Mohammed Siraj: ಕ್ರಿಕೆಟ್‌ ಇತಿಹಾಸದಲ್ಲೇ ವೇಗದ ಎಸೆತ ಬೌಲ್ ಮಾಡಿದ ಡಿಎಸ್‌ಪಿ ಸಿರಾಜ್‌!

ಅಡಿಲೇಡ್‌ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಹೊಸ ದಾಖಲೆ ಬರೆದಿದ್ದಾರೆ! ಸಿರಾಜ್ ಗಂಟೆಗೆ 181 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ ಎಂದು ಪ್ರಸಾರಕರು ಮಾಹಿತಿ ನೀಡಿದ್ದು ಎಡವಟ್ಟಿಗೆ ಕಾರಣವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್‌ಗಳ ಸುನಾಮಿಯನ್ನೇ ಸೃಷ್ಟಿಸಿತು. ಡಿಎಸ್‌ಪಿ ಸಿರಾಜ್ ಎನ್ನುವ ಹ್ಯಾಷ್‌ಟ್ಯಾಗ್‌ನಲ್ಲಿ ಸಾವಿರಾರು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ.

ಆಸ್ಟ್ರೇಲಿಯಾ ಇನ್ನಿಂಗ್ಸ್‌ನ 25ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. 25ನೇ ಓವರ್ ನ 5ನೇ ಎಸೆತವನ್ನು ಎಸೆದಾಗ ಅವರ ಬೌಲಿಂಗ್ ವೇಗ ಗಂಟೆಗೆ 181.6 ಕಿ.ಮೀ ಎಂದು ತೋರಿಸಿತು. ಇದನ್ನು ನೋಡಿ ಸಿರಾಜ್ ಕೂಡ ಒಂದು ಕ್ಷಣ ಗಾಬರಿಯಾದರು. ಪ್ರೇಕ್ಷಕರು ಈ ಸಂಖ್ಯೆಯನ್ನು ನೋಡಿ ತಲೆ ಮೇಲೆ ಕೈಹೊತ್ತುಕೊಂಡರು.

mohammed siraj fast ball cricket history

ಮೊಹಮ್ಮದ್ ಸಿರಾಜ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಕೂಡ ಬೌಲಿಂಗ್ ಮಾಡುವುದಿಲ್ಲ. ಅವರು ಗಂಟೆಗೆ 135-140 ಕಿ.ಮೀ ವೇಗದ ಆಸುಪಾಸಿನಲ್ಲಿ ಬೌಲಿಂಗ್ ಮಾಡುತ್ತಾರೆ. ಆದರೆ 181.6 ಕಿ.ಮೀ. ಎನ್ನುವುದು ಅಸಾಧ್ಯ ಎನ್ನುವ ದಾಖಲೆ, ಈವರೆಗೆ ಅತ್ಯಂತ ವೇಗದ ಎಸೆತ ಇರುವುದೇ ಗಂಟೆಗೆ 161.3 ಕಿಮೀ ಅದನ್ನು ಮುರಿಯಲು ಇದುವರೆಗೂ ಯಾರಿಗೂ ಆಗಿಲ್ಲ. ಮೊಹಮ್ಮದ್ ಸಿರಾಜ್‌ ಅದಕ್ಕಿಂತ 20 ಕಿ.ಮೀ. ಹೆಚ್ಚಿಗೆ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ ಎಂದು ತೋರಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಯಿತು. ಸ್ಪೀಡ್ ಗನ್ ಎಡವಟ್ಟಿನಿಂದ ಈ ರೀತಿ ಆಗಿದೆ ಎಂದು ಬಳಿಕ ಸ್ಪಷ್ಟನೆ ನೀಡಲಾಯಿತು.

ಶೋಯೆಬ್ ಅಖ್ತರ್ ಹೆಸರಿನಲ್ಲಿದೆ ವಿಶ್ವ ದಾಖಲೆ

ಮಾಹಿತಿ ಪ್ರಕಾರ, ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ 2023ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗಂಟೆಗೆ 161.3 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದು ಈವರೆಗಿನ ದಾಖಲೆಯಾಗಿದೆ. ಈವರೆಗೂ ಈ ದಾಖಲೆಯನ್ನು ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ.

ಸಿರಾಜ್ ಅತಿರೇಖದ ವರ್ತನೆ

ಮೊಹಮ್ಮದ್ ಸಿರಾಜ್ ಎರಡನೇ ದಿನದಾಟದ ವೇಳೆ ಅತಿರೇಖದ ವರ್ತನೆ ತೋರುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಶತಕ ಗಳಿಸಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಟ್ರಾವಿಸ್‌ ಹೆಡ್‌ರನ್ನು ಸಿರಾಜ್ ಕ್ಲೀನ್ ಬೌಲ್ಡ್‌ ಮಾಡುತ್ತಿದ್ದಂತೆ ಅವರನ್ನು ನಿಂದಿಸಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಇದಕ್ಕೂ ಮುನ್ನ ಬ್ಯಾಟರ್ ಮೇಲೆ ಚೆಂಡು ಎಸೆಯುವ ಮೂಲಕ ಅತಿರೇಖದ ವರ್ತನೆ ತೋರಿದ್ದರು. ಸಿರಾಜ್ ಬೌಲಿಂಗ್ ಮಾಡುವ ಕೊನೆಯ ಕ್ಷಣದಲ್ಲಿ ಕ್ರೀಸ್‌ನಲ್ಲಿದ್ದ ಲ್ಯಾಬುಶಾನೆ ವಿಚಲಿತರಾಗಿ ಬ್ಯಾಟಿಂಗ್ ಮಾಡದೆ ಹಿಂದೆ ಸರಿದರು. ಇದರಿಂದ ಸಿಟ್ಟಿಗೆದ್ದ ಮೊಹಮ್ಮದ್ ಸಿರಾಜ್ ಚೆಂಡನ್ನು ಬ್ಯಾಟರ್ ಕಡೆ ಎಸೆದರು. ಬಾಲ್ ಸ್ಟಂಪ್‌ ಮತ್ತು ಬ್ಯಾಟರ್ ಗೆ ತಾಗಲಿಲ್ಲವಾದರೂ ಇದು ಐಸಿಸಿ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+