
ಸರಣಿಗೆ ಸಜ್ಜಾಗುತ್ತಿರುವ ರಿಷಭ್ ಪಂತ್
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ರೇಸ್‌ನಲ್ಲಿರುವ ಭಾರತ ತಂಡಕ್ಕೆ ರಿಷಭ್ ಪಂತ್ ಪ್ರಮುಖ ಅಸ್ತ್ರವಾಗಿದ್ದಾರೆ. ರೆಡ್-ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಫಾರ್ಮ್ ಕಾಯ್ದುಕೊಂಡಿರುವ ಪಂತ್, ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಪ್ರಮುಖ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದಾರೆ. ಈ ನಡುವೆ ಹೊರಬಿದ್ದಿರುವ ಈ ವೈರಲ್ ವಿಡಿಯೊ ಸದ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದಲ್ಲದೆ, ಚರ್ಚೆಗೂ ಕಾರಣವಾಗಿದೆ. ಬಹುತೇಕ ಮಂದಿ ಈ ಪಾರ್ಟಿಗೆ ಥಮ್ಸ್‌ಅಪ್ ನೀಡಿ ಎಂಜಾಯ್.. ಎಂದಯ ಕಮೆಂಟ್ ಮಾಡಿದ್ದಾರೆ.
Rishab 😂😂😂 pic.twitter.com/M93dlPsGwF
— 𝗦💛 (@mostlydhoni78) September 2, 2026


Click it and Unblock the Notifications
