ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾದ ಸ್ವಿಂಗ್ ಬೌಲರ್!
ಟೀಮ್ ಇಂಡಿಯಾದ ಸ್ವಿಂಗ್ ಬೌಲರ್ ಮೊಹಮ್ಮದ್ ಶಮಿ, ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಅವರ ಬೆಂಗಳೂರಿನ ಎನ್‌ಸಿಎನಲ್ಲಿ ಪುರ್ನವಸತಿ ಪಡೆಯುತ್ತಿದ್ದು, ಇದೇ ವೇಳೆ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಶಮಿ ಬೌಲಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ.
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿ, ಅಭಿಮಾನಿಗಳ ಮನ ಗೆದ್ದಿದ್ದರು. ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾದ ಬಳಿಕ ಟೀಮ್ ಇಂಡಿಯಾ ಸೇರಿಕೊಂಡ ಮೊಹಮ್ಮದ್ ಶಮಿ, ನಿಶ್ಚಿತವಾಗಿ ಎದುರಾಳಿಗಳನ್ನು ಕಾಡಿದ ಬೌಲರ್. ಇವರ ಶಿಸ್ತು ಬದ್ಧ ದಾಳಿಯ ನೆರವೆನಿಂದ ಟೀಮ್ ಇಂಡಿಯಾ ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ಭಾರತ ಫೈನಲ್ ಗೆ ಅರ್ಹತೆ ಪಡೆದಿತ್ತು ಎಂದು ಹೇಳಿದರೆ ಸುಳ್ಳಾಗಲಾರದು.

ಏಕದಿನ ವಿಶ್ವಕಪ್‌ನಲ್ಲಿ ಅಬ್ಬರ
ಶಮಿ ಕೊನೆಯ ಬಾರಿಗೆ 2023ರ ಏಕದಿನ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಟೂರ್ನಿಯಲ್ಲಿ ಭಾರತ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅವರು ಕೇವಲ 7 ಪಂದ್ಯಗಳಲ್ಲಿ 27 ವಿಕೆಟ್ ಪಡೆದಿದ್ದರು.
ಶಮಿ ಐಪಿಎಲ್ 2024 ರ ಒಂದೇ ಒಂದು ಪಂದ್ಯವನ್ನು ಆಡಿಲ್ಲ ಅಥವಾ ಅವರು ಟಿ 20 ವಿಶ್ವಕಪ್‌ನ ಭಾಗವಾಗಿಲ್ಲ. ಆದರೆ, 33ರ ಹರೆಯದ ಬೌಲರ್ ತಮ್ಮ ಪುನರಾಗಮನಕ್ಕೆ ತಾಲೀಮು ಆರಂಭಿಸಿರುವುದು ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ.
ಮೊಹಮ್ಮದ್ ಶಮಿ ಬೌಲಿಂಗ್ ಅಭ್ಯಾಸ
ಶಮಿ ಫೆಬ್ರವರಿ 26 ರಂದು ಆಪರೇಷನ್ ಮಾಡಿಸಿಕೊಂಡಿದ್ದಾರೆ. ಶಮಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತರಬೇತಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ಗಾಯವು ನನ್ನನ್ನು ಮೈದಾನದಿಂದ ಹೊರಗಿಟ್ಟಿತ್ತು.

ಆದರೆ ಅದು ನನ್ನನ್ನು ಹೆಚ್ಚು ಕಾಲ ಮೈದಾನದಿಂದ ದೂರ ಉಳಿಸಲು ಸಾಧ್ಯವೇ ಇಲ್ಲ. ಶೀಘ್ರದಲ್ಲೇ ನಾನು ಮೈದಾನಕ್ಕೆ ಮರಳುತ್ತೇನೆ ಮತ್ತು ನನ್ನ ಸ್ಥಾನವನ್ನು ಮರಳಿ ಪಡೆಯುತ್ತೇನೆ" ಎಂದು ಮೊಹಮ್ಮದ್ ಶಮಿ ವೀಡಿಯೊದ ಶೀರ್ಷಿಕೆಯಲ್ಲಿ ಬರೆದು ಕೊಂಡಿದ್ದಾರೆ.












Click it and Unblock the Notifications